#ಹುಳಿಯ_ರಾಜ_ಅಮಟೆಕಾಯಿ
#ನಮ್ಮ_ಮನೆಯ_ಅಮಟೆಕಾಯಿ_ಮರ_ಹೇಳುತ್ತದೆ_ಗೆಳೆತನ_ಕಥೆ
#ವಿವಿದ_ಹಂತದ_ಅಮಟೆಕಾಯಿ_ಉಪ್ಪಿನಕಾಯಿಗಳು
#ಹುಳಿ_ಸಿಹಿಯ_ಉಪ್ಪಿನಕಾಯಿ_ಹೀಗೆ_ತರಹಾವಾರಿ_ರುಚಿಯ_ಖಾದ್ಯಗಳು
ನಮ್ಮ ಮನೆಯ ಅಮಟೆಕಾಯಿ ಮರ ನನ್ನ ಮತ್ತು ನನ್ನ ಊರಿಗೆ 6 ಕಿಮಿ ದೂರದ ಘಂಟಿನ ಕೊಪ್ಪದ ಸ್ಟಾಮಿ ರಾವ್ ಗೆಳೆತನದ ಖಾಯಂ ನೆನಪಿನ ಮರ.
ಘಂಟಿನ ಕೊಪ್ಪದ ಹಿರೇನಾಯಕರ ಪುತ್ರ ಸ್ವಾಮಿ ರಾವ್ ಅವರ ಮನೆಯ ಅಮಟೆಕಾಯಿ ಮರದ ರೆಂಬೆ ತಂದು ನನ್ನ ಮನೆ ಹಿತ್ತಲಲ್ಲಿ ಅವರೇ 1997 ರಲ್ಲಿ ನಟ್ಟಿದ್ದರು ಅದು ಮೊದಲ ಫಸಲು ನೀಡಿದಾಗ ಅವರ ಮನೆಗೆ ಕಳಿಸಿದ್ದೆ.
ಈಗ ಸ್ವಾಮಿ ರಾವ್ ಇಹಲೋಕ ತ್ಯಜಿಸಿದ್ದಾರೆ ಆದರೆ ಅವರ ನೆನಪು ಸದಾ ಹಸಿರಾಗಿಡುವ ಅಮಟೆಕಾಯಿ ಮರ ಮತ್ತು ಅದರ ರೆಂಬೆಗಳನ್ನು ನನ್ನ ರಬ್ಬರ್ ತೋಟದ ಅಂಚಿನಲ್ಲಿ ನಾಟಿ ಮಾಡಿದ್ದರಿಂದ ಅಲ್ಲೂ ಪಸರಿಸಿದೆ.
ಮಾವಿನಕಾಯಿ ಮಿಡಿ ಆಗುವ ಕಾಲಕ್ಕೆ ಅಮಟೆಕಾಯಿ ಮಿಡಿಗಳು ಸಿಗುತ್ತದೆ ನಂತರ ವಿವಿದ ಹಂತದ ಬೆಳವಣಿಗೆಯ ಅಮಟೆಕಾಯಿ ಮುಂದಿನ ಭೂಮಿ ಹುಣ್ಣಿಮೆ ತನಕ ಹಣ್ಣಾಗಿ ಸಿಗುತ್ತದೆ.
ಅಮಟಿ ಕಾಯಿಯ ಮಿಡಿ, ಹೋಳು, ಕೊಚ್ಚು ಈ ರೀತಿ ವಿವಿದ ಉಪ್ಪಿನ ಕಾಯಿ, ಅಮಟಿ ಕಾಯಿ ಬೆಳೆದು ಗೊರಟಾದಾಗ ಸಿಹಿ ಉಪ್ಪಿನಕಾಯಿ, ಮೇಲೋಗರ ಮಾಡಿದರೆ ಅಮಟೆಕಾಯಿ ಚಿಗುರು - ಹೂವಿನಿಂದ ಚಟ್ನಿ, ಗೊಜ್ಜು, ತಂಬುಳಿ ಆಗುತ್ತದೆ.
Comments
Post a Comment