#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ-5
(ಕೆ.ಅರುಣ್ ಪ್ರಸಾದ್)
ಮೊನ್ನೆ ಸೊರಬದ ಶಾಸಕರಾದ ಕುಮಾರ್ ಬಂಗಾರಪ್ಪ ಅವರು ತಮ್ಮ ಖಾಸಾ ಸಹೋದರ ಹಾಗು ರಾಜಕೀಯ ವಿರೋದಿ ಆದ ಮದುಬಂಗಾರಪ್ಪರ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ, ಮದುಬಂಗಾರಪ್ಪ ವಿಧಾನಸಭಾ ಚುನಾವಣೆಯಲ್ಲಿ ಸೋತು, ಮಧ್ಯಂತರ ಲೋಕ ಸಭಾ ಚುನಾವಣೆಯಲ್ಲೂ ಸೋತು ಶಿವಮೊಗ್ಗ ಜಿಲ್ಲೆಯ ನೀರಾವರಿಗೆ ನೂರಾರು ಕೋಟಿ ಮಂಜೂರು ಮಾಡಿಸಿದ್ದಾಗಿ ಹೇಳುತ್ತಿರುವುದರಿಂದ ಅವರನ್ನ ಪುನಃ ಸೋಲಿಸಿ ಅಂತ ಕರೆ ನೀಡಿದರು.
ಈ ಬಗ್ಗೆ ಅನೇಕರು ಅನೇಕ ರೀತಿ ಚಚಿ೯ಸಿರಬಹುದು, ಗೆದ್ದವರು ಅನುದಾನ ತರಲಾರದ್ದಕ್ಕಿ೦ತ ಸೋತವರೆ ವಾಸಿ ಅಂತ.
ಈ ತಕ೯ ಸರಿ ಕೂಡ, ಪ್ರಜಾಪ್ರಭುತ್ವ ವ್ಯವಸ್ಥೆ ಸವಾ೯ದಿಕಾರ ಆದರೆ ಮಾತ್ರ ಇದು ಸಾಧ್ಯ ಅಂತ ಬಿಜೆಪಿಯವರು ಹೇಳುತ್ತಿರುವುದು ಸರಿಯೇ ಆದರೆ ....
ರಾಹುಲ್ ಗಾಂಧಿ ಎದರು ಅಮೇಥಿ ಕ್ಷೇತ್ರದಲ್ಲಿ ಸೋತ ಕಿರುತೆರೆ ನಟಿ ಸ್ಮೃತಿ ಇರಾನಿ ಕೇಂದ್ರ ಸಚಿವೆ ಆಗಿ ಗೆದ್ದ ರಾಹುಲಗಿ೦ತ ಹೆಚ್ಚು ಅಭಿವೃದ್ದಿ ಮಾಡಿದ ಉದಾಹರಣೆ ಇದೆ.
ಅಷ್ಟೆ ಏಕೆ ನಮ್ಮ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಗೋಡರನ್ನ ಸೋಲಿಸಿ ಎಲ್.ಟಿ.ಹೆಗ್ಗಡೆ ಕಾಂಗ್ರೆಸ್ ನಿಂದ ಶಾಸಕರಾದರು ಆದರೆ ಮುಖ್ಯ ಮಂತ್ರಿ ಗುಂಡುರಾವ್ ರು ಬಂಗಾರಪ್ಪರ ಮೇಲಿನ ರಾಜಕೀಯ ದ್ವೇಷಕ್ಕಾಗಿ ಸೋತ ಕಾಗೋಡರನ್ನ ಎ೦.ಎಲ್.ಸಿ ಮಾಡಿ ಮಂತ್ರಿ ಮಾಡಿದ್ದರು!
ಹೀಗೆ ಸಾಗಿದೆ ನಮ್ಮ ಪ್ರಜಾಪ್ರಭುತ್ವ, ಯಾರು ಉತ್ತಮರು ಇಲ್ಲಿ ಅಂತ ಹುಡುಕಿದರೆ ಎಲ್ಲರೂ ಅವರೇ ಅಲ್ಲವೆ?
ಇದಕ್ಕಾಗಿ ಚುನಾವಣೆ ಬೇಕೆ ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿದು ಬಿಡುತ್ತದೆ.
Comments
Post a Comment