#ನಾನೇ_ನನ್ನ_ಕೇಶವಿನ್ಯಾಸಗಾರ.
#ನನ್ನ_ಕೊನೆಯ_ಸಲೂನ್_ಕ್ಷೌರ_ಮಾರ್ಚ್_2020.
#ಕೊರಾನದಿಂದ_ಬದಲಾದ_ಪದ್ದತಿಗೆ_ಮೂರು_ವರ್ಷ_ಆಯಿತು.
ಬಾಲ್ಯದಿಂದಲೇ ಆನಂದಪುರಂನ ಆ ಕಾಲದ ಅದುನಿಕ ಸಲೂನ್ ರಾಮಣ್ಣರಿಂದ ತಲೆಗೂದಲ ಕ್ಷೌರ ಅಂದರೆ ಅಕ್ಷರಶಃ ನೋವಿನ ನರಕ, ಆ ಕಾಲದಲ್ಲಿ ಇಂಗ್ಲೆಂಡ್ ನಿಂದ ಆಮದಾಗುತ್ತಿದ್ದ ಕ್ಲಿಪ್ಪರ್ ಗಳ೦ತು ಜೀವ ತೆಗೆದಂತೆ ಆಗುತ್ತಿತ್ತು ಆದರೂ ಅದನ್ನು ಬಳಸುವುದು ಸಲೂನ್ ಮಾಲಿಕರ ಪ್ರತಿಷ್ಟೆ ಆಗಿತ್ತು.
ನಂತರ ಗಾಂಧೀಜಿ ಆತ್ಮಚರಿತ್ರೆ ಸತ್ಯಾನ್ವೇಷಣೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡಕ್ಕೆ ಅನುವಾದಿಸಿದ ಪುಸ್ತಕ 5 ನೇ ತರಗತಿಯಲ್ಲೇ ನಮ್ಮ ತಂದೆ ಆನ೦ದಪುರಂನ ವೇದನಾರಾಯಣ ಭಟ್ಟರ ಮನೆಯಿಂದ ತಂದುಕೊಟ್ಟಿದ್ದರು ಅದರಲ್ಲಿ ಅವರ ಸ್ವಂತ ಕ್ಷೌರದ ಬಗ್ಗೆ ಓದಿ ವಿಪಲ ಪ್ರಯತ್ನವೂ ಆಗಿತ್ತು.
2020 ರ ಮಾರ್ಚ್ 24 ರಿಂದ ಕೊರಾನಾ ಲಾಕ್ ಡೌನ್ ಸ್ವಯಂ ಕ್ಷೌರಕ್ಕೆ ಪ್ರೇರಣೆ ಆಯಿತು, ನನ್ನ ಖಾಯಂ ಕ್ಷೌರ ಮಾಡುತ್ತಿದ್ದ ಕೃಷ್ಣ ( ಅವರ ಅಜ್ಜ ನಾರಾಯಣಪ್ಪ, ಅವರ ತಂದೆ ಮುನಿಯಣ್ಣ, ಅವರ ಮಗ) ಮತ್ತು ಅವರ ನಾಲ್ಕು ತಲೆಮಾರಿನ ಸಂಬಂದ ಈ ರೀತಿ ಮುಕ್ತಾಯವಾದೀತೆಂದು ಗೊತ್ತೇ ಇರಲಿಲ್ಲ.
ಈಗಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಟ್ರಿಮ್ಮರ್ ಗಳಿಂದ ಮೂರು ವರ್ಷದಲ್ಲಿ ನಾನೇ ಸ್ವಯಂ ಕ್ಷೌರ ಮಾಡಿಕೊಳ್ಳುವ ಅಭ್ಯಾಸ ಆಗಿದೆ.
ಕೊರಾನದ ಮೊದ ಮೊದಲು ಮಗನಿಂದ ನನಗೆ ನನ್ನಿಂದ ಮಗನಿಗೆ ಕ್ಷೌರವು ಪ್ರಾರಂಭವಾಗಿ ಪ್ರಾರಂಭದಲ್ಲಿ ಅನನುಭವಿಗಳಾದ ನಾವು ಸಣ್ಣದಾಗಿ ಬೋಳು ಮಾಡುವುದರಿಂದ ಶುರುವಾಗಿ, ನಂತರ ಏರು ಪೇರುಗಳಾಗಿ ಈಗ ಒಂದು ಹಂತಕ್ಕೆ ಬಂದಿದ್ದರೂ ಪರ್ಪೆಕ್ಷನ್ ಇನ್ನೂ ಬಂದಿಲ್ಲ.
Comments
Post a Comment