Blog number 1419. ಶಿವಮೊಗ್ಗ ಜೋಗ್ ಪಾಲ್ಸ್ ಮದ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಅಪಾಯಕಾರಿ ಅಪಘಾತ ವಲಯಗಳ ಬ್ಲಾಕ್ ಸ್ಪಾಟ್
#ನಮ್ಮ_ಊರ_ಯಡೇಹಳ್ಳಿ_ವೃತ್ತ_ಹಗಲು_ಮತ್ತು_ರಾತ್ರಿಯಲ್ಲಿನ_ದೃಷ್ಯ
( ಸಾಗರ ತಾಲ್ಲೂಕಿನ ಆನಂದಪುರಂ ನ ಯಡೇಹಳ್ಳಿ ವೃತ್ತ)
ಇಲ್ಲಿ ನಾಲ್ಕು ರಸ್ತೆಗಳು ಸೇರುತ್ತದೆ ಶಿವಮೊಗ್ಗದಿಂದ ಮತ್ತು ಸಾಗರದಿಂದ ಬರುವ ರಾಷ್ಟ್ರೀಯ ಹೆದ್ದಾರಿ, ತೀಥ೯ಳ್ಳಿಯಿಂದ (ರಿಪ್ಪನ್ ಪೇಟೆ ಮಾರ್ಗ) ಬರುವ ರಸ್ತೆ, ಹೊಸನಗರದಿಂದ (ಬಟ್ಟೆಮಲ್ಲಪ್ಪ ಮಾರ್ಗ) ಬರುವ ರಸ್ತೆ ಈ ವೃತ್ತದಲ್ಲಿ ಸೇರುತ್ತದೆ.
ರಿಪ್ಪನ್ ಪೇಟೆ ಮತ್ತು ಬಟ್ಟೆಮಲ್ಲಪ್ಪ ಮಾಗ೯ವಾಗಿ ಬರುವ ವಾಹನಗಳು ಈ ರಸ್ತೆಗೆ ಹಂಪುಗಳಿಲ್ಲದ್ದರಿಂದ ವೇಗವಾಗಿ ಬಂದು ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಕ್ಕೆ ಪ್ರತಿ ನಿತ್ಯ ಒಂದಲ್ಲ ಒಂದು ಅಪಘಾತ ಮಾಡುತ್ತವೆ.
ರಾಷ್ಟ್ರೀಯ ಹೆದ್ದಾರಿಗೆ ಹಂಪು ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲದಿರಬಹುದು ರಿಪ್ಪನ್ ಪೇಟೆ ರಸ್ತೆ ಜಿಲ್ಲಾ ಮುಖ್ಯ ರಸ್ತೆ ಇದಕ್ಕೆ ಹಂಪ್ ಹಾಕಲು ಯಾವುದೇ ತಡೆ ಇಲ್ಲ ಆದರೆ ಈ ವರೆಗೆ ಎಷ್ಟೇ ಮನವಿ ನೀಡಿದರೂ ಸುರಕ್ಷತೆಗೆ ಸಂಬಂದ ಪಟ್ಟ ಇಲಾಖೆ ಮುಂದಾಗಿಲ್ಲ.
#ಇದು_ಒಂದು_ಬ್ಲಾಕ್_ಸ್ಪಾಟ್_ಆಗಿದೆ.
Comments
Post a Comment