Skip to main content

Blog number 1371. ಸಾಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅತ್ಯುತ್ತಮವಾದ ಐ ಲವ್ ನಮ್ಮ ಸಾಗರ ಗ್ರೂಪ್ ನೀಡಿರುವ ಉತ್ಸಾಹಿ ಯುವಕ ಅಂಜನ್ ಅಮರನಾಥ್ ಕಾಯ್ಕಿಣಿ.

ಸಾಗರದ_ಅಂಜನ್_ಅಮರನಾಥ್_ಕಾಯ್ಕಿಣಿ

#ಅವರ_ಐ_ಲವ್_ನಮ್ಮ_ಸಾಗರ_ಪೇಸ್_ಬುಕ್_ಗ್ರೂಪ್_ದಾಖಲೆಯ_ವೀಕ್ಷಕರನ್ನು_ಹೊಂದಿದೆ
#33_ಸಾವಿರ_ಸದಸ್ಯರಿದ್ದಾರೆ.

#ಅವರ_ಸಹೋದರಿ_ವಿವಾಹ_ಆಮಂತ್ರಣ_ನೀಡಲು_ಅವರಿಬ್ಬರೂ_ಬಂದಿದ್ದರು.

#ಸಾಗರದ_ಒಂದು_ಕಾಲದ_ಬಸ್_ನಿಲ್ದಾಣದ_ಪ್ರಮುಖ_ಪತ್ರಿಕೆಗಳು_ಸಿಗುತ್ತಿದ್ದ_ಜಾಗ

#ಇವರ_ತಂದೆ_ಅಮರನಾಥ_ಕಾಯ್ಕಿಣಿಯವರದ್ದು.

#ಕಾಯ್ಕಿಣಿ_ಅಂಗಡಿಯಲ್ಲಿ_ಸಿಗದ_ಪತ್ರಿಕೆಯೇ_ಇಲ್ಲ_ಎಂದು_ಪ್ರಸಿದ್ದಿ_ಪಡೆದಿದ್ದರು.


  ಐ ಲವ್ ನಮ್ಮ ಸಾಗರ ಎಂಬ ಪೇಸ್ ಬುಕ್ ಗ್ರೂಪ್ ಇವತ್ತಿನವರೆಗೂ ದಾಖಲೆಯ ವೀಕ್ಷಕರನ್ನು ಹೊಂದಿರುವ ಮತ್ತು ಸುಮಾರು 33 ಸಾವಿರ ಸದಸ್ಯರಿರುವ ಏಕೈಕ ಮತ್ತು ನಂಬರ್ ಒನ್ ಗ್ರೂಪ್ ಆಗಿದೆ.
  ಈ ಗ್ರೂಪ್ ನಲ್ಲಿ ಸಾಗರಕ್ಕೆ ಸಂಬಂದಪಟ್ಟ ಸಾಹಿತ್ಯ ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಪಟ್ಟ ಸುದ್ದಿ ಮತ್ತ ಲೇಖನಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಿದ್ದಾರೆ ಅಷ್ಟೆ ಅಲ್ಲ ಇಲ್ಲಿ ಪ್ರಕಟ ಮಾಡುವ ಲೇಖನ ಅಡ್ಮಿನ್ ಅಂಜನ್ ಕಾಯ್ಕಿಣಿ ಪರಿಶೀಲಿಸಿ ಅನುಮೋದಿಸುತ್ತಾರೆ.
   ಹತ್ತು ನಿಯಮಗಳೂ ಈ ಗ್ರೂಪಿನ ಸದಸ್ಯರಾಗುವಾಗ ಪಾಲಿಸಲೇ ಬೇಕು ಈ ಮೂಲಕ ಈ ಗ್ರೂಪ್ ಅನಾವಶ್ಯಕ ಅಪವಾದದಿಂದ ದೂರವಾಗಿ ಆಸಕ್ತರಿಗೆ ಸಾಗರದ ಮಾಹಿತಿ ಕಣಜವಾಗಿದೆ.
   ಇವರ ತಂದೆ ಕೆಲವು ದಶಕಗಳ ಕಾಲ ಸಾಗರದಲ್ಲಿ ನಾಡಿನ ಎಲ್ಲಾ ಪತ್ರಿಕೆಗಳನ್ನು ಸಾಗರದ ಮುಖ್ಯ ನಿಲ್ದಾಣದ ಎದುರು ಅವರ ಅಂಗಡಿಯಲ್ಲಿ ಒಂದೇ ಛಾವಣಿಯ ಅಡಿಯಲ್ಲಿ ಲಭ್ಯವಿರುವಂತೆ ಮಾಡಿದ್ದರಿಂದ ಸಾಗರ ತಾಲ್ಲುಕಿನಾದ್ಯಂತ ಪತ್ರಿಕೆ ಓದುಗರಿಗೆ ಸಾಹಿತ್ಯಾಸಕ್ತರಿಗೆ ಇವರ ಅಂಗಡಿ ಪ್ರಸಿದ್ದಿ ಆಗಿತ್ತು ಮತ್ತು #ಕಾಯ್ಕಿಣಿ_ಪೇಪರ್_ಅಂಗಡಿ ಎಂದೇ ಹೆಸರು ಉಳಿದಿದೆ ಈಗ ಬಸ್ ನಿಲ್ದಾಣ ಸ್ಥಳಾಂತರವಾಗಿದೆ, ಈ ಸ್ಥಳಕ್ಕೆ ಹಳೇ ಬಸ್ ನಿಲ್ದಾಣ ಎಂಬ ಹೆಸರು ಬಂದಿದೆ.
   ಇವರ ಏಕೈಕ ಪುತ್ರ ಅಂಜನ್ ಅಮರನಾಥ್ ಕಾಯ್ಕಿಣಿ ಪದವಿದರರಾಗಿ ಅನೇಕ ವ್ಯವಹಾರದ ಜೊತೆ ಸಾಗರದ ಜನತೆಗಾಗಿ ಅತ್ಯುತ್ತಮವಾದ ಸಾಮಾಜಿಕ ಜಾಲ ತಾಣವಾದ #ಐ_ಲವ್_ನಮ್ಮ_ಸಾಗರ ನೀಡಿದ್ದಕ್ಕೆ ಅಭಿನಂದಿಸುತ್ತೇನೆ.
  ಎರೆಡು ತಿಂಗಳ ಹಿಂದೆ ಅಣ್ಣ ತಂಗಿ ನನ್ನ ಕಛೇರಿಗೆ ಬಂದಾಗ ಇವರ ಪೋಟೋಗಳು ತೆಗೆದಿದ್ದೆ ಆದರೆ ಆ ಪೋಟೋಗಳು ಹೇಗೋ ಗೊತ್ತಾಗದೆ ಡಿಲಿಟ್ ಆಗಿ ಬಿಟ್ಟಿತ್ತು.
    ಮೊನ್ನೆ ಅಂಜನ್ ಕಾಯ್ಕಿಣಿ ಬಂದಿದ್ದರು ಇವರ ಸಹೋದರಿ ಅನುಷಾರ ವಿವಾಹ ಆಮಂತ್ರಣ ನೀಡಲು, ಇದೇ ತಿಂಗಳ 30 ನೇ ತಾರೀಖು (30 ಏಪ್ರಿಲ್ 2023 ಭಾನುವಾರ) ಸಾಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವೀರ ವಿಠಲ ಸಭಾಭವನದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.
  ಇವರ ಸಹೋದರಿಯಾದ ಮದುಮಗಳೇ ಸ್ಟತಃ ಸಹೋದರನ ಜೊತೆ ವಿವಾಹ ಆಮಂತ್ರಣ ನೀಡಿದ್ದರಿಂದ ಮತ್ತು ಇವರ ತಂದೆ ಅಮರನಾಥ್ ಕಾಯ್ಕಿಣಿ ಸಾಗರದ ಸಮಸ್ತ ಪತ್ರಿಕಾ ಬಳಗಕ್ಕೆ ಸಹಕಾರಿಯಾದ್ದರಿಂದ ವಿವಾಹ ಮುಹೂರ್ತದಲ್ಲಿ ಭಾಗವಹಿಸಲೇ ಬೇಕು.
   ಮದುಮಗಳಿಗೆ ಸುಖಮಯ ದಾಂಪತ್ಯ, ಆಯುರಾರೋಗ್ಯ, ಆಯಸ್ಸು ಮತ್ತು ಐಶ್ವರ್ಯ ದೇವರು ದಯಪಾಲಿಸಲಿ ಎ೦ದು ಹಾರೈಸಿ ಬೀಳ್ಕೊಟ್ಟು ಕಳಿಸಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...