Skip to main content

Blog number 1378. ಸಜ್ಜನ ಸರಳ ಜಾತ್ಯಾತೀತ ಬುದ್ದಿವಂತ YSV ದತ್ತಣ್ಣಗೆ ಕಾಂಗ್ರೇಸ್ ಪಕ್ಷ ಟಿಕೇಟು ನಿರಾಕರಿಸಿದೆ.

#ಕಡೂರಿನ_ವೈ_ಎಸ್_ವಿ_ದತ್ತಣ್ಣರಿಗೆ_ರಾಜ್ಯದಾದ್ಯಂತ_ಅಭಿಮಾನಿಗಳಿದ್ದಾರೆ.

#ಕಡೂರು_ಕ್ಷೇತ್ರದಿಂದ_ಕಾಂಗ್ರೇಸ್_ಟಿಕೇಟು_ನಿರಾಕರಿಸಲಾಗಿದೆ

#ಜೆಡಿಎಸ್_ತ್ಯಜಿಸಿ_ಕಾಂಗ್ರೇಸ್_ಸೇರಿಸಿಕೊಳ್ಳುವಾಗ_ನೀಡಿದ_ಭರವಸೆ_ಹುಸಿ_ಆಯಿತು.

#ಚುನಾವಣಾ_ಸ್ಪರ್ದಿಗಳು_ಎರೆಡು_ಲಕ್ಷ_ಪಾವತಿ_ಮಾಡಲೇ_ಬೇಕೆಂಬ_ಕಾಂಗ್ರೇಸ್_ರೂಲ್ಸ್ 

#ದತ್ತಣ್ಣರ_ಜೆಡಿಎಸ್‌_ತೊರೆಯುವ_ಕಾಂಗ್ರೇಸ್_ಸೇರುವ_ತೀಮಾ೯ನ_ಎಲ್ಲೊ_ತಪ್ಪಾಗಿದೆ
  
   ಜನ ಸಾಮಾನ್ಯ, ಅಹ೯ತೆ ಇದ್ದರೂ ಹಣ ಇಲ್ಲವೆಂದರೆ ಪಕ್ಷದ ಟಿಕೇಟಿಗೆ ಅಜಿ೯ ಸಲ್ಲಿಸ ಬಾರದೆಂಬ ಕರ್ನಾಟಕ ರಾಜ್ಯದ ಕಾಂಗ್ರೇಸ್ ಪಕ್ಷದ ತೀರ್ಮಾನವೇ ಟಿಕೇಟಿನ ಅರ್ಜಿ ಜೊತೆಗೆ 2 ಲಕ್ಷದ ಪಾವತಿ ಅನ್ನುವುದು ಸುಳ್ಳಲ್ಲ ಮತ್ತು ಸಂದರ್ಶನದಲ್ಲಿ 10 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಾ ಎಂಬ ಕಾಂಗ್ರೇಸ್ ಪಕ್ಷದ ಪ್ರಶ್ನೆಗಳ ಸಾಲಿನಲ್ಲಿ ಈಗ ಸಂಭಾವಿತ ದತ್ತಣ್ಣರಿಗೆ ಟಿಕೇಟು ಇಲ್ಲವಾಗಿದೆ.
  ರಾಜ್ಯದಾದ್ಯಂತ ದತ್ತಣ್ಣ ಅಭಿಮಾನಿಗಳಿಗೆ ನಿರಾಶೆ ಆಗಿದೆ ದೇವೇಗೌಡರು ಈ ಶಿಷ್ಯನ ತಪ್ಪು ಮನ್ನಿಸಿ ಜೆಡಿಎಸ್ ನಿಂದ ಕಡೂರು ಅಭ್ಯರ್ಥಿ ಮಾಡುತ್ತಾರಾ? ಎಂಬ ನಿರೀಕ್ಷೆಯಲ್ಲಿದ್ದಾರೆ.
   ದೇವೇಗೌಡರೇ ಮೇಷ್ಟರೇ ಎಂದು ಕರೆಯುತ್ತಿದ್ದ ಯಗಟಿ ಸೂರ್ಯನಾರಾಯಣ ವೆಂಕಟೇಶ್ ದತ್ತರನ್ನು YSV ದತ್ತಾ ಎಂತಲೇ ಜನ ಕರೆಯುತ್ತಾರೆ, ಗಣಿತ ಮತ್ತು ಬೌತಶಾಸ್ತ್ರ ಅಧ್ಯಾಪಕರಾಗಿದ್ದವರು ದತ್ತಣ್ಣ.
  ಜೆ.ಡಿಎಸ್.ನಿಂದ 2006 ರಿಂದ 2012 ವಿದಾನ ಪರಿಷತ್ ಸದಸ್ಯರಾಗಿ, 2013 ರಿಂದ 2018 ವಿದಾನ ಸಭಾ ಸದಸ್ಯರಾಗಿದ್ದವರು.
    ಕಳೆದ ಜನವರಿ 14 ರಂದು ಜೆಡಿಎಸ್ ಪಕ್ಷ ತ್ಯಜಿಸಿ ಈ ಬಾರಿಯ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಕಾಂಗ್ರೇಸ್ ನಿಂದ ಸ್ಪರ್ಧಿಸುವ ಮಹತ್ವಾಕಾಂಕ್ಷೆಯಿಂದ ಕಾ೦ಗ್ರೇಸ್ ಸೇರಿದ್ದರು, ಕಾಂಗ್ರೇಸ್ ಪಕ್ಷದ ದುರೀಣರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಭರವಸೆ ನೀಡಿದ್ದರು.
  ಕಾಂಗ್ರೇಸ್ ಪಕ್ಷದಲ್ಲಿ ಎರೆಡು ಲಕ್ಷ ಹಣ ಪಾವತಿ ಮಾಡಿ ಟಿಕೇಟಿಗೆ ಅರ್ಜಿ ನೀಡಿದ್ದರು, ಪಕ್ಷದ ಆಂತರಿಕ ಸಮೀಕ್ಷೆ ಇವರ ಪರವಾಗಿದ್ದರೂ ದತ್ತಾರವರಿಗೆ ಟಿಕೇಟು ನಿರಾಕರಿಸಲಾಗಿದೆ, ಈ ಮೂಲಕ ದತ್ತಣ್ಣರಿಗೆ ಕಾಂಗ್ರೇಸ್ ಪಕ್ಷದಿಂದ ಅವಮಾನ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
  ಟಿಕೇಟು ನಿರಾಕರಿಸಲು ಇವರ ಆಡಿಯೋ ಒಂದು ಕಾರಣ ಅದರಲ್ಲಿ ಸಿದ್ದರಾಮಯ್ಯ ಪರವಾಗಿ ಮತ್ತು ಡಿಕೆಶಿ ವಿರುದ್ಧ ಇವರು ಮಾತಾಡಿದ್ದು ಕಾರಣ ಅನ್ನುತ್ತಾರೆ.
  ಇನ್ನೊಂದು ಕಾರಣ ಜೆಡಿಎಸ್ ವರಿಷ್ಟರು ದತ್ತಣ್ಣರಿಗೆ ಟಿಕೇಟು ನೀಡದಂತೆ ಕಾಂಗ್ರೇಸ್ ಗೆ ತಾಕೀತು ಮಾಡಿತ್ತು ಅನ್ನುತ್ತಾರೆ.
  ಇದರ ಮಧ್ಯೆ ದತ್ತಣ್ಣ ಅವರಿಗೆ MLC ಮಾಡುತ್ತಾರೆ ಆದ್ದರಿಂದ ಟಿಕೇಟು ನಿರಾಕರಿಸಲಾಗಿದೆ ಎಂದೂ ಸುದ್ದಿ ಇದೆ ಆದರೆ 70 ರ ವಯೋಮಾನದ ದತ್ತಣ್ಣ ಜೆಡಿಎಸ್ ತೊರೆದು ತಪ್ಪು ಮಾಡಿದರಾ? ಅನ್ನಿಸುತ್ತೆ.
  ಸಿದ್ದರಾಮಯ್ಯ ಒ0ದು ಕಾಲದ ತಮ್ಮ ಸಹೋದ್ಯೋಗಿಗೆ ಟಿಕೇಟು ಕೊಡಿಸಲಾಗದಷ್ಟು ಅಸಹಾಯಕರ? ಜೆಡಿಎಸ್ ಮಾತು ಕಾಂಗ್ರೇಸ್ ನಿರಾಕರಿಸಲಾಗಲಿಲ್ಲವಾ? ದತ್ತಣ್ಣರ ಆಡಿಯೋದಿಂದ ಡಿಕೆಶಿ ನಿಜಕ್ಕೂ ಸಿಟ್ಟಾದರ? ಮುಂತಾದ ಪ್ರಶ್ನೆಗಳು ಇದೆ.
   ಇನ್ನೆರೆಡು ದಿನದಲ್ಲಿ ತಮ್ಮ ತೀಮಾ೯ನ ತಿಳಿಸುವುದಾಗಿ ದತ್ತಣ್ಣ ಹೇಳಿದ್ದಾರೆ ನೋಡಬೇಕು ಮರಳಿ ಜೆಡಿಎಸ್ ಸೇರಿ ಸ್ಪರ್ದೆ ಮಾಡುತ್ತಾರಾ ಎಂದು.
   ಇಡೀ ರಾಜ್ಯದಲ್ಲಿ ದತ್ತಣ್ಣರ ಸರಳತೆಗೆ ಅಸಂಖ್ಯ ಅಭಿಮಾನಿಗಳಿದ್ದಾರೆ ಅವರೆಲ್ಲರಿಗೂ ದತ್ತಣ್ಣರಿಗೆ ಟಿಕೇಟು ಸಿಗದ ಬಗ್ಗೆ ಬೇಸರ ಇದೆ ಅದೇ ರೀತಿ ದತ್ತಣ್ಣರ ಅಭಿಮಾನಿಯಾದ ನನಗೂ ನಿರಾಸೆ ಆಗಿದೆ. 
  70 ರ ನಿವೃತ್ತಿ ವಯಸ್ಸಲ್ಲಿ MLC ಮಾಡುವ ಭರವಸೆ ನನಗೆ ಗ್ಯಾರಂಟಿ ಇಲ್ಲ, ಸಜ್ಜನ ರಾಜಕಾರಣಿ ದತ್ತಣ್ಣ ಟಿಕೇಟಿಗೆ ಪಾವತಿ ಮಾಡಿದ 2 ಲಕ್ಷ ಹಣ ಕಾಂಗ್ರೇಸ್ ಪಕ್ಷ ವಾಪಾಸು ನೀಡಲಿ ಅನ್ನಿಸಿದೆ (ಅದು ಸಾಧ್ಯವಿಲ್ಲ), ಜಾತಿ-ಹಣದ ಅಡ್ಜಸ್ಟ್ ಮೆಂಟ್ ರಾಜಕಾರಣದಲ್ಲಿ ದತ್ತಣ್ಣನಂತವರು ಅಪ್ರಸ್ತುತ ಅನ್ನುವುದು ಸಾಬೀತಾಗಿದೆ.
  ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನನ್ನ ಕಛೇರಿಗೆ ದತ್ತಣ್ಣ ಬಂದಿದಾಗ ಬರೆದ ಬ್ಲಾಗ್ ಇಲ್ಲಿದೆ https://arunprasadhombuja.blogspot.com/2022/09/blog-number-953.html

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...