Skip to main content

Blog number 1411. ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಉಪಯೋಗವನ್ನು ಜನರಿಗೆ ತಿಳಿಸುವ ಜನ ಜಾಗೃತಿ ಜಾಥ ನಾನು 2011ರಲ್ಲಿ ಎತ್ತಿನ ಗಾಡಿ ಮೇಲೆ ಸಾಗರ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಸಿದ್ದು ಒ0ದು ನೆನಪು.

#2011 ರ ನನ್ನ ಎತ್ತಿನ ಗಾಡಿ ಯಾತ್ರೆಯಲ್ಲಿ ಶರಾವತಿ ನದಿ ದಾಟಿಸುವ ತುಮರಿಯ ಲಾಂಚ್ ನವರು ಎತ್ತಿನ ಗಾಡಿ ಸಾಗಿಸಲು ನಿರಾಕರಿಸಿದ್ದರು!.

    2011ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತದ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯ೦ತ ಸುಮಾರು ಏಳು ದಿನ ಎತ್ತಿನ ಗಾಡಿಯಲ್ಲಿ ಜಾತ ನಡೆಸಿದ್ದೆವು,ಬೆಳೆಗ್ಗೆಯಿಂದ ರಾತ್ರಿ ತನಕ ಅನೇಕ ಸಭೆಗಳು ನಡೆಸಿದೆವು.
   ಸ್ಥಳಿಯ ಪ್ರಗತಿ ಪರ ಚಿಂತನೆಯವರು, ಸಂಘಟನೆಗಳು ನಮಗೆ ಬೆಂಬಲಿಸಿ ಸಹಕರಿಸಿದರು, ಮಾಹಿತಿ ಹಕ್ಕಿನಲ್ಲಿ ಅಜಿ೯ಸಲ್ಲಿಸಿ ಮಾಹಿತಿ ಪಡೆಯುವುದು, ದಾಖಲೆ ಸಮೇತ ಅವ್ಯವಹಾರಗಳನ್ನ ಲೋಕಾಯುಕ್ತಕ್ಕೆ ಹೇಗೆ ದೂರು ನೀಡುವುದು ಇತ್ಯಾದಿ ಮಾಹಿತಿ ನೀಡುತ್ತಾ ಹೋಗಿದ್ದು ಒಂದು ವಿಶಿಷ್ಟ ಅನುಭವ.
    ರಾಜಕೀಯ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಎತ್ತಿನ ಗಾಡಿಯಲ್ಲಿ ಗಾದಿ ಹಾಸಿ ಕುಳಿತುಕೊಳ್ಳಬಾರದು ಕೇವಲ ಕಂಬಳಿ ಹಾಸಿ ಕುಳಿತು ಈ ಯಾತ್ರೆ ಮುಗಿಸಲು ತಾಕೀತು ಮಾಡಿದ್ದರು ಅದರಂತೆ ಮಾಡಿದೆ, ಹೊಸನಗರದಲ್ಲಿ ನನ್ನ ಗಾಡಿ ಏರಿದ ಮಾಜಿ ಜಿ.ಪಂ.ಸದಸ್ಯ ಗೆಳೆಯ ಬಿ.ಪಿ. ರಾಮಚಂದ್ರ ಕುಳಿತು ಕೊಳ್ಳಲಾಗದೆ ಇಳಿದರು, ನೀವು ಹ್ಯಾಗೆ 8 ದಿನದಿಂದ ಗಾಡಿಲಿ ಕುಳಿತೇ ಇದ್ದಿರಾ ಅಂತ ಆಶ್ಚಯ೯ ಪಟ್ಟರು ಹಾಗಂತ ನನಗೆ ಸಲೀಸಾಗಿತ್ತು ಪ್ರಯಾಣ.
     ಎತ್ತಿನ ಗಾಡಿಯಲ್ಲಿ ಕುಳಿತು ಪ್ರಯಾಣ ಮಾಡುವ ಅನುಭವವೇ ಬೇರೆ, ಕಾರಲ್ಲಿ ಕುಳಿತು ಭರ್ ಅಂತ ಕ್ಷಣ ಮಾತ್ರದಲ್ಲಿ ಹೋಗುವವರು ಎತ್ತಿನ ಗಾಡಿಯಲ್ಲಿ ಕುಳಿತು ನಿಧಾನವಾಗಿ ಗಂಟೆಗೆ 4 ರಿಂದ 5 ಕಿ.ಮಿ. ಸಾಗುವಾಗ ಪ್ರಕೃತಿಯ ಚಿತ್ರಣ ಕಾರಿನಂತೆ ಸರ್ ಅಂತ ಸರಿಯದೆ ಅದನ್ನ ನೋಡುತ್ತಾ ಅನುಭವಿಸುತ್ತ ನೆನಪಿನಲ್ಲಿ ಚಿತ್ರಣದ ಅಚ್ಚು ಉಳಿಯುವಂತ ಎತ್ತಿನ ಗಾಡಿ ಅನುಭವಿಸಿದರೆ ಮಾತ್ರ ಗೊತ್ತಾಗುತ್ತದೆ.
    ಆನಂದಪುರಂನ ಮುರುಘಾ ರಾಜೇಂದ್ರ ಮಠದಲ್ಲಿ ಆಗಿನ ಸಾಗರ ನಗರಸಭಾ ಅಧ್ಯಕ್ಷ ಶ್ರಮಜೀವಿ ಕೃಷ್ಣ ಮೂತಿ೯ ಉದ್ಘಾಟಿಸಿ ಮಾಡಿದ ಭಾಷಣ ಇನ್ನು ನೆನಪಿದೆ, ಎತ್ತಿನ ಗಾಡಿ ಹೊಗೆ ಉಗುಳುವುದಿಲ್ಲ, ಟ್ರಾಕ್ಟರ್ ಸಗಣಿ ಹಾಕುವುದಿಲ್ಲ ಅಂತ ಪ್ರಾಸಬದ್ದ ಮಾತಾಡಿ ಶುಭ ಹಾರೈಸಿದ್ದರು.
   ಸುಮಾರು 360 ಕಿ.ಮಿ. ಸಂಚರಿಸಿದ ಜಾತ ಅ೦ತಿಮ ಸಮಾರೋಪ ರಿಪ್ಪನ್ ಪೇಟೆಯ ವೃತ್ತದಲ್ಲಿ ನಡೆಯಿತು.
  ಈ ಸಂದಭ೯ದಲ್ಲಿ ತುಮರಿಯಲ್ಲಿ ಶರಾವತಿ ನದಿ ದಾಟಲು ಲಾಂಚ್ ನವರು ಎತ್ತಿನ ಗಾಡಿಗೆ ನಿರಾಕರಿಸಿದರು, ಶರಾವತಿ ವಿಧ್ಯುತ್ ಯೋಜನೆಗಾಗಿ ಈ ಭಾಗ ಮುಳುಗಡೆ ಆಗಿದ್ದಕ್ಕಾಗಿ ಸಕಾ೯ರ ಈ ಲಾಂಚ್ ನೀಡಿದೆ, ಮೊದಲೆಲ್ಲ ರೈತರ ವಾಹನ ಎತ್ತಿನ ಗಾಡಿನೇ ಆಗಿತ್ತು ಹಾಗಾಗಿ ಎತ್ತಿನ ಗಾಡಿ ಇಲ್ಲಿ ದಾಟಾಡುತ್ತಿತ್ತು, ಈಗ ಕಾರು ವ್ಯಾನ್ ನ ಕಾಲ ಬಂದು ಇಲ್ಲಿನ ಲಾ೦ಚ್ ನ ನೂತನ ಸಿಬ್ಬ೦ದಿಗಳು ಹೀಗೆ ಹೇಳುತ್ತಾರೆ ಅಂತ ಸ್ಥಳಿಯರು ಬೆಂಬಲಿಸಿದರು.       
       ಆದರೆ ಲಾ೦ಚನ ಸಿಬ್ಬ೦ದಿ 20 ವಷ೯ದಿಂದ ಎತ್ತಿನ ಗಾಡಿ ಹಾಕಿಯೇ ಇಲ್ಲ ತಮ್ಮ ಬಂದರು ಮತ್ತು ಪೆರಿ ಇಲಾಖೆ ಮೇಲಾಧಿಕಾರಿ ಅನುಮತಿ ನೀಡದೇ ಸಾಧ್ಯವೇ ಇಲ್ಲ ಅಂದರು.
     ನಮ್ಮ ರಕ್ಷಣೆಯ ಹೊಣೆ ಹೊತ್ತ ಪೋಲಿಸ್ ಸಿಬ್ಬ೦ದಿಗಳು ತಮ್ಮ ಇಲಾಖಾ ಮುಖ್ಯಸ್ಥರಿಗೆ ತಿಳಿಸಿ ಅಲ್ಲಿಂದ ಜಿಲ್ಲಾ ಆಡಳಿತ ನಮ್ಮ ಎತ್ತಿನ ಗಾಡಿ ಜಾತ ನದಿ ದಾಟಿಸಲು ಅನುಮತಿ ಕೊಡಿಸಿದ್ದರಿ೦ದ ನಮ್ಮ ಎತ್ತು ಮತ್ತು ಗಾಡಿಗಳು ಲಾಂಚ್ ನಲ್ಲಿ ದಾಟಿದವು.
    ನದಿ ಆಚೆಯ ತುಮರಿ ಪ್ರದೇಶ ಗುಡ್ಡ  ಗಾಡು ಪ್ರದೇಶವಾದ್ದರಿಂದ ಆ ಬಾಗದಲ್ಲಿ ಎತ್ತಿನ ಗಾಡಿಯೇ ಇಲ್ಲ! ಹಾಗಾಗಿ ನಮ್ಮ ಎತ್ತಿನ ಗಾಡಿ ನೋಡಲು ರಸ್ತೆ ಬದಿಯಲ್ಲಿ ಜನ ಸೇರುತ್ತಿದ್ದರು, ಶಾಲಾ ಮಕ್ಕಳಂತೂ ಬಾರಿ ಕುತೂಹಲದಿಂದ ನೆರೆಯುತ್ತಿದ್ದರು.
    ಇವತ್ತು ಪೇಸ್ ಬುಕ್ ಈ ಪೋಸ್ಟ್ ನೆನಪಿಸಿ ಹಾಕಿದ್ದರಿಂದ ಇದೆಲ್ಲ ನೆನಪಾಯಿತು ಆ ದಿನದಲ್ಲಿ ಸೋಷಿಯಲ್ ಮೀಡಿಯ ಇಷ್ಟು ವಿಸ್ತಾರವಾಗಿರಲಿಲ್ಲ, ಅವತ್ತು ಪ್ರಜಾವಾಣಿ ಸ್ಥಳಿಯ ವರದಿಗಾರರಾಗಿದ್ದ ಜಿ.ಟಿ. ಸತ್ಯನಾರಾಯಣರಿಗೆ ಈ ಬಗ್ಗೆ ಸುದ್ದಿ ಮಾಡಲು ವಿನOತಿಸಿದ್ದೆ ಆದರೆ ಆ ದಿನ ಅವರು ಊರಲ್ಲಿ ಇರದಿದ್ದರಿಂದ ಪ್ರಜಾವಾಣಿಯಲ್ಲಿ ಸುದ್ದಿ ಆಗಲಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...