#ಲೆಟರ್ ನಂ -9.
#ದಿನಾ೦ಕ 8-ಏಪ್ರಿಲ್ -2020.
*ಲಾಕ್ ಡೌನ್ ಇನ್ನು 5 ದಿನ ಇದೆ ನಂತರ ಏನು? ಈ ಬಗ್ಗೆಯೆ ರಾಜ್ಯದಾದ್ಯಂತ ಹೆಚ್ಚು ಚಚೆ೯ ಆಗುತ್ತಿದೆ ಏನಾಗಬಹುದು?*
ಚೀನಾದ ವುಹಾನ್ ನಲ್ಲಿ ನಿನ್ನೆ ರಾತ್ರಿ 12ರಿಂದ ಸಂಪೂಣ೯ ಲಾಕ್ ಡೌನ್ ತೆರೆಯಲಾಗಿದೆ (72 ದಿನದ್ದು) ಸುಮಾರು 3 ತಿಂಗಳ ಅವಧಿಯಲ್ಲಿ ಇಲ್ಲಿನ ಕೊರಾನ ವೈರಸ್ ತಹಬಂದಿಗೆ ಬಂದಿದೆ ಅನ್ನುವುದು ಪ್ರಪಂಚಕ್ಕೆ ತಿಳಿದ ವಿಚಾರ.
ತೆಲಂಗಾಣದ ಮುಖ್ಯಮಂತ್ರಿ KCR ಪ್ರದಾನ ಮಂತ್ರಿಗಳಿಗೆ ಲಾಕ್ ಡೌನ್ ತೆರುವು ಮಾಡದೆ ಮುಂದುವರಿಸಲು ಮನವಿ ಮಾಡಿದ್ದಾರೆ, ನಮ್ಮ ರಾಜ್ಯ ಸಕಾ೯ರ ಪರಿಸ್ಥಿತಿ ನಿಯ೦ತ್ರಣಕ್ಕೆ ಬರದಿದ್ದರೆ ಲಾಕ್ ಡೌನ್ ತೆರವು ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಭಾರತ ದೇಶದಲ್ಲಿ ಕೊರಾನ ವೈರಸ್ ಪರಿಣಾಮ ಬೇರೆ ದೇಶದಷ್ಟು ತೀವ್ರವಾಗಿಲ್ಲ ಎಂಬ ಸಲಹೆ ಸರಿ ಅಲ್ಲ ಭಾರತದಲ್ಲಿ ಬೇರೆ ದೇಶಕ್ಕಿ೦ತ ಒಂದು ತಿಂಗಳ ನಂತರ ಈ ವೈರಸ್ ಹರಡಲು ಪ್ರಾರಂಭ ಆಯಿತು ಮುಂದಿನ ದಿನದಲ್ಲಿ ಇದರ ತೀವ್ರತೆ ಹೆಚ್ಚಾಗಲಿದೆ ಎಂದು ಖ್ಯಾತ ವೈದ್ಯ ದೇವಿ ಶೆಟ್ಟಿ ಕಳವಳ ವ್ಯಕ್ತ ಪಡಿಸಿದ್ದಾರೆ.
21 ದಿನದ ಲಾಕ್ ಡೌನ್ ಗೆ 15 ದಿನದ ನಂತರವೇ ಜನ ಹೊಂದಿಕೊಳ್ಳುತ್ತಿದ್ದಾರೆ ಆದರೂ ಸೋಷಿಯಲ್ ಡಿಸ್ಟೆನ್ಸ್ ಕಾಪಾಡುವುದರಲ್ಲಿ ಎಡವುತ್ತಿದ್ದಾರೆಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಅಂತರ ರಾಜ್ಯ ರೈಲು/ವಿಮಾನ/ ಬಸ್ ಸಂಚಾರ ಅವಕಾಶ ನೀಡಿದರೆ ಈ ವೈರಸ್ ತಡೆಯಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಮನವರಿಕೆ ಆಗಿದೆ.
ಹಾಗಾಗಿ ಲಾಕ್ ಡೌನ್ ಮುಂದುವರಿದರೆ ಅದಕ್ಕೆ ಹೊಂದಿಕೊಳ್ಳಲು ಜನತೆ ಮಾನಸಿಕವಾಗಿ ತಯಾರಿರುವ ಅನಿವಾಯ೯ತೆ ಇದೆ.
ಸಕಾ೯ರಕ್ಕೆ ಈಗಾಗಲೇ 21 ದಿನದ ಲಾಕ್ ಡೌನ್ ತಾಲೀಮು ಆಗಿದೆ ಅದನ್ನ ಮುಂದುವರಿಸಲು ಹೆಚ್ಚಿನ ಶ್ರಮ ಬೇಕಾಗಿಲ್ಲ ಹಾಗೆಯೇ ಲಾಕ್ ಡೌನ್ ತೆರವು ಮಾಡಿದರೆ ಅನಾಹುತವಾದರೆ ಎಂಬ ಭಯ ಮುಂಜಾಗೃತೆ ಕೂಡ ಸಕಾ೯ರಕ್ಕೆ ಇರುವಂತಹದೇ.
21 ದಿನವೇ ಲಾಕ್ ಡೌನ್ ಮುಗಿಸಿದ್ದೇವೆ ನಮ್ಮ ಆರೋಗ್ಯಕ್ಕಾಗಿ ಸಕಾ೯ರ ಮುಂದುವರಿಸಿದರೂ ನಾವು ತಯಾರಿದ್ದೇವೆ ಎಂಬ ಸಂದೇಶ ರಾಜ್ಯದ ಮುಖ್ಯಮಂತ್ರಿಗೆ ನೀಡಿದರೆ ಅವರಿಗೆ ಕೆರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನೈತಿಕ ಬೆಂಬಲ ನೀಡಿದಂತೆ ಆಗುತ್ತದೆ.
ಹಿಂದಿನ ಸಕಾ೯ರದಲ್ಲಿ ಶಿವಮೊಗ್ಗ ಜಿಲ್ಲಾ ಮಂತ್ರಿಗಳಾಗಿದ್ದ ಕಿಮ್ಮನೆ ರತ್ನಾಕರ್ ಈಗಾಗಲೇ ಮುಖ್ಯಮಂತ್ರಿಗಳಿಗೆ ಲಾಕ್ ಡೌನ್ ಮುಂದುವರಿಸಿ ಸಾಮಾಜಿಕ ಅಂತರ ಕಾಪಾಡುವುದೊಂದೆ ಈ ವೈರಸ್ ಹರಡದಂತೆ ತಡೆಯಲಿರುವ ಮಾಗ೯ ಎಂದಿದ್ದಾರೆ.
Comments
Post a Comment