Skip to main content

Posts

Showing posts with the label Event Management techniques for Election Rally

Blog number 1388. ಚುನಾವಣಾ ರ್ಯಾಲಿಗಳೆಂಬ ಇವೆಂಟ್ ಮ್ಯಾನೇಜ್ಮೆಂಟ್

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅ೦ಕಣ ಭಾಗ -4. (ಕೆ.ಆರುಣ್ ಪ್ರಸಾದ್ 9 ಏಪ್ರಿಲ್ 2019) ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಚುನಾವಣಾ ಚಾಕ ಚಕ್ಯತೆ. ಚುನಾವಣಾ ಪ್ರಚಾರದಲ್ಲಿ ಹೈಟೆಕ್ ಭರಾಟೆ.   ಮೊದಲೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಕ್ ಕಟ್ಟಿದ ವಾಹನದಲ್ಲಿ ಪ್ರಚಾರ, ಪೋಸ್ಟ್ ರ್ ಅಂಟಿಸುವುದು, ತಾಲ್ಲೂಕ್ ಹೋಬಳಿ ಕೇಂದ್ರದಲ್ಲಿ ಅಭ್ಯಥಿ೯ ಎತ್ತರದ ಅಟ್ಟಣಿಗೆ ಅಂತ ಜಾಗದಲ್ಲಿ ಬಾಷಣ ಅದಕ್ಕೆ ಒಂದು ಮೈಕ್ ವ್ಯವಸ್ಥೆ.   ಅಭ್ಯಥಿ೯ಗೆ ಮಾತ್ರ ಕಾರು ನಂತರದ ದಿನದಲ್ಲಿ ಒಂದೊ೦ದು ಕ್ಷೇತ್ರದಲ್ಲಿ ನೂರಾರು ಬಾಡಿಗೆ ಕಾರು, ಪ್ಲೆಕ್ಸ್ ಗಳು ರಾರಾಜಿಸಲು ಪ್ರಾರಂಭವಾಯಿತು.   ಈಗ ಚುನಾವಣಾ ಆಯೋಗದ ಕಠಿಣ ನಿಧಾ೯ರಗಳಿಂದ ಪ್ರಚಾರಕ್ಕೆ ನಿಯಮಿತ ವಾಹನ, ಸಭೆಯ ಸಮಯಕ್ಕೆ ಮಾತ್ರ ಪ್ರಚಾರ ಸಾದನ ಅವಕ್ಕೆಲ್ಲ ಸ್ಲಾಬ್ ಮಾದರಿ ಚುನಾವಣಾ ವೆಚ್ಚದ ಲೆಖ್ಖ ಅಭ್ಯಥಿ೯ಯ ಖಾತೆಗೆ ಸೇರುತ್ತದೆ.  ಈಗಿನ ಪ್ರತಿ ಚುನಾವಣಾ ಸಭೆಯು  ಇವೆಂಟ್ ಮ್ಯಾನೇಜ್ ಮೆಂಟ್ ಗೆ ಒಳಪಟ್ಟಿ ನಡಿಯುತ್ತಿದೆ.   ವಿಶಾಲ ಎತ್ತರದ ವೇದಿಕೆ, ಪತ್ರಕತ೯ರಿಗೆ ಪ್ರತ್ಯೇಕ ಬಾಕ್ಸ್ ಅಲ್ಲಿಗೆ ಸುಲಭ ಪ್ರವೇಶ, ಅದೇ ರೀತಿ ಲೈವ್ ವಿಡಿಯೋಗಾಗಿ ಪ್ರತ್ಯೇಕ ವೇದಿಕೆ, ಡ್ರೋನ್ ಚಿತ್ರಿಕರಣ, ಅರಮಾದಾಯಕ ಅಸನಗಳು, ವೇದಿಕೆ ಹವಾನಿಯ೦ತ್ರಿತ, ಹಿಂಬಾಗದಲ್ಲಿ ಗಣ್ಯರಿಗೆ ಮೊಬೈಲ್ ಟಾಯಿಲೆಟ್, ವಿ.ಐ...