ವಂದೇ_ಮಾತರಂ ಸಂವಿಧಾನ_ಸುಪ್ರಿಂ_ಕೋರ್ಟ್_ಆದೇಶ_ಏನು?... ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ಬಗ್ಗೆ ಇಲ್ಲಿದೆ ಮಾಹಿತಿ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ (ಇಂದಿರಾ ಭವನ) ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವಿಡಿಯೋವೊಂದರ ಸುತ್ತ ರಾಜಕೀಯ ವಿವಾದ ಉಂಟಾಗಿದೆ. ಈ ಕುರಿತು #ಬಿಜೆಪಿ_ಆರೋಪ... ಕಾರ್ಯಕ್ರಮದಲ್ಲಿ 'ವಂದೇ ಮಾತರಂ'ನ ಪೂರ್ಣ ಆವೃತ್ತಿ ಹಾಡುತ್ತಿದ್ದಾಗ #ಸೋನಿಯಾ_ಗಾಂಧಿ ಮತ್ತು ಇತರ ನಾಯಕರು ಸನ್ನೆಗಳ ಮೂಲಕ ಅದನ್ನು ನಿಲ್ಲಿಸಲು ಸೂಚಿಸಿದರು ಎಂದು ಬಿಜೆಪಿ ನಾಯಕರು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಗೀತೆಯ ಪೂರ್ಣ ಚರಣಗಳ ಬಗ್ಗೆ ಅಸಮಾಧಾನವಿದೆ ಮತ್ತು ಇದು ರಾಷ್ಟ್ರೀಯ ಗೀತೆಗೆ ಮಾಡಿದ ಅಪಮಾನ ಎಂದು ಬಿಜೆಪಿ ಟೀಕಿಸಿತು. ಕಾಂಗ್ರೆಸ್ ಪಕ್ಷದ ಸ್ಪಷ್ಟನೆ... ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು, ಗೀತೆಯನ್ನು ನಿಲ್ಲಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರ ಪ್ರಕಾರ ಪಕ್ಷದ ಅಧ್ಯಕ್ಷ #ಮಲ್ಲಿಕಾರ್ಜುನ_ಖರ್ಗೆ ಅವರು ಬಹುಹೊತ್ತು ನಿಂತಿದ್ದರಿಂದ ಅವರಿಗೆ ಕೂರಲು ಕುರ್ಚಿ ತರಲು ಸೋನಿಯಾ ಗಾಂಧಿಯವರು ಕಾರ್ಯಕರ್ತರಿಗೆ ಸನ್ನೆ ಮಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಪೂರ್ಣ ಗೀತೆಯನ್ನೇ ಹಾಡಲಾಗಿದ್ದು, ಯ...