ಡಾಕ್ಟರ್ ಎಂ.ಸಿ. ಮೋದಿ ಮಹಾತ್ಮಾ ಗಾಂದೀಜಿಯಿಂದ ಪ್ರೇರಿತರಾಗಿ ಕುಗ್ರಾಮಗಳಲ್ಲಿ ಉಚಿತವಾಗಿ ಮಾಡಿರುವ ಕಣ್ಣಿನ ಆಪರೇಷನ್ ಗಳು ಯಾರೂ ಅಳಿಸಲಾರದ ವಿಶ್ವ ದಾಖಲೆ
ಡಾಕ್ಟರ್ ಎಂ.ಸಿ.ಮೋದಿ ಕಣ್ಣಿನ ಆಪರೇಷನ್ ಮುರಿಯಲಾಗದ ಸವ೯ಕಾಲಿಕ ದಾಖಲೆ ಹೌದು ಡಾ.ಎಂ.ಸಿ. ಮೋದಿಯವರ ದಾಖಲೆ ಯಾರೂ ಮುರಿಯಲು ಸಾಧ್ಯವಿಲ್ಲ, 1968 ರಲ್ಲಿ ತಿರುಪತಿಯಲ್ಲಿ ಸತತ 14 ಗಂಟೆ ಕಣ್ಣಿನ ಚಿಕಿತ್ಸೆ ಮಾಡಿದ್ದರು. ಒಂದೇ ದಿನ 833 ಜನರ ನೇತೃ ಶಸ್ತ್ರಚಿಕಿತ್ಸೆಗಾಗಿ1986 ರಲ್ಲಿ ಇವರ ಹೆಸರು ಗಿನ್ನೆಸ್ ದಾಖಲೆಯಲ್ಲಿದೆ. ಒಮ್ಮೆಗೆ 4 ಜನರ೦ತೆ ಗ೦ಟೆಗೆ 40 ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಇವರು ಮಾಡಿರುವ ಒಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ 5 ಲಕ್ಷದ 79 ಸಾವಿರ, ತಪಾಸಣೆ ಮಾಡಿದ ಸಂಖ್ಯೆ 50 ಲಕ್ಷ, 45 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ಸಿನ ಶೇಕಡವಾರು 99.5%. ಇದಕ್ಕಾಗಿ ಇವರಿಗೆ ಬಂದ ದೇಶ ವಿದೇಶಗಳ ಪ್ರಶಸ್ತಿ ಅಸಂಖ್ಯ, ಪದ್ಮಶ್ರೀ, ಪದ್ಮಭೂಷಣ, ಹೆಲೆನ್ ಕೆಲರ್ ಹೀಗೆ ಆ ಪಟ್ಟಿ ದೊಡ್ಡದಿದೆ. ಆದರೆ ಡಾ.ಎಂ.ಸಿ.ಮೋದಿ ಗ್ರಾಮೀಣ ಪ್ರದೇಶದ ಬಡ ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅವರು ಮುಂದಾಗಲು ಕಾರಣ ಮಹಾತ್ಮಾ ಗಾಂದೀಜಿ. 1942 ರಲ್ಲಿ ಮುಂಬೈನಲ್ಲಿ ನಡೆದ ಕ್ರಿಟ್ ಇಂಡಿಯಾ ಚಳವಳಿಯ ಸಮಾವೇಶದಲ್ಲಿ ಗಾಂದೀಜಿ ಪ್ರೇರಣೆಯಿಂದ ಡಾ.ಮೋದಿ ಕನಾ೯ಟಕದ ಹಳ್ಳಿಗಳ ಬಡ ಜನರ ನೇತೃ ಚಿಕಿತ್ಸೆಗೆ ತೀಮಾ೯ನ ಮಾಡುತ್ತಾರೆ. ಪ್ರಾರಂಭದ ದಿನದಲ್ಲಿ ತಮ್ಮ ಚಿ...