Skip to main content

Posts

Showing posts with the label Cracker in feet due to several reasons

Blog number 1024. ಕಾಲ ಹಿಮ್ಮಡಿ ಬಿರುಕು ಬಿಡುವ ಕಾಲ, ಈಗಲೇ ಕಾಲಿನ ಅಂಗಾಲಿನ ರಕ್ಷಣೆಗೆ ಮುಂದಾಗಿ, ಹಿಮ್ಮಡಿ ಮೇಲಿನ ಒತ್ತಡ, ದೀರ್ಘಕಾಲ ನಿಲ್ಲುವುದು, ಚಳಿಗಾಲದ ಶುಷ್ಕ ಹವೆ, ಪಾದದಲ್ಲಿ ಕೊಳೆ ಸಂಗ್ರಹಗಳು ಹಿಮ್ಮಡಿ ಬಿರುಕಿಗೆ ಕಾರಣ.

#ಸದ್ಯದಲ್ಲೇ_ಚಳಿಗಾಲ_ಪ್ರಾರಂಭ #ಕಾಲ_ಹಿಮ್ಮಡಿ_ಒಡೆಯುವ_ಕಾಲ #ಈಗಲೇ_ಕಾಲಿನ_ಹಿಮ್ಮಡಿ_ಬಗ್ಗೆ_ಜಾಗೃತೆ_ಮಾಡಿ #ಚಳಿಗಾಲದಲ್ಲಿಯೇ_ಹಿಮ್ಮಡಿ_ಬಿರುಕು_ಏಕೆ? #ಮುಖದಷ್ಟೆ_ಕಾಳಜಿ_ಕಾಲಿನ_ಪಾದಕ್ಕೂ_ಇರಲಿ.    ಎಷ್ಟೇ ಜಾಗೃತೆ ಮಾಡಿದರೂ ಕಾಲ ಹಿಮ್ಮಡಿ ಬಿರುಕು ಬೀಳುತ್ತೆ... ಅಯ್ಯೋ ನೋವು..... ರಕ್ತ ಬರುತ್ತದೆ ಅಂತೆಲ್ಲ ಕಾಲಿನ ಪಾದದ ಬಿರುಕು ಉಂಟಾದ ಮೇಲೆ ಪಶ್ಚಾತ್ತಾಪ ಪಡುವವರನ್ನು ನೋಡುತ್ತೇವೆ ಇದರಲ್ಲಿ ಪುರುಷರಿಗಿಂತ ಸ್ತ್ರಿಯರೇ ಹೆಚ್ಚು.    ಕಾಲ ಹಿಮ್ಮಡಿ ಬಿರುಕು ಸ್ವತಃ ನಾನು ಅನುಭವಿಸಿದ್ದೆ ಕಳೆದ 30 ವರ್ಷದಿಂದ ಮಾತ್ರ ನಾನು ಇದರಿಂದ ಬಾದೆ ಪಡಲಿಲ್ಲ ಕಾರಣ ಪ್ರತಿವಷ೯ ದೀಪಾವಳಿಗೆ ಮೊದಲೇ ನಾನು ನನ್ನ ಪಾದದ ಹಿಮ್ಮಡಿ ಗಮನಿಸಲು ಪ್ರಾರಂಬಿಸುತ್ತೇನೆ ಮುಖದಷ್ಟೆ ಕಾಳಜಿ ಪಾದಗಳ ಬಗ್ಗೆ ಕೂಡ ಕಾಳಜಿ ವಹಿಸಬೇಕು.    ಬರಿಗಾಲಿನಲ್ಲಿ ನಡೆಯುವುದು, ಚಪ್ಪಲಿ ದರಿಸಿದರೂ ಹಿಮ್ಮಡಿ ಮುಚ್ಚದೇ ಇರುವುದರಿಂದ ಪಾದದಲ್ಲಿ ಮತ್ತು ಹಿಮ್ಮಡಿಯಲ್ಲಿ ಕೊಳೆ ಸಂಗ್ರಹವಾಗುವುದರಿಂದ ಬಿರುಕು ಬಿಡುವ ಸಾಧ್ಯತೆ ಹೆಚ್ಚು.    ಚಳಿ ಪ್ರಾರಂಭವಾದಾಗ ಪರಿಸರದಲ್ಲಿ ತೇವಾಂಶ ಕಡಿಮೆ ಆದಾಗ ಚರ್ಮ ಒಣಗುತ್ತದೆ, ಹೆಚ್ಚು ಸಮಯ ನಿಂತು ಕೆಲಸ ಮಾಡುವವರಲ್ಲಿ ಹಿಮ್ಮಡಿ ಮೇಲಿನ ಒತ್ತಡ ಜಾಸ್ತಿ ಆಗುವುದರಿಂದ ಚರ್ಮದಲ್ಲಿ ಬಿರುಕು, ಹುಣ್ಣು ಮತ್ತು ರಕ್ತಸ್ರಾವದ ಸಾಧ್ಯತೆ ಜಾಸ್ತಿ.     ...