ಭಾಗ - 2 , ಆನಂದಪುರಂ ಪುರಾಭಿವೃದ್ದಿಗೆ ತನು-ಮನ-ಧನ ನೀಡಿದ ಅಯ್ಯಂಗಾರ್ ಕುಟುಂಬದ ನೆನಪು, ರಾಮಕೃಷ್ಣ ಅಯ್ಯಂಗಾರ್ ತಮ್ಮ ಪುತ್ರ ಜಗನ್ನಾಥ ಅಯ್ಯ೦ಗಾರ್ ಸ್ಮರಣಾಥ೯ ನಿಮಿ೯ಸಿದ್ದ ಪಶು ವೈದ್ಯ ಶಾಲೆ
#ಭಾಗ_2. #ಆನಂದಪುರದಲ್ಲಿ_ಅಯ್ಯಂಗಾರ್_ಕುಟುಂಬದ_ದಾನದಿಂದ_ನಿರ್ಮಿಸಿದ್ದ_ಜಗನಾಥ_ಪಶುವೈದ್ಯ_ಶಾಲೆ_ಆನಂದಪುರಂ #ಈಗಿನ_ಬೋಡ್೯ನಲ್ಲಿ_ದಾನಿಗಳ_ಹೆಸರು_ಬಿಟ್ಟಿರುವುದು_ವಿಷಾದನೀಯ ಬೋಜರಾಜ್ ಅಯ್ಯಂಗಾರರ ಅಜ್ಜ ಕಂಟ್ರಾಕ್ಟರಾಗಿದ್ದ ಶ್ರೀನಿವಾಸ ಅಯ್ಯಂಗಾರರು ರಾಮಕೃಷ್ಣ ಅಯ್ಯಂಗಾರರ ಅಣ್ಣರನ್ನು ಹಾಸನ ಜಿಲ್ಲೆಯ ಗೊರೂರಿನಿಂದ ಆನಂದಪುರಕ್ಕೆ ಕರೆ ತರುತ್ತಾರೆ ಆಗ ಬ್ರಿಟೀಶ್ ಆಡಳಿತ, ಆನಂದಪುರಂ ತಾಲ್ಲೂಕ್ ಕೇಂದ್ರವಾಗಿರುತ್ತದೆ ಅಲ್ಲಿ ತಾಲ್ಲೂಕ್ ಕಛೇರಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ನಂತರ ತಮ್ಮ ಸಹೋದರ ಲಕ್ಷ್ಮೀಪತಿ ಅಯ್ಯಂಗಾರರನ್ನು ಇಲ್ಲಿಗೆ ಕರೆ ತರುತ್ತಾರೆ. ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್. ರಾಮಕೃಷ್ಣ ಅಯ್ಯಂಗಾರ್ ಪತ್ನಿ ಕನಕಮ್ಮಾಳರು ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ. ರಾಮಕೃಷ್ಣ ಅಯ್ಯಂಗಾರ್ ಮೊದಲ ಪುತ್ರ ಅಕಾಲಿಕವಾಗಿ ಮೃತರಾದ್ದರಿಂದ ...