Blog number 2183.ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ವೈರಸ್ ಸಾಗರ ತಾಲೂಕಿನಲ್ಲಿ ಒಬ್ಬರು ಡೆಂಗ್ಯೂವಿಗೆ ಬಲಿ ಆಗಿದ್ದಾರೆ.
#ಶಿವಮೊಗ್ಗ_ಜಿಲ್ಲೆಯಲ್ಲಿ_ತಕ್ಷಣ_ನಿಯಂತ್ರಣ_ಆಗ_ಬೇಕಾದ #ಡೆಂಗ್ಯೂ_ಜ್ವರ #ಇದು_ಸರ್ಕಾರದ_ಕೆಲಸ_ಮಾತ್ರ_ಅಲ್ಲ #ಪ್ರತಿ_ಕುಟುಂಬ_ಮುಂಜಾಗ್ರತೆ_ವಹಿಸಿದರೆ_ಡೆಂಗ್ಯೂ_ತಡೆಯಬಹುದು #ನಿನ್ನೆ_ಸಾಗರ_ತಾಲ್ಲೂಕಿನ_ಆರೋಗ್ಯ_ಇಲಾಖೆ_ಅರೆಕಾಲಿಕ_ನೌಕರ #ಮುವ್ವತ್ತೇಳು_ವಯಸ್ಸಿನ_ನಾಗರಾಜ್_ಎಂಬುವವರು_ಡೆಂಗ್ಯೂ_ವೈರಸ್_ಬಲಿ_ಪಡೆದಿದೆ #ಸುಲಭವಾಗಿ_ಈಡಿಸ್_ಈಜಿಫ್ಟ್_ಸೊಳ್ಳೆ_ಗುರುತಿಸ_ಬಹುದು #ಕಪ್ಪು_ಬಿಳಿಪಿನ_ಪಟ್ಟೆ_ಸೊಳ್ಳೆ. ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ನಿನ್ನೆ ಸಾಗರ ತಾಲೂಕಿನ ವೈದ್ಯಕೀಯ ಆರೆಕಾಲಿಕಾ ಸಿಬ್ಬಂದಿ 37 ವರ್ಷದ ನಾಗರಾಜ್ ಮೃತರಾಗಿದ್ದಾರೆ. ಇವತ್ತಿನ ತನಕ ನಾನು ಡೆಂಗ್ಯೂ ವೈರಸ್ ಹರಡುವ ಸೊಳ್ಳೆ ಈಡಿಸ್ ಈಜಿಪ್ಟ್ ಸೊಳ್ಳೆ ಹಗಲಿನ ನಿದಿ೯ಷ್ಟ ವೇಳೆಯಲ್ಲಿ ಮಾತ್ರ ಕಚ್ಚುತ್ತದೆ ಎಂದೇ ತಪ್ಪಾಗಿ ತಿಳಿದಿದ್ದೆ ಆದರೆ ಡೆಂಗ್ಯೂ ಸೊಳ್ಳೆಗಳ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಯೆಂದರೆ ಅವು ಹಗಲಿನಲ್ಲಿ ಮಾತ್ರ ಕಚ್ಚುತ್ತವೆ ಎನ್ನುವುದು, ಆದರೆ ಇದು ನಿಜವಲ್ಲ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಡೆಂಗ್ಯೂಗೆ ಕಾರಣವಾಗುವ ಈಡಿಸ್ ಸೊಳ್ಳೆಗಳು ಹಗಲು ರಾತ್ರಿ ಕಚ್ಚುತ್ತವೆ. ಈಡಿಸ್ ಸೊಳ್ಳೆಗಳು ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಸಕ್ರಿಯವಾಗಿರುತ್ತವೆ. ಆದರೆ ಈ ಸೊಳ್ಳೆಗಳು ರಾತ್ರಿಯಲ್ಲಿ ವಿಶೇಷವಾಗಿ ಕತ್ತಲೆ ಕೋಣೆಗಳಲ್ಲಿ ಕಚ್ಚು...