Skip to main content

Posts

Showing posts with the label First Indian Farmers conference at Shimoga district sagar taluk Hosanthe village

Blog number 929. ಆನಂದಪುರಂ ಇತಿಹಾಸ ಭಾಗ 79.ಬಿದನೂರು ನಗರ ಸಂಸ್ಥಾನದ ರಾಜನೆಂದು ಘೋಷಿಸಿಕೊಂಡ, ಮೈಸೂರು ಮಹಾರಾಜರ ಭೂಕಂದಾಯ ಮತ್ತು ಸುಂಕದ ಸುಲಿಗೆ ವಿರುದ್ದ ಬಿದನೂರು ನಗರ ಪ್ರಾಂತ್ಯದ ರೈತರ ಚಳವಳಿ ನೇತೃತ್ವ ವಹಿಸಿದ್ದ ಮತ್ತು ಮೊದಲ ರೈತ ಸಮಾವೇಶ ಆನಂದಪುರಂ ಹೋಬಳಿಯ ಹೊಸಂತೆಯಲ್ಲಿ ನಡೆಸಿದ ಬೂದಿ ಬಸಪ್ಪ ನಾಯಕರು

#ಆನ೦ದಪುರಂ_ಇತಿಹಾಸ_ಭಾಗ_79. #ಬೂದಿಬಸಪ್ಪ_ನಾಯಕರು_ಆನಂದಪುರಂನ_ಬೆಳಂದೂರು_ಗೌಡರ_ಹೊಸಮನೆಗೆ_ಬೇಟಿ_ನೀಡುತ್ತಾರೆ #ಮೈಸೂರು_ಅರಸರ_ಜನವಿರೋದಿ_ಭೂಕಂದಾಯ_ಸುಂಕದ_ವಿರುದ್ದ_ಆನಂದಪುರಂ_ಹೋಬಳಿಯ_ಬ್ಬಹತ್_ರೈತ_ಸಮಾವೇಶ. #ಹೊಸಂತೆ_ರೈತಸಮಾವೇಷಕ್ಕೆ_ಸಹಕರಿಸಿದ್ದ_ಬೆಳಂದೂರು_ಗೌಡರ_ಮನೆತನ #ಏಪ್ರಿಲ್_1830ರಲ್ಲಿ_ಕೆಳದಿ_ಬಿದನೂರು_ಸಂಸ್ಥಾನದ_ರಾಜನೆಂದು_ಘೋಷಣೆ. #ಆನಂದಪುರಂ_ಕೋಟೆ_ಮುತ್ತಿಗೆ_ವಿಪಲ. #ಇತಿಹಾಸದಲ್ಲಿ_ಬೂದಿಬಸಪ್ಪನಾಯಕ_ದರೋಡೆಕೋರ_ಎಂದು_ಬರೆದು_ಇತಿಹಾಸಕ್ಕೆ_ಅಪಚಾರ_ಮಾಡಿದ್ದಾರೆ.    ಬೂದಿ ಬಸಪ್ಪ ನಾಯಕ ಯಾರು ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು ತಾನು ಕೆಳದಿ ವಂಶಸ್ಥರವನು ಅಂತೆಲ್ಲ ಬರೆದಿದ್ದಾರೆ.   ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟವನ್ನು ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿಯ ಮುನಿರಾಬಾದ್ ತನಕ ವ್ಯಾಪಿಸುತ್ತದೆ.   ಇವರ ಜೊತೆ ಬಿದನೂರುನಗರ ಪ್ರಾಂತ್ಯದ ರಂಗಪ್ಪ ನಾಯಕರು ಕೈಜೋಡಿಸುತ್ತಾರೆ, ಆಗ ಇವರು ನಡೆಸುತ್ತಿದ್ದ ಸಾವಿರಾರು ರೈತರು ಸೇರುತ್ತಿದ್ದ ರೈತ ಸಮಾವೇಷಕ್ಕೆ ಕುಟ್ಟ೦ ಎಂದು ಕರೆಯುತ್ತಿದ್ದರು. ...