Skip to main content

Posts

Showing posts with the label Never forgotten insidence of My life experience with Natha panth Barapanth jondi sadu satsanga

Blog number 1957. ನಾಥ ಪಂಥದ ಬಾರಾಪಂತ್ ಸಂತರೊಡನೆ ಸತ್ಸಂಗದ ಬಾಗ್ಯ 2016 ರಲ್ಲಿ ಅವರು ನೀಡಿದ ಚಿಲುಮೆ ನಿರಾಕರಿಸಲು ಸಾಧ್ಯವೇ ಇರಲಿಲ್ಲ ಇದು ನನ್ನ ಜೀವನದ ಅಮೃತ ಘಳಿಗೆ.

#ನನ್ನ_ಡಿಪಿಯಲ್ಲಿ_ನಾಥ_ಪಂಥದ_ಸನ್ಯಾಸಿಗಳ_ಜೊತೆ_ನಡೆದ_ಸತ್ಸಂಗ_ಒಂದರಲ್ಲಿ  #ನನಗೆ_ಅವರ_ತಂಬಾಕಿನ_ಚಿಲುಮೆ_ಚುಟ್ಟ_ಬಳಸಲು_ಅವಕಾಶ_ನೀಡಿದ್ದ_ಚಿತ್ರ_ಹಾಕಿದ್ದೆ  #ಅನೇಕ_ಗೆಳೆಯರು_ಈ_ಬಗ್ಗೆ_ವಿವರಣೆ_ಕೇಳಿದ್ದಾರೆ.   ಇದೊಂದು ಅಮೃತಗಳಿಗೆ ನನ್ನ ಜೀವನದಲ್ಲಿ, ನಾಥ ಪಂಥದ ಸಾಧು ಸಂತರ ಜೊತೆಯ ಸತ್ಸಂಗ, ಅವರ ಆರನೇ ಇಂದ್ರಿಯ ಜಾಗೃತವಾಗಿರುತ್ತದೆ, ಅವರು ಅಷ್ಟು ಸುಲಭವಾಗಿ ಯಾರನ್ನು ನಂಬುವುದಿಲ್ಲ ಮತ್ತು ಹತ್ತಿರ ಕೂಡ ಬಿಟ್ಟಿಕೊಳ್ಳುವುದಿಲ್ಲ ಆದರೆ ನನ್ನ ಬಗ್ಗೆ ಅವರಿಗೆ ಸದ್ಭಾವನೆ ಬರಲು ಅನೇಕ ಕಾರಣಗಳು ಇತ್ತು.  ನಾಸಿಕ್ ತ್ರಯಂಬಕೇಶ್ವರದ ಕುಂಭಮೇಳದ ಮರುದಿನ ಹೊರಡುತ್ತಾರೆ, ನೂರಾರು ಸಂತರು ಪಶ್ಚಿಮ ಘಟ್ಟದ ಮಧ್ಯದ ಮಾರ್ಗದಲ್ಲೇ ನಡೆದು ಬರುವ ಜೊಂಡಿ ಯಾತ್ರೆಯಲ್ಲಿ ಇವರು 2015 ಜುಲೈಯಲ್ಲಿ ಪ್ರಾರಂಭಿಸಿದ ನಡಿಗೆ ಮಂಗಳೂರಿನ ಕದ್ರಿ ಮಠಕ್ಕೆ 2016 ಫೆಬ್ರುವರಿಯಲ್ಲಿ ತಲುಪಿತ್ತು ಈ ಯಾತ್ರೆಯ ಹೆಸರು ಭಾರ ಪಂತ್ ಯಾತ್ರೆ.  ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯ ಹಲವಾರಿ ಮಠ ಇವರಿಗೆ ಸಂಬಂಧಿಸಿದ ಮಠ, ಇಡೀ ಭಾರತದಲ್ಲಿ ನಾಥಪಂಥದ ಕೇಂದ್ರ ಇರುವುದು ಉತ್ತರ ಪ್ರದೇಶದ ಗೋರಕಪುರದಲ್ಲಿದೆ, ಇವರ ಮುಖ್ಯಸ್ಥರಿಗೆ ಮಹಾಂತರನ್ನುತ್ತಾರೆ ಈಗಿನ ಮಹಾಂತರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು.   1978 ರಲ್ಲಿ ನಾನು ಸಾಗರದ ಮುನ್ಸಿಪಲ್ ಹೈಸ್ಕೂಲಿನ ಎಂಟನೇ ತರ...