Skip to main content

Posts

Showing posts with the label White pumpkin is best medicinel and multi purpose vegetable#

# ಬೂದು ಗುಂಬಳ ಬಹು ಉಪಯೋಗಿ ಮತ್ತು ಔಷದಿ#

    ಬೂದು ಗುಂಬಳದಲ್ಲಿ ಒಳಬಾಗ ತುರಿದು ಹಿಂಡಿ ನೀರನ್ನ ಕುಡಿದರೆ ಚಮ೯ ರೋಗ ಮತ್ತು ನರ ಸಂಬಂದಿ ರೋಗಕ್ಕೆ ಮದ್ದ೦ತೆ, ನೀರು ಹಿಂಡಿದ ನಂತರದ ತುರಿಯಿ೦ದ ಹಲ್ವಾ ಮಾಡಿ ಹಾಗು ಸಿಪ್ಪೆಯನ್ನ ಸಂಡಿಗೆ ಮಾಡುವ ಉತ್ತರ ಭಾರತದ ಜನತೆ ಇದರ ಪೂಣ೯ ಉಪಯೋಗ ಕಂಡಿದ್ದಾರೆ.   ನಮ್ಮ ಭಾಗದಲ್ಲಿ ಬೂದುಗುಂಬಳ ಅಂದರೆ ಭಾರೀ ಭಯ, ಭಕ್ತಿ. ಇದು ಮೇಲ್ ಜಾತಿಯವರು ಮಾತ್ರ ಬಳಸುವ ಪದಾಥ೯ ಅಂತ ಆಗಿಬಿಟ್ಟಿದೆ. ನಮ್ಮ ಕಲ್ಯಾಣ ಮಂಟಪದಲ್ಲಿ ಬೂದುಗುಂಬಳ ಮದುವೆಯಲ್ಲಿ ಬಳಸುವ ವಿಚಾರದಲ್ಲಿ ಒಳ್ಳೆ ಚಚೆ೯ ಆಗುತ್ತೆ, ನಾನು ಬೂದುಗುoಬಳ ಕಡಿಮೆ ದರ ಅಂತ ಬರೆಸಿದರೆ, ಅಡುಗೆ ಭಟ್ಟರು ಒಂದು ಹುಳ ಬಿಟ್ಟಿರುತ್ತಾರೆ ಇದನ್ನ ನೀವೆಲ್ಲ ಬಳಸುವಂತಿಲ್ಲ ಅಂತ ಆದರೂ ಅವರ ಮಾತು ಕೇಳದೆ ಬಳಸಲು ತೀಮಾ೯ನಿಸಿದರೆ ಮದುವೆ ಮನೆ ಹಿರಿಯರಲ್ಲಿ ಇದು ಮಂಗಳ ಕಾಯ೯ ಬೂದು ಗು೦ಬಳ ಸರಿ ಅಲ್ಲ ಅಂದರೆ ಆಯಿತು ಬೂದುಗುಂಬಳಕ್ಕೆ ಗೇಟ್ ಪಾಸ್ ಸಿಕ್ಕ೦ತೆ ಈ ರೀತಿ ಶೂದ್ರರಲ್ಲಿ ಒಂದು ಭಯ ಹೊಕ್ಕಿದೆ. ಈಗ ಮುಸ್ಲಿಂ ಜನರು ಬಿರಿಯಾನಿ, ಗೀ ರೈಸ್ ಜೊತೆಯ ದಾಲ್ ನಲ್ಲಿ ಬೂದುಗುಂಬಳ ಹಾಕಲು ಶುರು ಮಾಡಿದ್ದಾರೆ. ಸೊರ್ಯಾಸೀಸ್ ಎ೦ಬ ತೀವ್ರ ಚಮ೯ದ ರೋಗದಿಂದ ಬಳಲುತ್ತಿದ್ದ ನನ್ನ ಕ್ಲಾಸ್ ಮೇಟ್ ಒಬ್ಬರು ಎಲ್ಲಾ ಚಿಕಿತ್ಸೆ ಮಾಡಿ ಹಣ ಸಮಯ ಹಾಳು ಮಾಡಿಕೊಂಡು ಹತಾಶರಾಗಿದ್ದರು ಆಗ ಆಯುವೆ೯ದ ವೈದ್ಯರ ಸಲಹೆಯಂತೆ ಬೂದುಗುಂಬಳದ ನೀರು ನಿತ್ಯ ಕುಡಿಯಲು ಪ್ರಾರಂಬಿಸಿ ರೋಗ ಮುಕ್ತರಾಗಿದ್ದಾರೆ.  29...