Skip to main content

Posts

Showing posts with the label My First chess master Felice d Souza

ನನ್ನ ಬಾಲ್ಯದ ಚೆಸ್ ಮಾಸ್ಟರ್ ಪೆಲಿಸಣ್ಣನಿಗೆ ಈಗ 70 ವರ್ಷ

#ನನಗೆ_ಚೆಸ್_ಕಲಿಸಿದ_ಗುರು_ಇವತ್ತು_ಸಿಕ್ಕರು. #ಇವರ_ಹೆಸರು_ಪೆಲಿಕ್ಸ್_ಡಿಸೋಜ  #ನಾವೆಲ್ಲ_ಪ್ರೀತಿಯಿಂದ_ಇವರನ್ನು_ಕರೆಯುವುದು_ಪೆಲಿಸಣ್ಣ_ಊರವರ_ಬಾಯಲ್ಲಿ_ಪೆಲಿಸ.  ಇವರ ತಂದೆ ಪೇದ್ರಣ್ಣ ಕರಾವಳಿಯ ಬೈಂದೂರಿನಿಂದ ಪತ್ನಿ ಸಂತಾನ ಬಾಯಮ್ಮರ ಜೊತೆ ಸುಮಾರು1930ರ ಆಸುಪಾಸಿನಲ್ಲಿ ಆನಂದಪುರಂನಲ್ಲಿ ಸಿಗುತ್ತಿದ್ದ ಜಂಬಿಟ್ಟಿಗೆ ಕಲ್ಲು ಕೀಳಲು ಬಂದ ಕುಟುಂಬ.   ಆಗ ಚರ್ಚ್ ಕೂಡ ಆಗಿರಲಿಲ್ಲ, ಕೊಂಕಣಿ ಬಾಷೆಯ ಕೆಲ ಕ್ರಿಶ್ಚಿಯನ್ ಕುಟುಂಬಗಳು ಹೀಗೆ ಇಲ್ಲಿಗೆ ವಲಸೆ ಬಂದು ನಿಂತರು.   ಪೇದ್ರಣ್ಣ ಜಂಬಿಟ್ಟಿಗೆ ಕಡಿದು ಮಾರಾಟ ಮಾಡಿ ಜೀವನಕ್ಕೆ ಸಂಪಾದನೆ ಮಾಡಿದರೆ ಇವರ ಪತ್ನಿ ಸಂತಾನ ಬಾಯಮ್ಮ ಆನಂದಪುರಂನಲ್ಲಿ ಈಗಿನ ಪ್ರಭು ಡಾಕ್ಟರ್ ಶಾಪಿನ ಎದುರಿನ ದೋಸೆ ಕಾಮತ್ ಹೋಟೆಲ್ ಪಕ್ಕ, ಸಿರಿಲಣ್ಣರ ಸೈಕಲ್ ಶಾಪ್ ಎದರು ತರಕಾರಿಗಳನ್ನು ಬುಟ್ಟಿಯಲ್ಲಿಟ್ಟು ಮಾರಾಟ ಮಾಡಿ ಕೊಂಡಿದ್ದರು ಇದು ಆನಂದಪುರಂನ ಮೊದಲ ತರಕಾರಿ ಅಂಗಡಿ ಕೂಡ ಜೊತೆಯಲ್ಲಿ ಸುತ್ತಮುತ್ತಲ ಹಳ್ಳಿಗಳ  ರೈತ ಕುಟುಂಬಕ್ಕೆ ಕುಮಟಾದಿಂದ ಬುಧವಾರ ವೀಳ್ಯದ ಎಲೆ ತರಿಸಿ ವರ್ತನೆ ಎಲೆ ಮಾರಾಟ ಮಾಡುತ್ತಿದ್ದರು ಅಂದರೆ ವರ್ಷಪೂರ್ತಿ ವಾರಕ್ಕೆ ಒಂದೋ ಎರಡೋ ಕಟ್ಟು ವೀಳ್ಯದ ಎಲೆ ನಿರಂತರ ಪೂರೈಸಿ ಸುಗ್ಗಿಯಲ್ಲಿ ಈ ವೀಳ್ಯದ ಎಲೆಯ ಮೌಲ್ಯದ ಭತ್ತ ಪಡೆಯುವುದು ಆ ಕಾಲದ ಕ್ರಮ.   ಪೇದ್ರಣ್ಣ ಮತ್ತು ಸಂತಾನ ಬಾಯಮ್ಮರಿಗೆ ನಾಲ್ಕು ಗಂಡು ಮಕ್ಕಳು. ಸವೇರ (ಸಲಾದರ್ ಡಿಸೋಜ...