#ಇವರ_ಹೆಸರು_ಪೆಲಿಕ್ಸ್_ಡಿಸೋಜ
#ನಾವೆಲ್ಲ_ಪ್ರೀತಿಯಿಂದ_ಇವರನ್ನು_ಕರೆಯುವುದು_ಪೆಲಿಸಣ್ಣ_ಊರವರ_ಬಾಯಲ್ಲಿ_ಪೆಲಿಸ.
ಇವರ ತಂದೆ ಪೇದ್ರಣ್ಣ ಕರಾವಳಿಯ ಬೈಂದೂರಿನಿಂದ ಪತ್ನಿ ಸಂತಾನ ಬಾಯಮ್ಮರ ಜೊತೆ ಸುಮಾರು1930ರ ಆಸುಪಾಸಿನಲ್ಲಿ ಆನಂದಪುರಂನಲ್ಲಿ ಸಿಗುತ್ತಿದ್ದ ಜಂಬಿಟ್ಟಿಗೆ ಕಲ್ಲು ಕೀಳಲು ಬಂದ ಕುಟುಂಬ.
ಆಗ ಚರ್ಚ್ ಕೂಡ ಆಗಿರಲಿಲ್ಲ, ಕೊಂಕಣಿ ಬಾಷೆಯ ಕೆಲ ಕ್ರಿಶ್ಚಿಯನ್ ಕುಟುಂಬಗಳು ಹೀಗೆ ಇಲ್ಲಿಗೆ ವಲಸೆ ಬಂದು ನಿಂತರು.
ಪೇದ್ರಣ್ಣ ಜಂಬಿಟ್ಟಿಗೆ ಕಡಿದು ಮಾರಾಟ ಮಾಡಿ ಜೀವನಕ್ಕೆ ಸಂಪಾದನೆ ಮಾಡಿದರೆ ಇವರ ಪತ್ನಿ ಸಂತಾನ ಬಾಯಮ್ಮ ಆನಂದಪುರಂನಲ್ಲಿ ಈಗಿನ ಪ್ರಭು ಡಾಕ್ಟರ್ ಶಾಪಿನ ಎದುರಿನ ದೋಸೆ ಕಾಮತ್ ಹೋಟೆಲ್ ಪಕ್ಕ, ಸಿರಿಲಣ್ಣರ ಸೈಕಲ್ ಶಾಪ್ ಎದರು ತರಕಾರಿಗಳನ್ನು ಬುಟ್ಟಿಯಲ್ಲಿಟ್ಟು ಮಾರಾಟ ಮಾಡಿ ಕೊಂಡಿದ್ದರು ಇದು ಆನಂದಪುರಂನ ಮೊದಲ ತರಕಾರಿ ಅಂಗಡಿ ಕೂಡ ಜೊತೆಯಲ್ಲಿ ಸುತ್ತಮುತ್ತಲ ಹಳ್ಳಿಗಳ ರೈತ ಕುಟುಂಬಕ್ಕೆ ಕುಮಟಾದಿಂದ ಬುಧವಾರ ವೀಳ್ಯದ ಎಲೆ ತರಿಸಿ ವರ್ತನೆ ಎಲೆ ಮಾರಾಟ ಮಾಡುತ್ತಿದ್ದರು ಅಂದರೆ ವರ್ಷಪೂರ್ತಿ ವಾರಕ್ಕೆ ಒಂದೋ ಎರಡೋ ಕಟ್ಟು ವೀಳ್ಯದ ಎಲೆ ನಿರಂತರ ಪೂರೈಸಿ ಸುಗ್ಗಿಯಲ್ಲಿ ಈ ವೀಳ್ಯದ ಎಲೆಯ ಮೌಲ್ಯದ ಭತ್ತ ಪಡೆಯುವುದು ಆ ಕಾಲದ ಕ್ರಮ.
ಪೇದ್ರಣ್ಣ ಮತ್ತು ಸಂತಾನ ಬಾಯಮ್ಮರಿಗೆ ನಾಲ್ಕು ಗಂಡು ಮಕ್ಕಳು. ಸವೇರ (ಸಲಾದರ್ ಡಿಸೋಜ) ಪಾರೇಸ್ಟ್ ರ್ ಆಗಿ ನಿವೃತ್ತರಾಗಿದ್ದಾರೆ, ಎರಡನೆಯವರೆ ಪೆಲಿಸ, ಮೂರನೆ ಡೆನ್ನಿಸಾ (ಡೇನಿಯಲ್ ಡಿಸೋಜ) ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ,ನಾಲ್ಕನೆ ವಿಲ್ಲಾ (ವಿಲ್ಪ್ರೆಡ್) ಖಾಸಾಗಿ ಕೆಲಸ ಮಾಡಿಕೊಂಡಿದ್ದಾರೆ.
ನಮ್ಮ ಬಾಲ್ಯದಲ್ಲಿ ಈ ಪೆಲಿಸ ಎಲ್ಲರನ್ನು ರಂಜಿಸುವ ಅತ್ಯಾಪ್ತ ಮತ್ತು ಇಡೀ ಊರಿಗೆ ಸಮಸ್ಯೆ ತರುತ್ತಿದ್ದ ಕಿಲಾಡಿ ಆ ಕಾಲದಲ್ಲಿ ಬಾಡಿಗೆ ಸೈಕಲ್ ನಲ್ಲಿ ಪಕ್ಕದ ತಾಲ್ಲೂಕಿನ ಬಟ್ಟೆಮಲ್ಲಪ್ಪ ಎಂಬ ಊರಲ್ಲಿ ಇಸ್ಪೀಟ್ ಆಡಲು ಹೋಗಿ ಹಣ ಕಳೆದು ಕೊಂಡು ಬಾಡಿಗೆ ಸೈಕಲ್ ಅಡಮಾನ ಮಾಡಿ ಕೆಲ ತಿಂಗಳು ನಾಪತ್ತೆ ಆದಾಗ ಈ ಸೈಕಲ್ ಪತ್ತೆ ಮಾಡಿ ತರುವಲ್ಲಿ ಎರೆಡೂ ಊರಿಗೇ ಜಗಳ ಹೊಡೆದಾಟ ಆಗಿತ್ತು.
ದೂರದ ಎನ್.ಆರ್.ಪುರದ ಸುರೇಂದ್ರ ರೇ೦ಜರ್ ಇವರಿಗೆಲ್ಲ ಉದ್ಯೋಗ ಕೊಟ್ಟಿದ್ದರು ಅವರ ಆಪ್ತನಾಗಿ ಅವರಿಗೆ ಅಡಿಗೆ ಇತ್ಯಾದಿ ಮಾಡುತ್ತ ಪೆಲಿಸ ಆಪ್ತನಾಗಿದ್ದ.
ಅವರಿಗೆ ಚೆಸ್ ಆಟದಲ್ಲಿ ಪೆಲಿಸನೇ ಒಳ್ಳೇ ಕಂಪನಿ ಏಕೆಂದರೆ ಚೆಸ್ ನಲ್ಲಿ ಪೆಲಿಸನಿಗೆ ಸೋಲಿಸಿದವರಿಲ್ಲ.
1975-76 ರಲ್ಲಿ ನಮಗೆಲ್ಲ ಚೆಸ್ ಕಲಿಯುವ ಹುಮ್ಮಸ್ಸು ನಮ್ಮ ತಂದೆ ಶಿವಮೊಗ್ಗದಿಂದ ಚೆಸ್ ಬೋರ್ಡ್ ಮತ್ತು ಪಾನ್ ನಮಗಾಗಿ ಖರೀದಿಸಿ ಈ ಪೆಲಿಸನಿಗೆ ಚೆಸ್ ಕಲಿಸುವ ಗುರುವಾಗಿ ನೇಮಿಸಿದರು ಜೊತೆಗೆ ಅವರೂ ಕಲಿತರು ನಂತರ ಕೆಲ ವರ್ಷ ನಾವೆಲ್ಲ ಚೆಸ್ ಆಟಗಾರರಾಗಿ ಅನೇಕ ಹೊಸ ಚೆಸ್ ಬೋರ್ಡ್ ಖರೀದಿಸಿದರೂ ಈ ಚೆಸ್ ಗುರು ಪೆಲಿಸನನ್ನ ಸೋಲಿಸಲು ಪ್ರಯಾಸ ಪಡುತ್ತಿದ್ದೆವು.
ರೇಂಜರ್ ಸುರೇಂದ್ರರರ ಜೊತೆ ಇದ್ದಿದ್ದರೆ ಅರಣ್ಯ ಇಲಾಖೆಯಲ್ಲಿ ಖಾಯಂ ಉದ್ಯೋಗಿ ಆಗುವ ಅವಕಾಶ ಬಿಟ್ಟು ಪೆಲಿಸ ಪಕ್ಕದ ಸಿದ್ಧಾಪುರದಲ್ಲಿ ಪ್ರೇಮ ಪ್ರಕರಣದಲ್ಲಿ ಸಿಲುಕಿ ವಿವಾಹ ಆಗಿ ಜೀವನಕ್ಕೆ ಗಾರೆ ಮೇಸ್ತ್ರಿ ಆದದ್ದು, ಕುಡಿತ ಜಾಸ್ತಿ ಮಾಡಿಕೊಂಡಿದ್ದು ನಮಗೆಲ್ಲ ಬೇಸರ ಆದರೂ ಪೆಲಿಸನ ಒಡನಾಟದಲ್ಲಿ ಹಾಸ್ಯಮಯವಾಗಿ ಪರಿವರ್ತನೆ ಆಗುತ್ತಿದ್ದ ಸನ್ನಿವೇಶದಿಂದ ನಮಗೆಲ್ಲ ಪೆಲಿಸ ಅತ್ಯಾಪ್ತ.
ಅತ್ಯಂತ ರುಚಿಕಟ್ಟಾದ ಅಡುಗೆ ಪ್ರವೀಣ ಕೂಡ ಹೌದು, ನಮ್ಮ ತಾಯಿ ಬಾಲ್ಯದಲ್ಲೇ ತೀರಿಕೊಂಡಿದ್ದರಿಂದ ನಾವೇ ಅಡುಗೆ ಮಾಡಿಕೊಳ್ಳಬೇಕಾದ್ದರಿಂದ ಅನೇಕ ಅಡುಗೆ ಕಲೆ ಕೂಡ ಪೆಲಿಸನಿಂದ ಕಲಿತಿದ್ದೆ.
Comments
Post a Comment