Skip to main content

Posts

Showing posts with the label K.L.Manjunath sagar social service is different and transferrant

Blog number 1691. ಸಾಗರದ ವಿಬಿನ್ನ ರಾಜಕಾರಣಿ ಮಂಜುನಾಥ್ ಕೆ.ಎಲ್.ಇವರು ನಗರ ಸಭಾ ಸದಸ್ಯರಾಗಿದ್ದಾಗ ಸಾಗರದ ಮಾರಿಕಾಂಬಾ ದೇವಿಯ ಎದರು ಲಂಚ ಪಡೆದಿಲ್ಲ ಎಂದು ಪ್ರಮಾಣ ಮಾಡಿ ಆಶ್ರಯ ಹಕ್ಕು ಪತ್ರ ನೀಡಿದ್ದರು ಫಲಾನುಭವಿಗಳೂ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಪಡೆದಿದ್ದು ಆಗ ದೊಡ್ಡ ಸುದ್ದಿ.

#ಸಾಗರದ_ನಗರ_ಸಭಾ_ಸದಸ್ಯರಾಗಿದ್ದಾಗ_ಮಂಜುನಾಥ್_ತಮ್ಮ_ವಾರ್ಡಿನಲ್ಲಿ_ಆಶ್ರಯ_ಹಕ್ಕು_ಪತ್ರ_ನೀಡುವಾಗ #ಅವರೂ_ಮತ್ತು_ಫಲಾನುಭವಿಗಳು_ಸಾಗರ_ಮಾರಿಕಾಂಬಾ_ದೇವಾಲಯದಲ್ಲಿ_ಮಾಡಿದ_ಪ್ರಮಾಣ. #ನಗರಸಭಾ_ಸದಸ್ಯನಾಗಿ_ಹಕ್ಕುಪತ್ರಕ್ಕೆ_ಲಂಚ_ಪಡೆದಿಲ್ಲ_ಅಂತ_ಮಂಜಣ್ಣ. #ಹಕ್ಕು_ಪತ್ರಕ್ಕೆ_ಲಂಚ_ನೀಡಿಲ್ಲ_ಅಂತ_ಫಲಾನುಭವಿಗಳು_ದೇವರ_ಎದರು_ಪ್ರಮಾಣ_ಮಾಡಿದ್ದರು. #ಇದು_ಅನುಕರಣೀಯ_ಆಗಬೇಕಾಗಿತ್ತು' #ಈವರೆಗೆ_ಯಾರು_ಇಂತಹ_ದೈಯ೯_ಮಾಡಲಿಲ್ಲ.   ಸಾಗರದ ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ ಅವಧಿಯಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯಲ್ಲಿ ಅವ್ಯವಹಾರದ ಸುದ್ದಿ ದೊಡ್ಡದಾಗಿ ಕೇಳಿಬಂದಿತ್ತು.   ಆದರೆ ಇಲ್ಲಿನ ನಗರಸಭಾ ಸದಸ್ಯರು ತಮ್ಮ ವಾಡಿ೯ನ ಆಶ್ರಯ ಫಲಾನುಭವಿಗಳನ್ನ ಸಾಗರದ ಮಾರಿಕಾಂಭ ದೇವಾಲಯಕ್ಕೆ ಕರೆದೊಯ್ದು ಆಶ್ರಯ ಹಕ್ಕು ಪತ್ರ ನೀಡುವಲ್ಲಿ ತಾವು ಹಣ ಪಡೆದಿಲ್ಲ ಅಂತಲೂ ಹಾಗೆ ಫಲಾನುಭವಿಗಳೂ ತಾವೂ ನಗರಸಭಾ ಸದಸ್ಯ ಮಂಜಣ್ಣನಿಗೆ ಹಣ ನೀಡಿಲ್ಲ ಅಂತ ಪ್ರಮಾಣ ಮಾಡಿದ್ದರು.    ಇದು ದೊಡ್ಡ ಸುದ್ದಿ ಆಗಿತ್ತು.   ಇಲ್ಲಿ ಗಮನಿಸ ಬೇಕಾದದ್ದು ಜನಪ್ರತಿನಿದಿ ಒಬ್ಬರೆ ಪ್ರಮಾಣ ಮಾಡಿದರೆ ನಂಬಲು ಕಷ್ಟವಿತ್ತು ಆದರೆ ಫಲಾನುಭವಿಗಳು ಸೇರಿ ಪ್ರಮಾಣ ಮಾಡಿದ್ದಾರೆ.    ಈಗೆಲ್ಲ ಆಶ್ರಯ ನಿವೇಶನ ಹಂಚಿಕೆಯಲ್ಲಿ ಹಣವೇ ನಿಣಾ೯ಯಕ ಯಾಕೆಂದರೆ ನಿವೇಶನದ ಬೆಲೆ ಮಾರುಕಟ್ಟೆಯಲ್ಲಿ 10 ಲಕ್ಷ ಮಾರುಕಟ್ಟೆ ಬೆಲೆ ಇ...