ಅಡಿಕೆ_ಗುಟ್ಕಾ_ತಪ್ಪು_ಗ್ರಹಿಕೆ_ಪ್ರಚಾರ ಇದರಿಂದ_ಅಡಿಕೆ_ಬೆಳೆಗಾರ_ಬಲಿಪಶು. ವಿಶ್ವ ಆರೋಗ್ಯ ಸಂಸ್ಥೆ (WHO) ಅಥವಾ ಅದರ ಅಂಗಸಂಸ್ಥೆಯಾದ IARC (International Agency for Research on Cancer) ಅಡಿಕೆಯನ್ನು ಕ್ಯಾನ್ಸರ್‌ಕಾರಕ (Carcinogenic) ಪಟ್ಟಿಯಲ್ಲಿ ಸೇರಿಸಿದೆ. 2003ರಲ್ಲಿ IARC ಅಡಿಕೆಯನ್ನು ತಂಬಾಕು ಸೇರಿಸದಿದ್ದರೂ ಸಹ ಮಾನವರಲ್ಲಿ ಬಾಯಿಯ ಕ್ಯಾನ್ಸರ್ ಉಂಟುಮಾಡುವ 'ಗ್ರೂಪ್ 1 ಕ್ಯಾನ್ಸರ್‌ಕಾರಕ' (Group 1 Carcinogen) ಎಂದು ವರ್ಗೀಕರಿಸಿದೆ ಇದು ಅಡಿಕೆ ಬೆಳೆಗಾರರಿಗೆ ಆತಂಕದ ಸಂಗತಿ. ಭಾರತದ ಎಲ್ಲಾ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಗುಟ್ಕಾ ಮತ್ತು ತಂಬಾಕು/ನಿಕೋಟಿನ್ ಬೆರೆಸಿದ ಪಾನ್ ಮಸಾಲಾದ ಉತ್ಪಾದನೆ, ಶೇಖರಣೆ, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ (FSSAI - Food Safety and Standards Act, 2006) ನಿಯಮಾವಳಿಗಳ ಪ್ರಕಾರ, ಯಾವುದೇ ಆಹಾರ ಪದಾರ್ಥಗಳಲ್ಲಿ 'ತಂಬಾಕು ಅಥವಾ ನಿಕೋಟಿನ್' ಅನ್ನು ವಸ್ತುವಾಗಿ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಭಾರತದಲ್ಲೇ ಮೊದಲ ಬಾರಿಗೆ 2012ರಲ್ಲಿ ಮಧ್ಯಪ್ರದೇಶ ರಾಜ್ಯವು ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿತು ತದನಂತರ ಎಲ್ಲಾ ರಾಜ್ಯಗಳು ಒಂದೊಂದಾಗಿ ಈ ನಿಷೇಧವನ್ನು ಜಾರಿಗೆ ತಂ...