Blog number 1295. ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮಾಜಿ ಜಿಲ್ಲಾದ್ಯಕ್ಷ ತೀ.ನಾ.ಶ್ರೀನಿವಾಸ್ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ.
#ಶಿವಮೊಗ್ಗ_ಜಿಲ್ಲಾ_ಕಾಂಗ್ರೇಸ್_ಮಾಜಿ_ಅಧ್ಯಕ್ಷ_ತೀನಾ_ಶ್ರೀನಿವಾಸ್_ರಾಜಿನಾಮೆ #ಕಾಂಗ್ರೇಸ್_ಪಕ್ಷದಲ್ಲಿ_ಸ್ಪರ್ದಿಸಲು_ಹಣ_ಕೇಳುತ್ತಾರೆ೦ಬ_ಆರೋಪ #ದಿನೇಶ್_ಗುಂಡೂರಾವ್_ಜಿಲ್ಲಾಧ್ಯಕ್ಷ_ಸ್ಥಾನ_ಕಸಿದುಕೊಂಡ_ಬಗ್ಗೆ #ಮದು_ಬಂಗಾರಪ್ಪಗೆ_ಮೂರು_ಹುದ್ದೆ_ಇತ್ಯಾದಿ_ಅವರ_ಆರೋಪ. ತೀನಾ ಶ್ರೀನಿವಾಸ್ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಮಾಡಿದವರು ತಾಯಿ ಸರ್ಕಾರಿ ಕನ್ನಡ ಶಾಲೆ ಶಿಕ್ಷಕಿ, ಇವರ ಹುಟ್ಟು ತೀರ್ಥಹಳ್ಳಿಯ ಛತ್ರಕೇರಿಯಲ್ಲಿ. ನಂತರ ಶಿಕಾರಿಪುರ, ಜೋಗ ಮತ್ತು ಸಾಗರಗಳಲ್ಲಿ ಇವರ ವಿದ್ಯಾಬ್ಯಾಸ ನಡೆಯಿತು. ಜೋಗದಲ್ಲಿ ಮತ್ತು ಸಾಗರದ ಕಾಲೇಜಿನಲ್ಲಿ ತೀ.ನಾ. ಶ್ರೀನಿವಾಸ್ ವಿದ್ಯಾರ್ಥಿ ಮುಖಂಡರು ಆಗಲೇ ಸಾಗರದ ಪೋಲಿಸ್ ಠಾಣೆಯಲ್ಲಿ ಕೃಷಿ ಕಾರ್ಮಿಕ ರಾಮನ ಲಾಕ್ ಅಪ್ ಡೆತ್ ನಿಂದ ಸಾಗರದ ವಿದ್ಯಾರ್ಥಿ ವೃಂದವನ್ನು ಹೋರಾಟಕ್ಕೆ ಇಳಿಸಿದವರು ತೀ.ನಾ ಶ್ರೀನಿವಾಸ್. ನಂತರ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಅವರ ಜೊತೆ ಸೇರಿ ಅವರ ದಿನಪತ್ರಿಕೆ ನ್ಯಾಯದ ತಕ್ಕಡಿ ಸಂಪಾದಕರಾಗಿ ನ್ಯಾಯದ ಪರ ಹೋರಾಟಕ್ಕೆ ಬೆಂಬಲಿಸಿ ವರದಿಗಳನ್ನು ಮಾಡಿದ್ದರಿಂದ ಜಮೀಲ್ ಎಂಬ ಪೋಲಿಸ್ ಇನ್ಸ್ಪೆಕ್ಟರ್ ರಿಂದ ದೌಜ೯ನ್ಯ ನಡೆದದ್ದು ಆಗ ರಾಜ್ಯದಲ್ಲೇ ದೊಡ್ಡ ಸುದ್ದಿ ಇದು ವಿಧಾನಸಭೆಯಲ್ಲಿ ದೊಡ್ಡ ಚರ್ಚೆ ಆಗಿತ್ತು. ಎರೆಡು ಅವದಿ ಶಾಸಕರಾಗಿದ್ದ ಕಾಂಗ್ರೇಸ್ ನ ಎಲ್.ಟಿ.ತಿಮ್ಮಪ...