ನಾನು_ಮೊದಲ_ಬಾರಿಗೆ ಜೋಗ_ಜಲಪಾತ_ನೋಡಿದ್ದು_1977. ಅವತ್ತು ಜೋಗ್ ಫಾಲ್ಸ್ ಎದುರು ಅಗಾದ ಪ್ರಮಾಣದ ನೀರು ರಭಸದಲ್ಲಿ ದುಮ್ಮಿಕ್ಕುವ ಶಬ್ದ -ಕಂಪನ ಭಯ ಉಂಟು ಮಾಡಿದ್ದು ಮರೆಯಲಾರೆ ... ಆ ವರ್ಷ ಲಿಂಗನಮಕ್ಕಿ ಅಣೆಕಟ್ಟಿನ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು ತೆರೆದು ಅಗಾಧ ಪ್ರಮಾಣದ ನೀರನ್ನು ಹೊರ ಬಿಡಲಾಗಿತ್ತು. ಸಾಗರದ ಅಂದಿನ ಎಲ್ ಬಿ ಕಾಲೇಜಿನ ಬ್ಯಾಡ್ಮಿಂಟನ್ ತಾರೆ ನಮ್ಮೂರಿನ #ಗಣಪತಿಶೇಟ್ ನಮಗೆ ಜೋಗ್ ಫಾಲ್ಸ್ ತೋರಿಸಿದ ಮಿತ್ರ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೇರುಸೊಪ್ಪ ಕೊಳ್ಳದಲ್ಲಿ ಜೋಗ್ ಜಲಪಾತವಾಗಿ ಧಮ್ಮಿಕ್ಕುತ್ತದೆ. ಸಾಗರ ಮತ್ತು ಸಿದ್ದಾಪುರ ತಾಲೂಕಿನ ಎಲ್ಲರೂ ಜೋಗ ಜಲಪಾತ ನೋಡಿದ್ದಾರೆಂದು ಎಲ್ಲರೂ ಭಾವಿಸುತ್ತಾರೆ ಕಾರಣ ಅಷ್ಟು ಸಮೀಪದ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡದೇ ಇರಲು ಹೇಗೆ ಸಾಧ್ಯ? ಎಂಬುದು ಅವರ ಭಾವನೆ. ಆದರೆ ಸಮೀಪದವರು ಈ ಜೋಗ ಜಲಪಾತ ನೋಡದೇ ಇರುವವರು ಅನೇಕರಿದ್ದಾರೆ, ನಾನು ನನ್ನ 12ನೇ ವಯಸ್ಸಿನ ತನಕ ಜೋಗ ಜಲಪಾತ ನೋಡಿರಲಿಲ್ಲ. ನಾನು 8 ನೇ ತರಗತಿಗೆ ಸಾಗರ ಮುನ್ಸಿಪ್ ಹೈಸ್ಕೂಲ್ ಸೇರಿದಾಗ ನಿತ್ಯ ಬೆಳಿಗ್ಗೆ ರೈಲಿನಲ್ಲಿ ಸಾಗರಕ್ಕೆ ಹೋಗಿ ಕ್ಲಾಸ್ ಮುಗಿಸಿ ಸಂಜೆ ರೈಲಿನಲ್ಲಿ ವಾಪಾಸು ಬರುವ ಅನೇಕ ನಮ್ಮ ಊರಿನ ವಿದ್ಯಾರ್ಥಿ ವೃಂದದೊಂದಿಗೆ ನನ್ನ ಪಯಣ. ...