#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_20 #ದಿನಾ0ಕ_23_ಏಪ್ರಿಲ್_2020 * ಎಲ್ಲಿ ಹೋದವು ಜನರ ಜ್ವರ, ಹೊಟ್ಟೆನೋವು, ಕಾಲು ನೋವು ಎಂಬ ನಿತ್ಯ ಕಾಯಿಲೆ?. * ಶೇಕಡಾ 3% ಮಾತ್ರ ದೇಹದ ಕಾಯಿಲೆ ಉಳಿದ 97% ಮಾನಸಿಕ ಕಾಯಿಲೆ ಎಂಬುದು ಸಾಬೀತಾಯಿತು! * ವೈದ್ಯರ ಬೇಟಿ ಮಾಡಲಿಲ್ಲ ಚಿಕಿತ್ಸೆ ಪಡೆಯಲಿಲ್ಲ ಆದರೂ ಸಾವಿನ ಸಂಖ್ಯೆ ಕಡಿಮೆ ಏಕೆ?!. ಇಂಥಹ ಪ್ರಶ್ನೆ ಒಂದು ಕೊರಾನ ವೈರಸ್ ನಿಯ೦ತ್ರಿಸಲಿಕ್ಕಾಗಿ ಲಾಕ್ ಡೌನ್ ಪ್ರಾರಂಭ ಆದ 15 ದಿನದಲ್ಲೇ ಸಾವ೯ಜನಿಕರಲ್ಲಿ ಉ೦ಟಾಗಿದೆ. ಹಳ್ಳಿಗಳಲ್ಲೂ ಕ್ಲೀನಿಕ್ ಗಳಲ್ಲಿ ಒಳಹೋಗಲಾರದಷ್ಟು ರೋಗಿಗಳಿರುತ್ತಿದ್ದದ್ದು ಮಾಮೂಲಾಗಿತ್ತು ಹಾಗಂತ ಹೊಬಳಿ ಕೇಂದ್ರದ ಹಳ್ಳಿಗಳಲ್ಲಿ 5-6 ಕ್ಲೀನಿಕ್ ಗಳು, ಸಕಾ೯ರಿ ಆಸ್ಪತ್ರೆ, ಮೆಡಿಕಲ್ ಶಾಪ್, ಲ್ಯಾಬೊರೇಟರಿಗಳಿಗೆ ಪುರುಸೊತ್ತೆ ಇರಲಿಲ್ಲ. ಇಲ್ಲಿನ ವೈದ್ಯರು ಹೆಚ್ಚಿನ ಪರೀಕ್ಷೆ ಚಿಕಿತ್ಸೆ ಅಂತ ತಾಲ್ಲೂಕ್ ಕೇ೦ದ್ರಕ್ಕೆ ಅಲ್ಲಿನವರು ಜಿಲ್ಲಾ ಕೇಂದ್ರದ ಮಲ್ಟಿ ಸ್ಪೆಷಲ್ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದರು. ಎಲ್ಲಾ ಜಿಲ್ಲಾ ಕೇಂದ್ರಗಳು ಮೆಡಿಕಲ್ ಹಬ್ ಗಳಾಗಿದೆ ಇದರ ಮಧ್ಯ ಖಾಸಾಗಿ ಮೆಡಿಕಲ್ ಕಾಲೇಜ್ ಗಳು ಸಕಾ೯ರಿ ಮೆಡಿಕಲ್ ಕಾಲೇಜ್ ಗಳು ಅವುಗಳ ಆಸ್ಪತ್ರೆ ಎಲ್ಲವೂ ಅಸಾಧ್ಯ ಜನಜಂಗುಳಿಯಿಂದ ತುಳುಕುತ್ತಿತ್ತು. ಜನ ಸಾಮಾನ್ಯರು ವೈದ್ಯಕಿಯ ಚಿಕಿತ್ಸೆ ಪರೀಕ್ಷ...