Skip to main content

Posts

Showing posts with the label kundadri hill top of Shimoga DIST

ಕು೦ದಾದ್ರಿ ಎಂಬ ಸುಂದರ ಪವ೯ತ ತಾಣ

ಕುOದಾದ್ರಿ ಬೆಟ್ಟ.   ಶಿವಮೊಗ್ಗದಿಂದ 80 ಕಿಮಿ ಆಗುಂಬೆ (ತೀಥ೯ಹಳ್ಳಿ) ಮಾಗ೯ದಲ್ಲಿ ಸಾಗಿದರೆ ಕುಂದಾದ್ರಿ ಸಿಗುತ್ತದೆ, ಗುಡ್ಡೆಕೇರಿ ಎಂಬ ಊರಿಂದ ಎಡಕ್ಕೆ ಹೋಗಬೇಕು ಇಲ್ಲಿ೦ದ ಆಗುOಬೆ ಸಮೀಪದಲ್ಲಿದೆ. ಕುವೆಂಪುರವರು ಕುಂದಾದ್ರಿ ಬೆಟ್ಟದಲ್ಲಿ ಸೂಯೋ೯ದಯ ವೀಕ್ಷಿಸಲಿಕ್ಕಾಗಿ ಸಮೀಪದ ಸಂಬಂದಿಗಳ ಮನೆಯಲ್ಲಿ ರಾತ್ರಿ ತಂಗಿ ಬೆಳಗಾಗುವ ಮುನ್ನ ಬೆಟ್ಟ ಏರಿ ಸೂಯೋ೯ದಯ ವೀಕ್ಷಿಸಿದ ಅನುಭವ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.     ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದ ಸುಪದಿ೯ಯಲ್ಲಿರುವ ಈ ಸ್ಥಳ ಇತ್ತೀಚಿನವರೆಗೆ ನಕ್ಸಲೇಟ ಪೀಡಿತ ವ್ಯಾಪ್ತಿ ಪ್ರದೇಶವಾದ್ದರಿಂದ ಪ್ರವಾಸಿಗಳಿಗೆ ಪ್ರವೇಶಕ್ಕೆ ಮಿತಿ ಇತ್ತು, ಈಗ ಅಂತಹ ನಿಬ೯೦ದವಿಲ್ಲ.    ಸುಮಾರು 2000 ವಷ೯ದ ಹಿಂದೆ ಜೈನ ಆಚಾಯ೯ ಮುನಿಗಳಾದ ಕುಂದ ಕುಂದಾಚಾಯ೯ರು ದಟ್ಟಡವಿಯ ಸಮುದ್ರ ಮಟ್ಟದಿಂದ 3200 ಅಡಿ ಎತ್ತರದ ಇಲ್ಲಿ ತಪಸ್ಸು ಮಾಡಿದ್ದರು ಮತ್ತು ಜೈನರ ಪವಿತ್ರ ಗ್ರಂಥ ಅನುಸರಣ ಇಲ್ಲೇ ರಚಿಸಿದ್ದರಿಂದ ಈ ಸ್ಥಳ ದೇಶದ ಜೈನರಿಗೆ ಅತ್ಯಂತ ಪವಿತ್ರ ಮತ್ತು ಪುಣ್ಯ ಸ್ಥಳವಾಗಿದೆ.   ಈಗ ಇಲ್ಲಿಗೆ ವಾಹನಗಳು ಸರಾಗವಾಗಿ ತಲುಪುತ್ತದೆ ಆದರೂ ಕಡಿದಾದ ತಿರುವು, ಅಲ್ಲಿಂದ ಅತ್ಯಂತ ಆಳದಲ್ಲಿ ಕಾಣುವ ಊರು, ಮನೆಗಳು ಭಯ ಉoಟು ಮಾಡುತ್ತದೆ, ಶ್ರೀಮತಿ ಕಾಡಮ್ಮ ನಾಗಪ್ಪ ಹೆಗ್ಗಡೆ ದಂಪತಿಗಳು ಇಲ್ಲಿಗೆ ರಸ್ತೆ ಮಾಡಿಸಿಕೊಟ್ಟ ದಾನಿಗಳOತೆ.    ಇತ್ತೀಚಿಗೆ ಬೆಟ್ಟದ ತು...