Skip to main content

Posts

Showing posts with the label Muddanna Manorama sallapa

Blog number 2074. ಮಹಾಕವಿ ಮುದ್ದಣ್ಣ ಮತ್ತು ಅವರ ಸಂಗಾತಿ ಮನೋರಮ ಸ್ಮರಣೆ, ಮನೋರಮರ ನಿಜ ನಾಮ ಕಮಲಾ ಬಾಯಿ ಅವರ ತವರು ಶಿವಮೊಗ್ಗ ಜಿಲ್ಲೆಯ ಕಾಗೆ ಕೊಡಮಗ್ಗಿ ಗ್ರಾಮ

#ಅರವಿಂದ_ಚೊಕ್ಕಾಡಿ_ಮಗ_ಪ್ರಣಯನ_ಉಪನಯನ #ಮೂಡಬಿದರೆ_ಸಮಾಜ_ಮಂದಿರದಲ್ಲಿ #ಅಲ್ಲಿಂದ_ಮಹಾಕವಿ_ಮುದ್ದಣ್ಣರ_ನಂದಳಿಕೆ_ಮನೆಗೆ_25_ಕಿಲೋ_ಮೀಟರ್ #ಮುದ್ದಣ್ಣರ_ಮೂಲ_ಹೆಸರು_ನಂದಳಿಕೆ_ಲಕ್ಷ್ಮೀನಾರಾಯಣ #ಮನೋರಮ_ಮೂಲ_ಹೆಸರು_ಕಮಲಾ_ಬಾಯಿ #ಶಿವಮೊಗ್ಗ_ಜಿಲ್ಲೆಯ_ಕಾಗೆ_ಕೊಡ_ಮಗ್ಗಿ_ಗ್ರಾಮ #ಮುದ್ದಣ್ಣ_ಮನೋರಮರ_ಮಗ_ರಾದಾಕೃಷ್ಣ_ಶಿವಮೊಗ್ಗದ_A_V_ಗರ್ಲ್ಸ್_ಸ್ಕೂಲ್_ಅಧ್ಯಾಪಕರಾಗಿದ್ದರು.   ಬರುವ ಮೇ 2 ನೇ ತಾರೀಖು ಬೆಳಿಗ್ಗೆ ಆತ್ಮೀಯರಾದ ಅರವಿಂದ ಚೊಕ್ಕಾಡಿ ಅವರ ಪುತ್ರ ಪ್ರಣಯನ ಉಪನಯನ ಕಾರ್ಯಕ್ರಮಕ್ಕೆ ಮೂಡಬಿದರೆಯ ಸಮಾಜ ಮಂದಿರ ತಲುಪುವುದು ಅಲ್ಲಿನ ಕಾರ್ಯಕ್ರಮ ಮುಗಿಸಿ ಅಲ್ಲಿಂದ 25 ಕಿ.ಮಿ. ದೂರದ ನಂದಳಿಕೆಗೆ ಹೋಗಿ ಮಹಾ ಕವಿ ಮುದ್ದಣ್ಣರ ಮೂಲ ಮನೆ ಮತ್ತು ಸ್ಮಾರಕ ನೋಡಿ ಕಾರ್ಕಳ ಮಾಗ೯ವಾಗಿ ಆಗುಂಬೆ ಘಾಟಿ ಹತ್ತಿ ಊರು ಸೇರುವ ತೀಮಾ೯ನ ನನ್ನದು.    ನನ್ನ ಮನೆಯಲ್ಲಿ ನಾನು ಒಂದನೆ ತರಗತಿ ಶಾಲೆಗೆ ಸೇರಿದಾಗ ನನ್ನಣ್ಣ 10 ನೇ ತರಗತಿ, ದೊಡ್ಡಕ್ಕ 8ನೇ ತರಗತಿ ಮತ್ತು ಸಣ್ಣಕ್ಕ 4ನೇ ತರಗತಿ ಆಗ ಮನೆಯಲ್ಲಿ ಮುದ್ದಣ್ಣ ಮನೋರಮೆಯರ ಸಲ್ಲಾಪ ಆಗಾಗೆ ಅವರ ಪಠ್ಯ ಓದುವಾಗ ಕೇಳುತ್ತಿದ್ದೆ, ಅದು ಅವರಲ್ಲಿ ಯಾರದೋ ತರಗತಿಯ ಕನ್ನಡ ವಿಷಯದ ಪಠ್ಯ ಆಗಿತ್ತು.     ಅವರು ಓದಿ ಕೊಳ್ಳುತ್ತಿದ್ದ "ಕುಡಿಯಲು ಕೆನೆಹಾಲು".... "ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತೆ" ಎಂಬ ವಾಕ್ಯ (ಆಗ ಇದರ ಬಗ್ಗೆ ಸರಿಯಾದ ಮಾಹಿತಿ ಇರ...