Blog number 2074. ಮಹಾಕವಿ ಮುದ್ದಣ್ಣ ಮತ್ತು ಅವರ ಸಂಗಾತಿ ಮನೋರಮ ಸ್ಮರಣೆ, ಮನೋರಮರ ನಿಜ ನಾಮ ಕಮಲಾ ಬಾಯಿ ಅವರ ತವರು ಶಿವಮೊಗ್ಗ ಜಿಲ್ಲೆಯ ಕಾಗೆ ಕೊಡಮಗ್ಗಿ ಗ್ರಾಮ
#ಅರವಿಂದ_ಚೊಕ್ಕಾಡಿ_ಮಗ_ಪ್ರಣಯನ_ಉಪನಯನ
#ಮೂಡಬಿದರೆ_ಸಮಾಜ_ಮಂದಿರದಲ್ಲಿ
#ಅಲ್ಲಿಂದ_ಮಹಾಕವಿ_ಮುದ್ದಣ್ಣರ_ನಂದಳಿಕೆ_ಮನೆಗೆ_25_ಕಿಲೋ_ಮೀಟರ್
#ಮುದ್ದಣ್ಣರ_ಮೂಲ_ಹೆಸರು_ನಂದಳಿಕೆ_ಲಕ್ಷ್ಮೀನಾರಾಯಣ
#ಮನೋರಮ_ಮೂಲ_ಹೆಸರು_ಕಮಲಾ_ಬಾಯಿ
#ಶಿವಮೊಗ್ಗ_ಜಿಲ್ಲೆಯ_ಕಾಗೆ_ಕೊಡ_ಮಗ್ಗಿ_ಗ್ರಾಮ
#ಮುದ್ದಣ್ಣ_ಮನೋರಮರ_ಮಗ_ರಾದಾಕೃಷ್ಣ_ಶಿವಮೊಗ್ಗದ_A_V_ಗರ್ಲ್ಸ್_ಸ್ಕೂಲ್_ಅಧ್ಯಾಪಕರಾಗಿದ್ದರು.
ಬರುವ ಮೇ 2 ನೇ ತಾರೀಖು ಬೆಳಿಗ್ಗೆ ಆತ್ಮೀಯರಾದ ಅರವಿಂದ ಚೊಕ್ಕಾಡಿ ಅವರ ಪುತ್ರ ಪ್ರಣಯನ ಉಪನಯನ ಕಾರ್ಯಕ್ರಮಕ್ಕೆ ಮೂಡಬಿದರೆಯ ಸಮಾಜ ಮಂದಿರ ತಲುಪುವುದು ಅಲ್ಲಿನ ಕಾರ್ಯಕ್ರಮ ಮುಗಿಸಿ ಅಲ್ಲಿಂದ 25 ಕಿ.ಮಿ. ದೂರದ ನಂದಳಿಕೆಗೆ ಹೋಗಿ ಮಹಾ ಕವಿ ಮುದ್ದಣ್ಣರ ಮೂಲ ಮನೆ ಮತ್ತು ಸ್ಮಾರಕ ನೋಡಿ ಕಾರ್ಕಳ ಮಾಗ೯ವಾಗಿ ಆಗುಂಬೆ ಘಾಟಿ ಹತ್ತಿ ಊರು ಸೇರುವ ತೀಮಾ೯ನ ನನ್ನದು.
ನನ್ನ ಮನೆಯಲ್ಲಿ ನಾನು ಒಂದನೆ ತರಗತಿ ಶಾಲೆಗೆ ಸೇರಿದಾಗ ನನ್ನಣ್ಣ 10 ನೇ ತರಗತಿ, ದೊಡ್ಡಕ್ಕ 8ನೇ ತರಗತಿ ಮತ್ತು ಸಣ್ಣಕ್ಕ 4ನೇ ತರಗತಿ ಆಗ ಮನೆಯಲ್ಲಿ ಮುದ್ದಣ್ಣ ಮನೋರಮೆಯರ ಸಲ್ಲಾಪ ಆಗಾಗೆ ಅವರ ಪಠ್ಯ ಓದುವಾಗ ಕೇಳುತ್ತಿದ್ದೆ, ಅದು ಅವರಲ್ಲಿ ಯಾರದೋ ತರಗತಿಯ ಕನ್ನಡ ವಿಷಯದ ಪಠ್ಯ ಆಗಿತ್ತು.
ಅವರು ಓದಿ ಕೊಳ್ಳುತ್ತಿದ್ದ "ಕುಡಿಯಲು ಕೆನೆಹಾಲು".... "ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತೆ" ಎಂಬ ವಾಕ್ಯ (ಆಗ ಇದರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ) ನಿತ್ಯ ವೂ ನನಗೆ ಕಾಡುತ್ತಿತ್ತು.
ಈಗಲೂ ರಾತ್ರಿ ಕೆನೆ ಹಾಲು ಕುಡಿಯುವಾಗ ಮತ್ತು ಮನೆಯಲ್ಲಿ ಕಡಬು ಮಾಡಿದಾಗ ಮುದ್ದಣ್ಣ ಮನೋರಮ ಸಲ್ಲಾಪ ನೆನಪಾಗುತ್ತಿರುತ್ತದೆ.
ಬುದ್ಧಿ ಬಂದ ಮೇಲೆ ಇದು ನಂದಳಿಕೆ ಲಕ್ಷ್ಮೀನಾರಾಯಣಪ್ಪ ಎಂಬ ದೈಹಿಕ ಶಿಕ್ಷಕರು ತಮ್ಮ #ರಾಮಾಶ್ವಮೇದ ಎಂಬ ಹಳೆಗನ್ನಡದ ಗದ್ಯದಲ್ಲಿ ಮುದ್ದಣ್ಣ ಮತ್ತು ಅವರ ಪತ್ನಿ ಮನೋರಮೆ ಎಂಬ ಕಾವ್ಯ ಪಾತ್ರ ಸೂತ್ರದಾರರಾಗಿ ಬಂದು ಭಾಗವಹಿಸುವಂತೆ ಸೃಷ್ಟಿಸಿದ್ದರು ಎಂದು ಗೊತ್ತಾಯಿತು.
ಮುದ್ದಣ್ಣ ಹಳೆಗನ್ನಡದಲ್ಲಿ ಗದ್ಯ ಅದ್ಬುತ ರಾಮಾಯಣ, ರಾಮಪಟ್ಟಾಭಿಶೇಕ ಮತ್ತು ರಾಮಾಶ್ವಮೇದ ಮತ್ತು ರತ್ನಾವಳಿ ಕಲ್ಯಾಣ ಮತ್ತು ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಬರೆದಿದ್ದಾರೆ ಆದರೆ ನಂದಳಿಕೆ ಲಕ್ಷ್ಮೀನಾರಾಯಣ ಎಂಬ ದೈಹಿಕ ಶಿಕ್ಷಕ ಬರೆದಿದ್ದಾರೆಂದರೆ ಆ ಕಾಲದ ಸಮಾಜ ಒಪ್ಪಲಾರದೆಂದು ಮುದ್ದಣ್ಣ ಎಂಬ ಕಾವ್ಯನಾಮದಿಂದ ಗುರುತಿಸಿ ಕೊಳ್ಳುತ್ತಾರೆ ಎಲ್ಲೂ ತಮ್ಮ ಮೂಲ ಹೆಸರು ಬಾರದಂತೆ ಜಾಗೃತಿ ವಹಿಸುತ್ತಾರೆ.
1870 ಜನವರಿ 24 ರಂದು ನಂದಳಿಕೆಯ ವಡಾಲ ತಿಮ್ಮಪ್ಪ ಮತ್ತು ಮಹಾಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ ನಂದಳಿಕೆ ಲಕ್ಷ್ಮೀನಾರಾಯಣರು ದೈಹಿಕ ಶಿಕ್ಷಕರಾಗಿ ಕುಂದಾಪುರದಲ್ಲಿ ಕಾಯ೯ನಿರ್ವಹಿಸುವಾಗಲೇ ಕ್ಷಯರೋಗ ಪೀಡಿತರಾಗಿ 15 ಪೆಬ್ರುವರಿ 1901ರಂದು ತಮ್ಮ 31ನೆ ವಯಸ್ಸಿನಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸುತ್ತಾರೆ ಮನೋರಮ ಪಾತ್ರ ದಾರಿ ಇವರ ಪತ್ನಿ ನಿಜ ನಾಮ ಕಮಲ ಬಾಯಿ ಅವರ ತವರು ಮನೆ ಶಿವಮೊಗ್ಗ ಜಿಲ್ಲೆಯ ಕಾಗೆ ಕೊಡ ಮಗ್ಗಿ ಗ್ರಾಮದವರು ಪತಿಯ ಅಕಾಲಿಕ ಮರಣದಿಂದ ನಂದಳಿಕೆಯ ಪತಿ ಮನೆ ತೊರೆದು ತವರು ಮನೆ ಸೇರುತ್ತಾರೆ.
ಮಗ ರಾದಾಕೃಷ್ಣ (ಅವರನ್ನ ಬಾಬೂರಾವ್ ಎಂದೂ ಕರೆಯುತ್ತಿದ್ದರಂತೆ) ಶಿವಮೊಗ್ಗದ ಆಂಗ್ಲ ಬಾಲಿಕಾ AV ಗರ್ಲ್ ಸ್ಕೂಲ್ ಅಧ್ಯಾಪಕರಾಗಿದ್ದರು ನಂತರ ಭದ್ರಾವತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಇವರ ಮಗ ಶ್ರೀನಿವಾಸ ಮೂರ್ತಿ ಅವರ ಮಕ್ಕಳು ಬೆಂಗಳೂರು ಮತ್ತು ಮೈಸೂರಿನಲ್ಲಿ ನೆಲೆಸಿದ್ದಾರೆ, ನಂದಳಿಕೆಯ ಮೂಲ ಮನೆಯಲ್ಲಿ ಮುದ್ದಣನ ಸಂಬಂದಿಕರಲ್ಲದ ಅವರ ಸಮುದಾಯದವರು ವಾಸವಾಗಿದ್ದಾರೆ.
ಮುದ್ದಣ್ಣರ ಜೀವನ ಮತ್ತು ಇಂಗ್ಲೀಷಿನ ಪ್ರಸಿದ್ಧ ಕವಿ ಕೀಟ್ಸ್ ಜೀವನಕ್ಕೆ ತುಂಬಾ ಸಾಮ್ಯತೆ ಇದೆ, ಕೀಟ್ಸ್ ಅನೇಕ ಶ್ರೇಷ್ಟ ಕವಿತೆ ಬರೆದಿದ್ದರೂ ಅದು ಜಗತ್ತಿಗೆ ತಿಳಿಯಲೇ ಇಲ್ಲ ಆ ಕಾಲದ ವಿಮರ್ಶಕರು ಕೀಟ್ಸ್ ಕವಿಯನ್ನು ಕೆಟ್ಟ ಕವಿ ಎಂದು ಹೀಗಳೆಯುತ್ತಾರೆ, ಸಣ್ಣ ವಯಸ್ಸಲ್ಲೇ ಕೀಟ್ಸ್ ಕ್ಷಯ ರೋಗದಿಂದ ಮರಣಿಸುತ್ತಾರೆ ಅನಂತರ ಕೀಟ್ಸ್ ಇಂಗ್ಲೀಷಿನ ಉತ್ತೊಮೊತ್ತಮ ಕವಿ ಎಂದು ಪ್ರಸಿದ್ದರಾಗುತ್ತಾರೆ.
ಮುದ್ದಣ್ಣ ಕೂಡ ಕೀಟ್ಸ್ ಕವಿಯಂತೆ ಸಣ್ಣ ವಯಸ್ಸಿನಲ್ಲೇ ಕ್ಷಯ ರೋಗದಿಂದ ಇಹಲೋಕ ತ್ಯಜಿಸುತ್ತಾರೆ ಅವರು ಬದುಕಿದ್ದಾಗ ಅವರು ಬರೆದ ಸಾಹಿತ್ಯ ಅವರದ್ದೆಂದು ಎಲ್ಲೂ ಹೇಳಿಕೊಂಡಿರಲಿಲ್ಲ, ಅವರ ಮರಣಿಸಿದ 28 ವರ್ಷದ ನಂತರ 1929 ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಅಸೋಸಿಯೇಷನ್ ಮುದ್ದಣ್ಣ ಸ್ಮರಣಾರ್ಥ ಪುಸ್ತಕ ಪ್ರಕಟಿಸಿ ಮುದ್ದಣ್ಣ ಕಾವ್ಯ ನಾಮದ ನಂದಳಿಕೆ ಲಕ್ಷ್ಮೀನಾರಾಯಣರ ಕೃತಿಗಳನ್ನು ದೃಡೀಕರಿಸಿದರು.
ನಂದಳಿಕೆಯಲ್ಲಿ 1987ರಲ್ಲಿ ಸ್ಮಾರಕ ಮಹಾಕವಿ ಮುದ್ದಣ್ಣ ಸ್ಮಾರಕ ಭವನ ನಿರ್ಮಿಸಿದ್ದಾರೆ, 2017 ರಲ್ಲಿ ಘನ ಸರ್ಕಾರ ಮುದ್ದಣರ ಸ್ಮರಣೆಗಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದೆ,ಮುದ್ದಣ್ಣರ ಮೂಲಕೃತಿ ಉಡುಪಿ ಮಂಜೇಶ್ವರದ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿದೆ.
Comments
Post a Comment