Blog number 2039. ಮುನಿಶ್ರೀ 108 ಪುರಾಣ ಸಾಗರ ಮಹಾರಾಜರ ಇವತ್ತಿನ 1-ಏಪ್ರಿಲ್ - 2024ರ ಆಹಾರ ಸೇವನೆ ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ.
#ಜೈನ_ದರ್ಮಾಚಾರಣೆ_ವಿಬಿನ್ನ_ಸರಳ__ಅಹಿಂಸಾ_ಆಚರಣೆ
#ಜೈನ_ಸನ್ಯಾಸಿಗಳು_ಮಾತ್ರ_ಸನ್ಯಾಸದ_ಪಕ್ಕಾ_ಆಚರಣೆ_ಮಾಡುವವರು
#ಇವತ್ತು_ನಮ್ಮ_ಕಲ್ಯಾಣಮಂಟಪದಲ್ಲಿ_ಪಾದಾರ್ಪಣೆ_ಮಾಡಿ_ಆಹಾರ_ಸ್ವೀಕರಿಸಿದದರು
#ಮುನಿಶ್ರೀ_108_ಪುರಾಣ_ಸಾಗರ_ಮಹಾರಾಜರು
#ಬೆಳಗಾವಿಯಿಂದ_ಶ್ರವಣಬೆಳಗೋಳಕ್ಕೆ_ಮಂಗಳಯಾತ್ರೆ
ಇಂಥಹ ಸಜ್ಜನ ಸನ್ಯಾಸಿಗಳು ಕಲಿಯುಗದ ನಿಜ ಸನ್ಯಾಸಿಗಳು, ಸನ್ಯಾಸಾಶ್ರಮದ ನೀತಿ ರೀತಿ ನಿಷ್ಟೆಯಿಂದ ಪಾಲಿಸುತ್ತಾರೆ.
ಜೀವಮಾನ ಪೂರ್ತಿ ಬರಿಗಾಲಿನಲ್ಲಿ ಸಂಚಾರ, ಕಾಮ ಕ್ರೋದ ಮದ ಮಾತ್ಸರ ಸಂಪೂರ್ಣ ತ್ಯಾಗ ಮಾಡಿದ ಮೇಲೆ ಅವರು ದಿಗಂಬರರಾಗುತ್ತಾರೆ.
ಚಾತುರ್ಮಾಸದ ಕೆಲ ದಿನಗಳು ಮಾತ್ರ ನಿರ್ಧಿಷ್ಟ ಸ್ಥಳದಲ್ಲಿ ತಂಗುವ ಅವರು ತಮ್ಮ ಜೀವಮಾನ ಪೂರ್ತಿ ನಡಿಗೆಯಲ್ಲಿ ಸಂಚರಿಸುತ್ತಾರೆ ಯಾವ ಕಾರಣಕ್ಕೂ ವಾಹನ ಬಳಸುವುದಿಲ್ಲ.
ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ ಅದು ಬದುಕಲು ಮಾತ್ರದ ಆಹಾರ ನೀರು, ಯಾವುದೇ ಪಾತ್ರೆ ಬಳಸುವುದಿಲ್ಲ ಬರಿ ಅಂಗೈಯಲ್ಲಿ ನಿಂತು ಆಹಾರ ಸೇವನೆ ಅವರು ಆಹಾರ ಸವಿಯುವುದಿಲ್ಲ.
ನನ್ನ ಮಾತಾ ಪಿತೃಗಳ ಪುಣ್ಯದಿಂದ ನನ್ನ ಕಲ್ಯಾಣ ಮಂಟಪದಲ್ಲಿ ಈ ಮಾರ್ಗದಲ್ಲಿ ಸಾಗುವ ಮುನಿ ಮಹಾರಾಜರು ತಂಗುತ್ತಾರೆ ಅವರ ಪಾದಸ್ಪರ್ಶದಿಂದ ನನ್ನ ಕುಟುಂಬ ಪರಿವಾರಕ್ಕೆ ಎಣಿಸಲಾರದ ಪುಣ್ಯ ಫಲವಿದೆ.
ಇವತ್ತು ಪಾದಾರ್ಪಣೆ ಮಾಡಿದವರು ಮುನಿಶ್ರೀ 108 ಪುರಾ ಣ ಸಾಗರ ಮಹಾರಾಜರು ಅವರು ಬೆಳಗಾವಿಯಿಂದ ಶ್ರವಣಬೆಳಗೋಳದ ಮಾರ್ಗದಲ್ಲಿ ನಮ್ಮ ಊರು ದಾಟಿದ್ದಾರೆ ಅವರಿಗೆ ಪಿರಣಾವಾಡಿಯ ಸಮಸ್ತ ಶ್ರಾವಕ ಶ್ರಾವಕಿಯರ ಸಹಯೋಗ ನೀಡಿದ್ದಾರೆ.
ಮುನಿಶ್ರೀ 108 ಪುರಾಣ ಸಾಗರರು ನಮ್ಮ ತಂದೆ ತಾಯಿ ಸ್ಮರಣಾರ್ಥ ನಿರ್ಮಿಸಿದ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಇವತ್ತಿನ ಆಹಾರ ಸೇವಿಸಿದರು.
ಅವರ ಆಹಾರ ಸೇವನೆಯ ಯುಟ್ಯೂಬ್ ಇಲ್ಲಿ ಕ್ಲಿಕ್ ಮಾಡಿ ನೋಡಿ https://youtu.be/q_c6X6_RV2I?feature=shared
ನಮ್ಮ ಸಂಸ್ಥೆಯಿಂದ ಅವರಿಗೆ ಸಮರ್ಪಿಸಿದ ತೆಂಗಿನಕಾಯಿ ಮತ್ತು ಬಿಳಿ ಸಾಸಿವೆ ಅವರ ಅಮೃತ ಹಸ್ತದಿಂದ ಸ್ಪರ್ಶಿಸಿ ಆಶ್ರೀವಾದ ಮಾಡಿ ನೀಡಿದ್ದಾರೆ.
Comments
Post a Comment