#ನಮ್ಮ_ಊರಿನ_ಈದ್ಗಾ
#ಈ_ವರ್ಷದ_ರಂಜಾನ್_ಪ್ರಾಥ೯ನೆಗೆ
#ಐವತ್ತನೇ_ವಾರ್ಷಿಕೋತ್ಸವ
#ಅಬ್ದುಲ್_ಯಾಹ್ಯಾ_ಸಾಹೇಬರ_ಅಧ್ಯಕ್ಷರ_ಅವಧಿಯಲ್ಲಿ_1975ರಲ್ಲಿ_ಈದ್ಗಾ_ನವೀಕರಣವಾಗಿತ್ತು.
#ಆನಂದಪುರಂ_ಜಾಮೀಯ_ಮಸೀದಿ_1632ರಲ್ಲಿ_ಕೆಳದಿ_ರಾಜ_ವೀರಭದ್ರ_ನಾಯಕರಿಂದ_ನಿರ್ಮಾಣ.
ಮೊನ್ನೆ 11- ಏಪ್ರಿಲ್- 2024 ರಂದು ಆನಂದಪುರಂ - ದಾಸಕೊಪ್ಪ --ಯಡೇಹಳ್ಳಿ ಮುಸ್ಲಿಂ ಸಮುದಾಯದವರು ಯಡೇಹಳ್ಳಿಯ ಮಸೀದಿ ಹಿಂಬಾಗದ ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು ಈ ಈದ್ಗಾ 1- ಡಿಸೆಂಬರ್-1975ರಲ್ಲಿ ನವೀಕರಣಗೊಂಡಿದ್ದರಿಂದ ಇದು 50ನೇ ವರ್ಷದ ವಾರ್ಷಿಕೊತ್ಸವ ಕೂಡ.
ಈ ಈದ್ಗಾ ನವೀಕರಣದ ಪೂರ್ವದಲ್ಲೂ ಪುರಾತನ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದ ಈದ್ಗಾ ಇದೇ ಸ್ಥಳದಲ್ಲಿ ಇತ್ತು ಬಹುಶಃ 1632 ರಿಂದ ಈದ್ಗಾ ಇದ್ದಿರಬೇಕು.
1632ಲ್ಲಿ ಆನಂದಪುರಂನ ಜಾಮೀಯ ಮಸೀದಿ ಕೆಳದಿ ರಾಜ ವೀರಭದ್ರ ನಾಯಕರು ನಿರ್ಮಿಸಿ 12 ವರಹಾ ಭೂಮಿ ಸದರಿ ಮಸೀದಿಗೆ ದಾನ ನೀಡಿದ ತಾಮ್ರ ಪತ್ರ ಇದೆ ಅಂದರೆ 392 ವರ್ಷಗಳ ಹಿಂದೆ ಆನಂದಪುರಂ ಮಸೀದಿ ನಿಮಾ೯ಣವಾಗಿತ್ತು.
1872 ರಲ್ಲಿ ಮೈಸೂರು ಅರಸರು ಎರೆಡು ಎಕರೆ ಏಳು ಗುಂಟೆ ತರಿ ಜಮೀನು ದಾನ ನೀಡಿದ್ದಾರೆ.
ಟಿಪ್ಪು ಸುಲ್ತಾನರು ಆನಂದಪುರಂ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಆನಂದಪುರಂನ ಉದನೂರಿನ ಅಬ್ದುಲ್ ಯಾಹ್ಯಾ ಸಾಹೇಬರು 1968ರಿಂದ1988ರವರೆಗೆ ಆನಂದಪುರಂನ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿದ್ದರು ಅವರ ಅವದಿಯಲ್ಲಿ 1- ಡಿಸೆಂಬರ್-1975 ರಂದು ನವೀಕರಣಗೊಂಡ ಯಡೇಹಳ್ಳಿ ಈದ್ಗಾಕ್ಕೆ ಈ ವರ್ಷದ 11-ಏಪ್ರಿಲ್-2024ರ ರಂಜಾನ್ ಹಬ್ಬದ ಪ್ರಾರ್ಥನೆಗೆ 50ನೇ ವರ್ಷಾಚರಣೆ ಆಗಿತ್ತು ಈಗಿನ ಹಾಲಿ ಅಧ್ಯಕ್ಷರು ಯಡೇಹಳ್ಳಿಯ MNK ಅಕ್ಕಿ ಗಿರಣಿ ಮಾಲಿಕರಾದ ಬಾಬುಲ್ ಸಾಹೇಬರು.
ಆ ಕಾಲದಲ್ಲಿ ಈ ಈದ್ಗಾದಲ್ಲಿ ಆನಂದಪುರಂ ಸುತ್ತಮುತ್ತಲಿನ ಹಳ್ಳಿಗಳಾದ ದಾಸಕೊಪ್ಪ - ಆನಂದಪುರಂ - ತಾವರೆಹಳ್ಳಿ - ಮುಂಬಾಳು - ಹೊಸಕೊಪ್ಪ - ಯಡೇಹಳ್ಳಿ ಆಚಾಪುರ - ಮುರುಘಾಮಠ - ಇಸ್ಲಾಂಪುರ - ಹೊಳ್ಳೂರು-ಕೆರೆಹಿತ್ತಲು - ಗಿಳಾಲುಗುಂಡಿ - ಮಾದಾಪುರ-ಉದನೂರಿನಿಂದ ಸುಮಾರು 14 ಹಳ್ಳಿಗಳಿಂದ ರಂಜಾನ್ ಮತ್ತು ಬಕ್ರೀದ್ ಹಬ್ಬದ ಪ್ರಾಥ೯ನೆಗೆ ಬರುತ್ತಿದ್ದರು ಈಗ ಇಲ್ಲಿಗೆ ಯಡೇಹಳ್ಳಿ - ಆನಂದಪುರಂ - ದಾಸಕೊಪ್ಪ ಮತ್ತು ತಾವರೆಹಳ್ಳಿಯವರು ಮಾತ್ರ ಪ್ರಾರ್ಥನೆಗೆ ಬರುತ್ತಾರೆ.
ಆಚಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಈದ್ಗಾಕ್ಕೆ ಉಳಿದ ಸಮೀಪದ ಹಳ್ಳಿಗಳವರು ಪ್ರಾಥ೯ನೆಗೆ ಹೋಗುತ್ತಾರೆ.
Comments
Post a Comment