#ನಾನು_ಹೆಚ್ಚು_ಇಷ್ಟ_ಪಡುವ_ಅರವಿಂದ_ಚೊಕ್ಕಾಡಿ
#ಇವರ_ಪುತ್ರ_ಪ್ರಣಯನ_ಉಪನಯನ
#ಇವರು_ಬರೆದ_ಪುಸ್ತಕ_ಇಲ್ಲದ_ತೀರದಲ್ಲಿ_ಓದಿ_ಇವರನ್ನ_ಅಥ೯_ಮಾಡಿಕೊಂಡವನು_ನಾನು
#ನನ್ನ_ಮೊದಲ_ಕಾದಂಬರಿ_ಬೆಸ್ತರ_ರಾಣಿ_ಚಂಪಕಾಗೆ_ವಿಮರ್ಷೆ_ಬರೆದು_ಬೆನ್ನು_ತಟ್ಟಿದವರು
#ನನ್ನ_ಎರಡನೆ_ಪುಸ್ತಕ_ಕಥಾ_ಸಂಕಲನಕ್ಕೆ_ಮುನ್ನುಡಿ_ಬರೆದವರು
#ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್_ನನ್ನ_ಎರೆಡೂ_ಪುಸ್ತಕದ_ಅವಲೋಕನ_ಕಾರ್ಯಕ್ರಮ_ಆಯೋಜಿಸಿದಾಗ
#ಅರವಿಂದ_ಚೊಕ್ಕಾಡಿ_ಆಗಮಿಸಿ_ಅವಲೋಕನ_ಮಾಡಿದವರು
ಅರವಿಂದ ಚೊಕ್ಕಾಡಿ ಅಂಕಣಕಾರರು, ವಿಮರ್ಶಕರು, ಶಿಕ್ಷಣ ತಜ್ಞರು ವಿಶೇಷವಾಗಿ ಮಹಾತ್ಮಾ ಗಾಂಧಿ ಅನುಯಾಯಿಗಳು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ವಿಶೇಷ ತರ್ಕ ಮಾಡುವ ಜ್ಞಾನಿಗಳು ಅಷ್ಟೇ ಅಲ್ಲ #ತಾ೦ಟಿದರೆ_ಬಿಡುವುದಿಲ್ಲ ಎಂಬ ಅವರದ್ದೇ ಘೋಷಣೆ ಅವರನ್ನು ಸುಖಾ ಸುಮ್ಮನೆ ಕೆರಳಿಸಿದರೆ ಬಿಡುವುದಿಲ್ಲ.
ಹಾಗಂತ ಇವರ ಚರ್ಚೆ ಹೋರಾಟ ಯಾರ ವಿರುದ್ದವಾಗಿ ವೈಯಕ್ತಿಕವಾಗಿ ಇರುವುದಿಲ್ಲ ಅದು ವಿಷಯ ಆದಾರಿತ.
ನಾನು ಪ್ರತಿ ನಿತ್ಯ ಇವರ ಪೋಸ್ಟ್ ನೋಡದೇ ಇರುವುದಿಲ್ಲ ಅನಿವಾಸಿ ಭಾರತೀಯರಾದ ವಿಚಾರವಾದಿ #ಶಾಂತರಾಮ_ಹೆಗಡೆ_ಕಟ್ಟಾ ಮತ್ತು #ಅರವಿಂದಚೊಕ್ಕಾಡಿ ಅವರ ಬಿಸಿ ಬಿಸಿ ಚರ್ಚೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುತ್ತದೆ ಒಮ್ಮೆ ಶಾಂತಾರಾಮ ಹೆಗಡೆ ಕಟ್ಟಾ ನನ್ನ ಅತಿಥಿ ಆದಾಗ ಅವರ ಸಂದರ್ಶನ ಮಾಡಿದ್ದಾಗ ಅವರಿಗೆ ನೀವು ಮತ್ತು ಅರವಿಂದ ಚೊಕ್ಕಾಡಿ ಅವರ ನಡುವೆ ಜಗಳವಾ? ಎಂದಿದ್ದಕ್ಕೆ ಅವರು ಉತ್ತರಿಸಿದ್ದು "ಗಂದದ ಕೊರಡಿನವರ ಜೊತೆಯ ವಿಚಾರದ ಗುದ್ದಾಟ " ಅಂದಿದ್ದರು.
ಅರವಿಂದ ಚೊಕ್ಕಾಡಿ ಅವರು ಮಾರ್ಚ್ 20 ನೇ ತಾರೀಖು ವಾಟ್ಸಪ್ ಸಂದೇಶ ಕಳಿಸಿದ್ದರು ಮೇ 2 ನೇ ತಾರೀಖಿಗೆ ನನ್ನ ಮಗನ ಉಪನಯನ ನೀವು ಬರಬೇಕೆಂದು ಬಯಸುತ್ತೇನೆ ಅಂತ ಅವತ್ತೇ ನಾನು ನನ್ನ ದಿನಚರಿ ಪುಸ್ತಕದಲ್ಲಿ ಗುರುತು ಮಾಡಿಕೊಂಡಿದ್ದೇನೆ.
ಇದೇ ಏಪ್ರಿಲ್ 4 ರ ಬೆಳಿಗ್ಗೆ ಅವರು ನಮ್ಮ ಊರಿನ ಮಾರ್ಗದಲ್ಲಿದ್ದಾಗ ಪೋನಾಯಿಸಿದಾಗ ನಾನು ಮಣಿಪಾಲಿನ ಆಸ್ಪತ್ರೆಯಲ್ಲಿ ನನ್ನ ಸಹೋದರನ ಚಿಕಿತ್ಸೆಗೆ ಹೋಗಿದ್ದೆ.
ಯಾವುದನ್ನು ನಿರೀಕ್ಷೆ ಮಾಡದ, ಸುಳ್ಳು ಪ್ರತಿಷ್ಟೆಗೆ ಮಣೆ ಹಾಕದ, ಪ್ರಶಸ್ತಿ ಹಣದ ಹಿಂದೆ ಓಡದ #ಅಲಕ್_ನಿರಂಜನ್ ಎಂಬಂತೆ ಡೇರ್ ಡೆವಿಲ್ ಆಗಿ ಜೀವನ ಮಾಡುತ್ತಿರುವ ಅರವಿಂದರು ತನ್ನ ಅಜ್ಜಂದಿರು, ಅಪ್ಪ ಅಮ್ಮಂದಿರು, ಪತ್ನಿ ಮತ್ತು ಮಕ್ಕಳ ಬಗ್ಗೆ ಸಂಪೂರ್ಣವಾಗಿ ಕಪ್ಪು ಬಿಳುಪಿನ ಚಿತ್ರವಾಗಿ ಅವರೇ ಹೇಳಿ ಕೊಂಡಿದ್ದರಿಂದ ನನಗೆ ಅರವಿಂದ ಚೊಕ್ಕಾಡಿ ಒಂದು ರೀತಿ ವಿಸ್ಮಯವೂ ಹೌದು, ಇನ್ನೊಂದು ರೀತಿ ಅವರ ನೇರ ನಡೆ ನುಡಿ ನನಗೆ ಇಷ್ಟವೂ ಹೌದು.
ಮೇ 2 ನೇ ತಾರೀಖು ಅವರ ಮಗ ಪ್ರಣಯನ ಉಪನಯನದಲ್ಲಿ ಭಾಗವಹಿಸಿ ಆಶ್ರೀವಾದ ಮಾಡಬೇಕು ಬ್ರಾಹ್ಮಣ ಅರವಿಂದ ಚೊಕ್ಕಾಡಿ ಮತ್ತು ಅರೆ ಭಾಷಾ ಗೌಡತಿ ಪತ್ನಿಯ ಪುತ್ರ ಪ್ರಣಯನಿಗೆ ಜಾತಿಯೇ ಇಲ್ಲದ ನನ್ನ ಆಶ್ರೀವಾದ ಇದು ನನ್ನ ಜೀವಮಾನದ ಮೊದಲ ಉಪನಯನ ಕಾಯ೯ಕ್ರಮ ಪ್ರತ್ಯಕ್ಷ ನೋಡುವ ಅವಕಾಶ.
ಅರವಿಂದ ಚೊಕ್ಕಾಡಿ ಬರೆದ #ಇಲ್ಲದ_ತೀರದಲ್ಲಿ "ಅಪ್ಪನ ಬದುಕಿನೊಂದಿಗೆ ಸಂವಾದ" ಮಹಾತ್ಮ ಗಾಂಧಿ ಅವರ ನನ್ನ ಸತ್ಯಾನ್ವೇಷಣೆ ಆತ್ಮ ಚರಿತ್ರೆಯಂತೆ ನೇರಾ ನೇರವಾಗಿದೆ ಈ ಪ್ರಸ್ತಕದ ಕಥಾ ನಾಯಕಿ ಅರವಿಂದರ ತಾಯಿ ಶ್ರೀಮತಿ ಪಾರ್ವತಿ ಅವರು ತನ್ನ ಮೊಮ್ಮಗನ ಉಪನಯನ ಕಾರ್ಯಕ್ರಮದ ಅತಿಥೇಯರು ಅವರನ್ನು ಪ್ರತ್ಯಕ್ಷ ಬೇಟಿ ಮಾಡುವ ಮೂಲಕ ಮೇ 2 - 2024 ರಂದು ಮೂಡಬಿದರೆ ಬಸ್ ಸ್ಟಾಂಡ್ ಬಳಿಯ ಸಮಾಜ ಮಂದಿರ ತಲುಪಲಿದ್ದೇನೆ.
Comments
Post a Comment