Blog number 2038.ಲೋಕರಾಜ ಜೈನ್ ಸಾಳ್ವ ಕುಲಜ ನಗಿರೆಸುತ ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಇತಿಹಾಸ ಸಂಶೋದಕರು ಇವರು ಚೆನ್ನಾ ಬೈರಾದೇವಿ ವಂಶಸ್ಥರೂ ಆಗಿದ್ದಾರೆ.
#ಲೋಕರಾಜ_ಜೈನ್_ಸಾಳ್ವಕುಲಜ_ನಗಿರೆಸುತ.
#ಜೋಗ_ಜಲಪಾತದ_ತಟದ_ಹೆನ್ನೆ_ಊರಿನವರು
#ಶರಾವತಿ_ಮುಳುಗಡೆಯ_ಬ್ಯಾಕೋಡಿನಲ್ಲಿ_ಉಪನ್ಯಾಸಕರು
#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ವಂಶಸ್ಥರು_ಇತಿಹಾಸ_ಸಂಶೋದಕರು
#ಜೈನ_ಮಠಗಳಾದ_ಹುಂಚಾ_ಶ್ರವಣಬೆಳಗೋಲದ_ಸ್ವಾಮಿಗಳು
#ಧರ್ಮಸ್ಥಳದ_ವೀರೇಂದ್ರ_ಹೆಗ್ಗಡೆ_ಇವರ_ಜ್ಞಾನ_ಬಳಸಿಕೊಳ್ಳಬೇಕು
#ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಮಾಹಿತಿ_ನೀಡುತ್ತಿರುವ_ಡಿಜಿಟಲ್_ಮಾಧ್ಯಮದ_ಕೆಲಸ_ಅಭಿನಂದನೀಯ
ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕದಂಬರ - ಜೈನ ಕಾಳುಮೆಣಸಿನ ರಾಣಿ ಚೆನ್ನ ಬೈರಾದೇವಿ-ಕೆಳದಿ ಅರಸರ ಆಳ್ವಿಕೆಯ ನೆಲ.
ಇಲ್ಲಿನ ನದಿಗಳು - ಜಲಪಾತಗಳು - ದೇವಾಲಯಗಳು -ಕೋಟೆಗಳು - ಸ್ಮಾರಕಗಳು ಕೂಡ ವಿಶೇಷವೇ ಆಗಿದೆ.
ಆದರೆ ಇವುಗಳ ಸಂರಕ್ಷಣೆ ಮತ್ತು ಸಂಶೋದನೆಗಳು ಮಾತ್ರ ತೃಪ್ತಿದಾಯಕವಾಗಿಲ್ಲ ಈಗಿನ ತಲೆಮಾರಿನ ಸಂಶೋದಕರಾದ ಕದಂಬರ ಇತಿಹಾಸದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿರುವ #ರಮೇಶ್_ಹಿರೇಜಂಬೂರು, ಪತ್ರಕರ್ತರಾದ #ನವೀನ್, ಕೆಳದಿ ಅರಸರ ಬಗ್ಗೆ ಪುಸ್ತಕ ಬರೆದಿರುವ ಬಿದನೂರು ನಗರದ ಕೆಳದಿ ಸಂಸ್ಥಾನದ ಭಂಡಾರ ನಿರ್ವಹಿಸಿದ ವಂಶಜರಾದ ನಗರದ #ಸುದೀಂದ್ರ_ಭಂಡಾರ್ಕರ್, ಜೈನ ರಾಣಿ ಚೆನ್ನಬೈರಾದೇವಿ ಆಡಳಿತ ಪ್ರದೇಶದಲ್ಲಿ ಅನೇಕ ಸಂಶೋದನಾ ಮಾಹಿತಿ ಹೊಂದಿರುವ ಜೋಗ್ ಜಲಪಾತದ ಬುಡದ ಹೆನ್ನೆಯ #ಲೋಕರಾಜ್_ಜೈನ್ ಸಾಳ್ವ ಕುಲಜ ನಗಿರೆಸುತ, ತೀರ್ಥಹಳ್ಳಿ ತಾಲ್ಲೂಕಿನ #ಆದರ್ಶ_ಹುಂಚದಕಟ್ಟೆ ಮತ್ತು #ಪ್ರಬಂದ್_ಅಂಬುತೀರ್ಥ ಗಮನ ಸೆಳೆಯುತ್ತಾರೆ.
ನರಹಂತಕ ವೀರಪ್ಪನ್, ಸಂಗೊಳ್ಳಿ ರಾಯಣ್ಣ, ಕನಕದಾಸರು, ಸರ್ವಜ್ಞರ ಬಗ್ಗೆ ಅಭೂತಪೂರ್ವ ದೃಶ್ಯ ಮಾಧ್ಯಮದಲ್ಲಿ ನಾಡಿನ ಜನತೆಗೆ ನೀಡಿ ಪ್ರಖ್ಯಾತವಾದ ಡಿಜಿಟಲ್ ಮಾಧ್ಯಮ ಸಂಸ್ಥೆ ಈಗ ಶಿವಮೊಗ್ಗ ಜಿಲ್ಲೆಯ ಪ್ರವಾಸ ಮಾಡಿ ಕದಂಬರ ಇತಿಹಾಸದ ಬಗ್ಗೆ, ಕನ್ನಡದ ಮೊದಲ ಶಾಸನದ ಬಗ್ಗೆ, ಈಸೂರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನೇಕ ಕಂತುಗಳಲ್ಲಿ ಅತ್ಯುತ್ತಮ ಮಾಹಿತಿ ನೀಡಿದ್ದಾರೆ.
ಈಗ ಗೇರುಸೊಪ್ಪೆಯ ರಾಣಿ - ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತಳಾಗಿದ್ದ ಜೈನ ರಾಣಿ ಚೆನ್ನಬೈರಾದೇವಿಯ ಎಪಿಸೋಡುಗಳನ್ನು ಇವತ್ತಿನಿಂದ ಪ್ರಕಟಿಸುತ್ತಾರೆ.
ಇಲ್ಲಿ ಕ್ಲಿಕ್ ಮಾಡಿ #ಡಿಜಿಟಲ್_ಮಾಧ್ಯಮದ ಎಪಿಸೋಡುಗಳನ್ನು ನೋಡ ಬಹುದು
https://www.facebook.com/share/v/h7wG9M7sT6vVPQbq/?mibextid=xfxF2i
ಇವರಿಗೆ ಈ ಭಾಗದ ರಾಣಿ ಚೆನ್ನಬೈರಾದೇವಿಯ ಇತಿಹಾಸದ ಹೆಜ್ಜೆಗಳು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಆ ಸ್ಥಳಗಳಿಗೆ ಕರೆದೊಯ್ದು ವಿವರಿಸುತ್ತಿರುವ ಲೋಕರಾಜ ಜೈನರ ಕೆಲಸ ಪ್ರಶಂಸನೀಯವಾಗಿದೆ.
ಮೊದಲ ಭಾಗದಲ್ಲಿ ಜೋಗ ಜಲಪಾತದ ಸಮೀಪದ ಸೀತಾಕಟ್ಟೆ ಸೇತುವೆ ನಿರ್ಮಾಣದ ಮೊದಲು ಕಟ್ಟಿಗೆ ಸೇತುವೆಯನ್ನು ಸ್ಥಳೀಯ ಕುಣುಬಿ ಜನರು, ಮರಾಠಿ ಜನರು ಮತ್ತು ಗೊಂಡ ಜನರು ಕಟ್ಟುತ್ತಿದ್ದರು ಅವರೆಲ್ಲ ಆಗ ಬ್ರಿಟೀಶ್ ಬಂಗಲೆಯ ಉಸ್ತುವಾರಿಯ ಹೊಂದಿದ್ದ ವಟ್ಟಕ್ಕಿ ಮನೆತನದ ಆಳುಗಳಾಗಿದ್ದರು.
ರಾಣಿ ಚೆನ್ನಾ ಬೈರಾದೇವಿಯ ದಂಡನಾಯಕರಾಗಿದ್ದ ಈ ಮನೆತನಕ್ಕೆ ಮೈಸೂರು ಮಹಾರಾಜರ ಕಾಲದಲ್ಲಿ ಕೊತ್ವಾಲ್ ಎಂಬ ಬಿರುದು ಮತ್ತು ಚಿನ್ನದ ನೇಗಿಲು ಕಾಣಿಕೆಯಾಗಿ ನೀಡಿದ್ದರು ಎಂದು ಲೋಕರಾಜ ಜೈನರು ನೀಡಿದ ಮಾಹಿತಿ ಯಾವ ಇತಿಹಾಸ ಪುಸ್ತಕವೂ ನೀಡದ ಅಪೂರ್ವ ಮಾಹಿತಿ.
ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಬಗ್ಗೆ ಗಜಾನನ ಶರ್ಮರ ಪುಸ್ತಕ, ಗಣೇಶಯ್ಯರು ಬರೆದ ಬೆಳ್ಳಿಕಾಳು ಎಂಬ ಪಿಕ್ಷನ್ ಪುಸ್ತಕಗಳ ಜೊತೆ ಡಿಜಿಟಲ್ ಮಾಧ್ಯಮದಲ್ಲಿ ಮಾಹಿತಿ ನೀಡುತ್ತಿರುವ ಬ್ಯಾಕೋಡಿನ ಉಪನ್ಯಾಸಕರು ಸಂಶೋದಕರಾದ ಲೋಕರಾಜ ಜೈನರು ಪ್ರಮುಖರು.
ಬ್ರಿಟಿಶರ SS ಗೇರುಸೊಪ್ಪೆ ಎಂಬ ಹಡಗಿನಲ್ಲಿ ಬೆಳ್ಳಿಯ ಬಾರ್ ಗಳನ್ನು ತುಂಬಿಕೊಂಡು ಹೋಗುವಾಗ ಜಮ೯ನ್ ದೇಶದ ಸಬ್ ಮೆರಿನ್ ಅದನ್ನು ಹೊಡೆದುರುಳಿಸಿತ್ತು ಆ ಬೆಳ್ಳಿಗಳು ಗೇರುಸೊಪ್ಪೆಯ ರಾಣಿಗೆ ಸೇರಿದ ನಿದಿ ಎಂಬ ವದಂತಿ ಇದೆ.
ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಅರಣ್ಯದಲ್ಲಿರುವ ಕಾನೂರು ಕೋಟೆ, ಆವಿನಳ್ಳಿಯಲ್ಲಿರುವ ಚೆನ್ನಾ ಬೈರಾದೇವಿ ಸಮಾದಿ, ರಾಜ ವೆಂಕಟಪ್ಪ ನಾಯಕ ಚೆನ್ನಾ ಬೈರಾದೇವಿ ಬಂದಿಸಿಟ್ಟಿದ್ದ ಇಕ್ಕೇರಿ ಕೋಟೆಯ ಸೆರಮನೆ ಇವೆಲ್ಲ ವಿಶೇಷ ಸ್ಥಳಗಳಾಗಿದೆ.
ರಾಜ ಮನೆತನದ ಇತಿಹಾಸ ಆ ಕಾಲದಲ್ಲಿ ಬರೆದವರು ರಾಜರ ಅಂತಃಪುರದ ರಾಜಾಶ್ರಯ ಹೊಂದಿದ್ದ ಇತಿಹಾಸ ಕಾರರು ಅವರು ತಮ್ಮ ರಾಜರಿಗೆ ಪ್ರಿಯವಾದದ್ದೆ ಬರೆಯ ಬೇಕಾಗಿದ್ದ ಮಿತಿ ಇತ್ತು.
ಆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರ ಡೈರಿ ಸ್ಥಳೀಯವಾದ ಕೆಲ ವಾಸ್ತವ ಸನ್ನಿವೇಶಗಳ ದಾಖಲೆ ಆಗಿದೆ.
ಆದರೆ ಜನಪದದಲ್ಲಿ ಅಳಿಸದೇ ಉಳಿದ ಅನೇಕ ವಿಷಯಗಳು ಎಲ್ಲೂ ದಾಖಲಾಗಿಲ್ಲ ಇದಕ್ಕೆ ಉದಾಹರಣೆ ಚಿತ್ರದುರ್ಗದ ಕೋಟೆಯ ಓಬವ್ವನ ಕಿಂಡಿ ಆದರೆ ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಆದರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸತ್ಯಕಥೆ ಇದನ್ನು ಖ್ಯಾತ ಸಾಹಿತಿ ತ.ರಾ.ಸು. ತಮ್ಮ ಕಾದಂಬರಿಯಲ್ಲಿ ಮೊದಲಿಗೆ ಬರೆದರು, ಖ್ಯಾತ ಚಲನ ಚಿತ್ರ ನಿರ್ಧೇಶಕ ಪುಟ್ಟಣ್ಣ ಕಣಗಾಲ್ ತಮ್ಮ ನಾಗರ ಹಾವು ಚಿತ್ರದಲ್ಲಿ ಈ ಕಥೆಯನ್ನೇ ಒಂದು ಹಾಡಿನಲ್ಲಿ ಚಿತ್ರಿಸಿ ಪ್ರಖ್ಯಾತಿ ಮಾಡಿದ್ದರು.
ರಾಜ ಮನೆತನದ ಇತಿಹಾಸ ಆ ಕಾಲದಲ್ಲಿ ಬರೆದವರು ರಾಜರ ಅಂತಃಪುರದ ರಾಜಾಶ್ರಯ ಹೊಂದಿದ್ದ ಇತಿಹಾಸ ಕಾರರು ಅವರು ತಮ್ಮ ರಾಜರಿಗೆ ಪ್ರಿಯವಾದದ್ದೆ ಬರೆಯ ಬೇಕಾಗಿದ್ದ ಮಿತಿ ಇತ್ತು.
ಆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರ ಡೈರಿ ಸ್ಥಳೀಯವಾದ ಕೆಲ ವಾಸ್ತವ ಸನ್ನಿವೇಶಗಳ ದಾಖಲೆ ಆಗಿದೆ.
ಆದರೆ ಜನಪದದಲ್ಲಿ ಅಳಿಸದೇ ಉಳಿದ ಅನೇಕ ವಿಷಯಗಳು ಎಲ್ಲೂ ದಾಖಲಾಗಿಲ್ಲ ಇದಕ್ಕೆ ಉದಾಹರಣೆ ಚಿತ್ರದುರ್ಗದ ಕೋಟೆಯ ಓಬವ್ವನ ಕಿಂಡಿ ಆದರೆ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಆದರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸತ್ಯಕಥೆ ಇದನ್ನು ಖ್ಯಾತ ಸಾಹಿತಿ ತ.ರಾ.ಸು. ತಮ್ಮ ಕಾದಂಬರಿಯಲ್ಲಿ ಮೊದಲಿಗೆ ಬರೆದರು, ಖ್ಯಾತ ಚಲನ ಚಿತ್ರ ನಿರ್ಧೇಶಕ ಪುಟ್ಟಣ್ಣ ಕಣಗಾಲ್ ತಮ್ಮ ನಾಗರ ಹಾವು ಚಿತ್ರದಲ್ಲಿ ಈ ಕಥೆಯನ್ನೇ ಒಂದು ಹಾಡಿನಲ್ಲಿ ಚಿತ್ರಿಸಿ ಪ್ರಖ್ಯಾತಿ ಮಾಡಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ನೂರಾರು ಇತಿಹಾಸದ ಸತ್ಯಕಥೆ ಕುರುಹುಗಳು ಇದೆ ಅದನ್ನು ಹಿಂದಿನವರು ದಾಖಲಿಸಿಲ್ಲ ಈಗಿನವರು ದಾಖಲಿಸಲು ಹೋದರೆ ಒಂದು ಕಾಲದ ನಮ್ಮ ಶಾಲೆಗಳ ಇಂಗ್ಲೀಷ್ ಮೇಷ್ಟರುಗಳಂತೆ ಗ್ರಾಮರ್/ಉಚ್ಚಾರಣೆಗಳ ತಪ್ಪುಗಳನ್ನೆ ದೊಡ್ಡ ಅಪರಾದ ಎಂಬಂತೆ ಗೇಲಿ ಮಾಡಿ ಆ ಕಾಲದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಅಂದರೆ ಕಬ್ಬಿಣದ ಕಡಲೆ ಮಾಡಿಟ್ಟಂತೆ ಮಾಡುವ ಮೂಲಕ ಹೊಸಬರು ಇತಿಹಾಸದ ಬಗ್ಗೆ ಬರೆಯದಂತೆ ಮಾಡುವ ಅನೇಕ ಉದಾಹರಣೆ ಇದೆ.
ಹೊಸಬರಿಗೆ ಪ್ರೋತ್ಸಾಹಿಸ ಬೇಕು ಅವರ ತಪ್ಪುಗಳನ್ನ ನಯವಾಗಿ ತಿದ್ದಿ ಅವರಿಗೆ ಹೆಚ್ಚು ಸಕ್ರಿಯರಾಗಿಸುವ ಕೆಲಸ ಮಾಡ ಬೇಕು ಅದನ್ನ ಬಿಟ್ಟು ತಾವೊಬ್ಬರೆ ವಿದ್ಯಾವಂತರು, ಸಂಶೋದಕರು, ಡಾಕ್ಟರ್ ಗಳು ಅನ್ನುವ ಅಹಂ ಮತ್ತು ಹೊಸಬರಿಗೆ ನೀವೇನಾಗಿದ್ದೀರಿ... ಎ0ದು ಪ್ರಶ್ನಿಸುವವರು ಇದ್ದಾರೆ.
ಕೆಲವು ಗಾದೆಗಳು ಇದೆ "ವಿದ್ಯೆ ಇಲ್ಲದವನಿಗೂ ಗೌರವ ಕೊಟ್ಟು ಮಾತಾಡುವವನೆ ವಿದ್ಯಾವಂತ " ಅಂತ,ಇನ್ನೊಂದು "ಮಾನವೀಯ ಅರ್ಹತೆಗಳು ಶೈಕ್ಷಣಿಕ ಅರ್ಹತೆಗಿಂತ ಶ್ರೇಷ್ಟ" (Humaterian qualification is greater than Academic qualification).
ಲೋಕರಾಜ್ ಜೈನರ ಸಂಪರ್ಕ ಸಂಖ್ಯೆ +91 73378 54916
Comments
Post a Comment