Blog number 2047.ಶಿವಮೊಗ್ಗ ಜಿಲ್ಲೆಯ ಇಬ್ಬರು ಸಾಮಾನ್ಯ ಶಿಕ್ಷಕರ ಅಸಾಮಾನ್ಯವಾದ ಇತಿಹಾಸ ಸಂಶೋಧನಾ ಕಾರ್ಯಗಳು ಅಭಿನಂದನೀಯ.
#ಶಿವಮೊಗ್ಗ_ಜಿಲ್ಲೆಯ_ಈ_ಇಬ್ಬರು_ಶಿಕ್ಷಕರು
#ಜಿಲ್ಲೆಯ_ಇತಿಹಾಸ_ಸಂರಕ್ಷಣೆಯ_ಘನತೆ_ಕಾಪಾಡಿದವರು
#ಪ್ರತಿ_ಊರಿಗೂ_ಇತಿಹಾಸ_ಇದೆ_ಅದನ್ನು_ದಾಖಲು_ಮಾಡುವ_ಕೆಲಸ_ಆಗಬೇಕಾಗಿದೆ
#ಯಾವ_ಪ್ರತಿಫಲಾಪೇಕ್ಷೆ_ಇಲ್ಲದೆ_ತಮ್ಮ_ವಿದ್ಯಾರ್ಥಿಗಳ_ಬೋದನೆಗೂ
#ತಾವು_ಪಡೆಯುವ_ವೇತನಕ್ಕೂ_ನ್ಯಾಯ_ನೀಡಿ
#ತಮ್ಮ_ಇತಿಹಾಸ_ಸಂಶೋದನೆ_ಕೆಲಸ_ಅದ್ಬುತವಾಗಿ_ಮಾಡಿದವರು.
ಕರ್ನಾಟಕ ರಾಜ್ಯದ ಶಾಸನಗಳ ಅಧ್ಯಯನದ ಅಶ್ವಿನಿ ದೇವತೆ ಎಂದೇ ಕರೆಯುವ ಬೆಂಜಮಿನ್ ಲೇವಿಸ್ ರೈಸ್ ಒಬ್ಬ ಸಾಮನ್ಯ ವ್ಯಕ್ತಿ ಆಗಿದ್ದವರು ಅವರಿಗೆ ಶಿಲಾಶಾಸನಗಳ ಬಗ್ಗೆ ಇದ್ದ ಕೌತುಕ ಈ ಕ್ಷೇತ್ರದಲ್ಲಿ ಹೆಚ್ಚು ಕಾರ್ಯನಿರ್ವಹಿಸಲು ಕಾರಣವಾಯಿತು.
ಇವರ ಆಸಕ್ತಿಯ ಕೆಲಸವೇ ಇವರನ್ನು ಬ್ರಿಟೀಷ್ ಸರ್ಕಾರದಲ್ಲಿ ಮೈಸೂರು ರಾಜ್ಯದ ಆರ್ಕಾಲಜಿ ಡಿಪಾರ್ಟ್ಮೆಂಟ್ ನಿರ್ದೇಶಕರಾಗಿಸಿತು.
ನಂತರ ಇವರು ಇಡೀ ರಾಜ್ಯ ಸುತ್ತಿದರು ಸ್ಥಳಿಯ ಪಟೇಲರು ಶಾನುಬೋಗರ ಸಹಾಯ ಪಡೆದು 12 ಸಂಪುಟಗಳಲ್ಲಿ ರಾಜ್ಯದ 20 ಸಾವಿರ ಶಾಸನದಲ್ಲಿ 10 ಸಾವಿರ ಶಾಸನ #ಕರ್ನಾಟಕ_ಎಪಿಗ್ರಾಪಿಯ ಪ್ರಕಟಿಸಿದರು.
ಶಿವಮೊಗ್ಗ ಜಿಲ್ಲೆಯ ರಮೇಶ್ ಹಿರೇಜಂಬೂರ್ ಮತ್ತು ಲೋಕರಾಜ ಜೈನರು ಅವರವರ ವ್ಯಾಪ್ತಿಯಲ್ಲಿ ಕದಂಬರ ಇತಿಹಾಸ ಮತ್ತು ರಾಣಿ ಚೆನ್ನಬೈರಾದೇವಿಯ ಇತಿಹಾಸದ ಬಗ್ಗೆ ಮಾಡಿದ ಸಂಶೋಧನೆ ಮತ್ತು ಅದನ್ನು #ಡಿಜಿಟಲ್_ಮಾಧ್ಯಮ ದಲ್ಲಿ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಸುತ್ತಿರುವುದು ನೋಡಬಹುದು.
ಪ್ರತಿ ಊರಿಗೂ ಇತಿಹಾಸ ಇದೆ, ಅಲ್ಲಿ ಇತಿಹಾಸದ ಕಥೆ ಹೇಳುವ ಶಿಲಾಶಾಸನ, ಸ್ಮಾರಕ, ಕೋಟೆ ಕೊತ್ತಳ ಮತ್ತು ಪುರಾತನ ದೇವಾಲಯಗಳಿದೆ ಅದನ್ನು ಸ್ಥಳಿಯರಿಗೆ ತಿಳಿಸುವ ದಾಖಲಿಸುವ ಕೆಲಸ ಆಗಬೇಕಾಗಿದೆ.
ಇದನ್ನು ಸ್ಥಳಿಯ ಆಸಕ್ತ ಶಿಕ್ಷಕರಿಂದ ಸಾಧ್ಯವಿದೆ ಅವರು ಅದನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬಹುದಾಗಿದೆ ಇದಕ್ಕೆ ಪ್ರೇರಣೆಯಾಗಿರುವ ಕದಂಬ ಇತಿಹಾಸದ ಸಂಶೋದಕರಾದ ರಮೇಶ್ ಹಿರೇಜಂಬೂರ್ ಮತ್ತು ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಇತಿಹಾಸ ಸಂಶೋದಕರಾದ ಲೋಕರಾಜ ಜೈನರು ಮಾದರಿ ಆಗಿದ್ದಾರೆ.
https://youtu.be/lyPDP1KUX_0?feature=shared
https://youtu.be/zNDYAdKlmp8?feature=shared
Comments
Post a Comment