Blog number 2090. ವಿರಳಾತಿ ವಿರಳ ಬಾಂಬೆ ರಕ್ತದ ಗುಂಪಿನವರು ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರೂ ಇಲ್ಲ ಈ ಎಲ್ಲಾ ಬ್ಲಡ್ ಬ್ಯಾಂಕ್ ಮಾಹಿತಿ ಶಿವಮೊಗ್ಗದ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಸೀನಿಯರ್ ಎಕ್ಸಿಕ್ಯೂಟಿವ್ ಧರಣೇಂದ್ರ ದಿನಕರ್ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.
#ಶಿವಮೊಗ್ಗ_ಜಿಲ್ಲೆಯ_ರಕ್ತದಾನದ_ಶತಕ_ವೀರ_116_ಬಾರಿ_ರಕ್ತದಾನ_ಮಾಡಿದ
#ಜಿಲ್ಲೆಯ_ಆಪತ್ಬಾಂದವ_ದರಣೇಂದ್ರ_ದಿನಕರ್_ಸಂದಶ೯ನ.
#ಸರ್ಕಾರ_ಒಂದು_ಯುನಿಟ್_ರಕ್ತಕ್ಕೆ_ಖಾಸಾಗಿ_ಆಸ್ಪತ್ರೆಗೆ_ಒಂದು_ಸಾವಿರದ_ನಾಲ್ಕು_ನೂರು
#ಬಿಪಿಎಲ್_ಕಾರ್ಡುದಾರರಿಗೆ_ಆರುನೂರಾ_ನಿಗದಿ_ಮಾಡಿದೆ
#ಇದು_ರಕ್ತಪರೀಕ್ಷೆ_ಪ್ಯಾಕಿಂಗ್_ವೆಚ್ಟ_ಮಾತ್ರ
#ರಕ್ತದಲ್ಲಿ_ಅಪರೂಪದ_ಬಾಂಬೆ_ಗ್ರೂಪ್_ಇದೆ
#ಶಿವಮೊಗ್ಗ_ಜಿಲ್ಲೆಯಲ್ಲಿ_ಈ_ಗುಂಪಿನವರು_ಒಬ್ಬರೂ_ಇಲ್ಲ
#ಪಕ್ಕದ_ಸಿದ್ದಾಪುರ_ತಾಲ್ಲೂಕಿನ_ಆಡುಕಟ್ಟದಾ_ಕೊರ್ಲಕೈನಲ್ಲಿ_ಒಬ್ಬರಿದ್ದಾರೆ.
#ಅವರು_ಸಾಗರದ_ಎಲ್_ಬಿ_ಕಾಲೇಜ್_ವಿದ್ಯಾರ್ಥಿ_ಉದಯಕುಮಾರ್.
https://youtu.be/1ag9UWU3kkw?feature=shared
ರಕ್ತದಾನ ಶ್ರೇಷ್ಟ ದಾನ- ಇನ್ನೊಂದು ಜೀವದಾನದ ಕೆಲಸ ಮತ್ತು ರಕ್ತದಾನದ ಬಗ್ಗೆ ಪ್ರಾರಂಭದಲ್ಲಿದ್ದ ಮೂಡ ನಂಬಿಕೆಗಳು ಬದಲಾಗಿದೆ, ಹೊಸ ತಂತ್ರಜ್ಞಾನಗಳು ಬಂದಿದೆ, ವೈದ್ಯಕೀಯ ಲೋಕದಲ್ಲಿ ದಾನಿಯ ರಕ್ತ ಪರೀಕ್ಷೆ ಸರಿಯಾಗಿ ನಡೆಸಿ ಯಾವುದೇ ಸೋಂಕು ಇಲ್ಲದ್ದನ್ನ ದೃಡೀಕರಿಸಿ ರೋಗಿಯ ದೇಹಕ್ಕೆ ನೀಡುತ್ತಾರೆ.
ಒಂದು ಕಾಲದಲ್ಲಿ ಜಿಲ್ಲೆಗೊಂದು ಬ್ಲಡ್ ಬ್ಯಾಂಕ್ ಕೂಡ ಇರಲಿಲ್ಲ ಈಗ ತಾಲ್ಲೂಕು ಕೇಂದ್ರಗಳಲ್ಲೂ ಬ್ಲಡ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದು ಸಮಾದಾನಕರ ವಿಷಯ ಆಗಿದೆ.
ಒಂದು ಯುನಿಟ್ ರಕ್ತ ಅಂದರೆ 250 ML ಇದನ್ನು ಪಡೆಯಲು ಬ್ಲಡ್ ಬ್ಯಾಂಕ್ ನಲ್ಲಿ ಹಣ ಪಾವತಿ ಮಾಡಬೇಕು, ರಾಜ್ಯ ಸರ್ಕಾರ ಖಾಸಾಗಿ ಆಸ್ಪತ್ರೆಗೆ ಒಂದು ಯುನಿಟ್ ರಕ್ತಕ್ಕೆ ರೂ 1400 ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಒಂದು ಯುನಿಟ್ ರಕ್ತಕ್ಕೆ ರೂ 600 ರೂ ನಿಗದಿ ಮಾಡಿದೆ ಇದರಲ್ಲಿ ರಕ್ತ ಪರೀಕ್ಷೆ ಮತ್ತು ರಕ್ತ ಸಂಗ್ರಹಿಸುವ ಪೋಚ್ (ರಕ್ತದ ಚೀಲದ) ಬೆಲೆ ಸೇರಿದೆ.
ರಕ್ತ ದಾನ ಮಾಡಿದ 34 ದಿನದ ಒಳಗೆ ರಕ್ತ ಪಡೆಯುವವರಿಗೆ ವಿತರಿಸಬೇಕು, ರಕ್ತ 35 ದಿನದ ನಂತರ ಬಳಸಲು ಬರುವುದಿಲ್ಲ ಅದನ್ನು ನೂತನ ಬಯೋ ವೇಸ್ಟ್ ತಂತ್ರಜ್ಞಾನದಲ್ಲಿ ವಿಲೇವಾರಿ ಮಾಡುತ್ತಾರೆ.
ಈಗ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದಲ್ಲಿನ ಪ್ಲೇಟ್ಲೆಟ್ - ವೈಟ್ ಬ್ಲಡ್ ಸೆಲ್ (WBC) - ರೆಡ್ ಬ್ಲಡ್ ಸೆಲ್ (RBC) - ಪ್ಲಾಸ್ಮಾ ಗಳನ್ನ ವಿಂಗಡಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.
ರಕ್ತದ ನಾಲ್ಕು ಗುಂಪುಗಳಾದ A - B-AB-0 ಮತ್ತು ಅದೇ ಹೆಸರಿನ ನೆಗಟೀವ್ ರಕ್ತದ ಗುಂಪುಗಳ ಜೊತೆ ಇನ್ನೊಂದು ವಿರಳಾತಿ ವಿರಳವಾದ ರಕ್ತದ ಗುಂಪಿದೆ ಅದು #ಬಾಂಬೆ_ಗ್ರೂಪ್ 1952 ರಲ್ಲಿ ಡಾಕ್ಟರ್ Y.M. ಬೆಂಡೆ ಮುಂಬೈನಲ್ಲಿ ಮೊದಲು ಕಂಡುಹಿಡಿದಿದ್ದರಿಂದ ಈ ರಕ್ತದ ಗುಂಪಿಗೆ ಬಾಂಬೆ ಗ್ರೂಪ್ ಎಂದೇ ಹೆಸರು ಇದೆ.
ಈ ರಕ್ತದ ಗುಂಪಿನವರು ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಯಾರೂ ಇಲ್ಲ ಪಕ್ಕದ ಸಿದ್ದಾಪುರ ತಾಲೂಕಿನ ಆಡುಕಟ್ಟಾ ಸಮೀಪದ ಕೊರ್ಲಕೈ ಗ್ರಾಮದ ಉದಯಕುಮಾರ್ ಒಬ್ಬರೇ ಇರುವುದು ಅವರು ಸಾಗರದ ಎಲ್.ಬಿ.ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿ.
ರೆಡ್ ಕ್ರಾಸ್ ಸಂಸ್ಥೆಗೆ ಆಯಾ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು ಆಗಿರುತ್ತಾರೆ ಈ ಎಲ್ಲಾ ಪ್ರಶ್ನೆಗಳಿಗೆ ದರಣೇಂದ್ರ ದಿನಕರ್ ಈ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದ ಬ್ಲಡ್ ಬ್ಯಾಂಕ್ ವಿಳಾಸ
#ರೆಡ್_ಕ್ರಾಸ್_ಸಂಜೀವಿನಿ_ಬ್ಲಡ್_ಬ್ಯಾಂಕ್
ಸೆಲ್ಲರ್, ಕ್ಷಿತಿ ಕಾಂಪ್ಲೆಕ್ಸ್, ಜೆಪಿಎನ್ ರಸ್ತೆ
ಪಸ್ಟ್ ಕ್ರಾಸ್ (ಆಭರಣ ಮಳಿಗೆ)
ಶಿವಮೊಗ್ಗ (08182-228855).
Comments
Post a Comment