Blog number 1054. ಅಜಿನೋಮೋಟೋ ಎಂಬ ನಿದಾನ ವಿಷ ಬಳಕೆ ರದ್ದಾಗಲಿ. ರುಚಿ ವೃಧ್ಧಿ ಮಾಡುವ ವಿಶೇಷ ಖಾರಾ ಮತ್ತು ಪರಿಮಳ ಬೀರುವ ಜಪಾನ್ ದೇಶದ ಈ ಪದಾರ್ಥದಿಂದ ಯುವಜನಾಂಗ ಹೃದಯಾಘಾತದಿಂದ ಅಲ್ಪ ಆಯುಷಿಗಳಾಗುವ ದುರಂತ
#ನಾಲಿಗೆಗೆ_ರುಚಿ_ಆರೋಗ್ಯಕ್ಕೆ_ಹಾನಿಕರ #ಅಜಿನೋಮೊಟೋ_ಅಥವ_MSG #ಈಗ_ಎಲ್ಲಾ_ಹೋಟೆಲ್_ಬೇಕರಿಗಳಲ್ಲಿ_ಭರಪೂರ_ಬಳಕೆ. #ಈ_ಮನುಷ್ಯನನ್ನು_ಕೊಲ್ಲೂವ_ನಿದಾನ_ವಿಷ_ಬೇಕಾ? #ಎಲ್ಲಾ_ಆಹಾರ_ಉತ್ಪಾದಕರು_ಅಡುಗೆಯವರು_ಇದನ್ನು_ಬಳಸಬಾರದು. #ಹೋಟೆಲ್_ಮಾಲಿಕರಲ್ಲಿ_ಇದರ_ಬಗ್ಗೆ_ಪಾಪ_ಪ್ರಜ್ಞೆ_ಬರಲಿ. ಸಕ್ಕರೆಯ ಹರಳಿನಂತಹ ಈ ಅಜಿನೋ ಮೋಟೋ ಅಥವ MSG ಬಳಸದ ಹೋಟೆಲ್ ವಿರಳ ಇದನ್ನು ಬಳಸದೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅಡುಗೆ ಭಟ್ಟರು ಬಂದಾಗಿದೆ. ಇದನ್ನು ಬಳಸಿದರೆ ಅಡುಗೆಯಲ್ಲಿ ಹೇಗೆ ಕೊರತೆ ಆದರೂ ಇದು ನೀಡುವ ವಿಶೇಷ ರುಚಿ - ಖಾರಾ - ಪರಿಮಳದಿಂದ ಊಟ ತಿಂಡಿ ನಾಲಿಗೆಗೆ ಕ್ಷಣಿಕವಾಗಿ ರುಚಿ ನೀಡುತ್ತದೆ, ಪದೇ ಪದೇ ತಿನ್ನಲೇ ಬೇಕೆಂಬ ವಾಂಚೆ ಮೂಡಿಸುತ್ತದೆ. ಇದನ್ನು ಹೆಚ್ಚು ಬಳಸುವ ಸ್ಥಳಕ್ಕೆ ಹೆಚ್ಚು ಗ್ರಾಹಕರು ಬರುತ್ತಾರೆ ಆದ್ದರಿಂದ ಅಜಿನೋಮೊಟೋ ಬಳಸದ ಹೋಟೆಲ್ ತುಂಬಾ ಕಡಿಮೆ. ಆದರೆ ಅಜಿನೋಮೋಟೋ ನಿರಂತರ ಸೇವನೆಯಿಂದ ಇದು ಮನುಷ್ಯನ ಅಪದಮನಿಗಳನ್ನು ನಿರ್ಬಂಧಿಸುತ್ತದೆ ಇದರಿಂದ ಹೃದಯಾಘಾತಗಳು ಹೆಚ್ಚು. ಎದೆ ನೋವು, ಉಸಿರಾಟದ ಸಮಸ್ಯೆ, ಡಯಾಬಿಟಿಸ್, ಹೃದ್ರೋಗ ಮಕ್ಕಳಲ್ಲಿ ಬುದ್ದಿಶಕ್ತಿ ಕುಂಟಿತ ಮತ್ತು ದೈಹಿಕ ಬೆಳವಣಿಗೆಯಲ್ಲಿ ಸ್ಥೂಲಕಾಯಕ್ಕೆ ಕಾರಣ ಆಗುತ್ತಿದೆ. ಸಣ್ಣ ವಯಸ್ಸಲ್ಲಿ ಹೃದಯ ಸ್ಥಂಬನದಿಂದ ಮೃತರಾಗುತ್ತಿರುವ ಈಗಿನ ಯುವ ಜನಾಂಗದಲ್...