#ಜೋಕುಮಾರಸ್ವಾಮಿ #ಕುಮಾರರಾಮ #ಬೇರೆ_ಬೇರೆಯಾ? #ಮಲೆನಾಡಿನಲ್ಲಿ_ದೀವರು_ಆರಿದ್ರಾಮಳೆ_ಹಬ್ಬದಲ್ಲಿ_ಕುಮಾರರಾಮನ_ಪೂಜಿಸುತ್ತಾರೆ #ಬಯಲು_ಸೀಮೆಯಲ್ಲಿ_ಬೆಸ್ತರು_ಗಣೇಶ_ಚತುರ್ಥಿ_ನಂತರ_ಜೋಕುಮಾರಸ್ವಾಮಿ_ಹಬ್ಬ_ಆಚರಿಸುತ್ತಾರೆ. #Kumararama #jokumaraswamy #Malenadu #Bayaluseeme #Divaru #Bestaru. ಈ ವರ್ಷದ ಆರಿದ್ರಾ ಮಳೆ ಹಬ್ಬದಲ್ಲಿ ಮಲೆನಾಡಿನ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಸಾಗರ- ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ತಾಲೂಕಿನ ಭಾಗದಲ್ಲಿನ ಮೂಲ ನಿವಾಸಿಗಳಾದ #ದೀವರ ಸಮಾಜದಲ್ಲಿ ಕುಮಾರ ರಾಮನ ಪೂಜಿಸುವ ಬಗ್ಗೆ ಬರೆದಿದ್ದೆ. ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ಓದಿದ ಉತ್ತರ ಕರ್ನಾಟಕದ ಪೇಸ್ ಬುಕ್ ಗೆಳೆಯರು ಅನೇಕರು ಬಯಲು ಸೀಮೆಯ ಬೆಸ್ತರು ಗಣಪತಿ ಹಬ್ಬದ ನಾಲ್ಕನೆ ದಿನದಿಂದ ಏಳು ದಿನ #ಜೋಕುಮಾರಸ್ವಾಮಿ ಹಬ್ಬ ಆಚರಿಸುವ ಬಗ್ಗೆ ಮಾಹಿತಿ ನೀಡಿದ್ದರು. ಮಲೆ ನಾಡಿನ ದೀವರು ಪೂಜಿಸುವ ಕುಮಾರ ರಾಮ ಬುಡಕಟ್ಟು ರಾಜಪುತ್ರ ತನ್ನ ದೀರತನ - ವೀರತ್ವ ಮತ್ತು ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದ್ರಾಬಾದ್ ಕರ್ನಾಟಕದ ದೊರೆ ಅವನನ್ನ ಸೈನಿಕರಾಗಿದ್ದ ದೀವರು ಆರಿದ್ರಾ ಮಳೆ ಹಬ್ಬದಲ್ಲಿ ಪೂಜಿಸುತ್ತಾರೆ. ಉತ್ತರ ಕರ್ನಾಟಕದ ಬೆಸ್ತರು ಬಾದ್ರಪದ ಚೌತಿಯ ಗಣಪತಿ ಹಬ್ಬದ ನಾಲ್ಕು ದಿನದ ನಂತರ ಬರುವ ಬಾದ್ರಪದ ಅಷ್ಟಮಿಯಂ...