#ವರದಳ್ಳಿಯ_ತಪಸ್ವಿನಿ_ಮಾಹಿತಿ_ಗೊತ್ತಾ?
#ಈಗ_ಜಗಮಗಿಸುತ್ತಿರುವ_ಶ್ರೀಧರತೀರ್ಥ_ದಟ್ಟಾರಣ್ಯ_ಕಾಡಾಗಿದ್ದು
#ಶ್ರೀಧರ_ಸ್ವಾಮಿಗಳು_ಪ್ರವೇಶಿಸುವುದಕ್ಕಿಂತ_ಮುಂಚೆ_ಒಬ್ಬ_ಯುವತಿ_ಏಕಾಂತ_ಅನುಷ್ಟಾನ_ಮಾಡುತ್ತಿದ್ದಳು.
#ಅವಳ_ಹೆಸರು_ಪಾರ್ವತಮ್ಮ_ಎಂದಿತ್ತು.
#Varadalli #Tapaswini #Parvathamma #Sridharswamy #Sagar #Ganapathibhat
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಳ್ಳಿ #ಶ್ರೀದರಸ್ವಾವಿಗಳ ತಪೋಭೂಮಿ ಅಲ್ಲಿ ಅವರ ಪಾದಾರ್ಪಣೆಗೆ ಮೊದಲೇ ಅಲ್ಲಿ ತಪೋ ಸಾಧನೆ ಮಾಡುತ್ತಿದ್ದ #ಪಾರ್ವತಿ ಎಂಬ ತಪಸ್ವಿನಿ ಅಲ್ಲಿದ್ದರೆಂಬ ಸುದ್ದಿ ಜನ ಮರೆತಿದ್ದಾರೆ.
ಈ ವಿಚಾರವನ್ನು ಹಿರಿಯರಾಗಿದ್ದ ಎಡಜೆಗಳೆಮನೆಯ ಅಣ್ಣಪ್ಪ ಆಚಾರ್ ಅವರಿಂದ ಒಮ್ಮೆ ಕೇಳಿದ್ದೆ ಈಗ ಅವರು ಇಹ ಲೋಕ ತ್ಯಜಿಸಿದ್ದಾರೆ ಅವರು ಶ್ರೀಧರ ಸ್ವಾಮಿಗಳ ತಪಸ್ಸಿನ ಗುಡಿಸಲು ದುರಸ್ತಿ ಮಾಡಿದವರು.
ಇದೇ ವಿಚಾರ ಶೀಧರ ಸ್ವಾಮಿಗಳ ಭಕ್ತರಾದ ಜಿಗಳೆಮನೆ ಗಣಪತಿ ಭಟ್ಟರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದಿದ್ದಾರೆ ಆದರ ಯಥಾನಕಲು ಕೆಳಗಿದೆ ಓದಿ....
ಈಗ ಜಗಮಗಿಸುತ್ತಿರುವ ಶ್ರೀಧರತೀರ್ಥ ದಟ್ಟಾರಣ್ಯ ಕಾಡಾಗಿದ್ದು ಶ್ರೀಧರಸ್ವಾಮಿಗಳು ಪ್ರವೇಶಿಸುವುದಕ್ಕಿಂತ ಮುಂಚೆ ಒಬ್ಬ ಯುವತಿ ಏಕಾಂತ ಅನುಷ್ಟಾನ ಮಾಡುತ್ತಿದ್ದಳು ಅವಳ ಹೆಸರು #ಪಾರ್ವತಮ್ಮ ಎಂದಿತ್ತು.
ಅಕೆ ಎಸ್ಕಿಮೋ ಮನೆಗಳ ತರಹದ ಒಂದು ಗುಹೆ ಕಟ್ಟಿಸಿಕೊಂಡು ಅದರಲ್ಲಿ ಏಕಾಂಗಿಯಾಗಿ ಇರುತ್ತಿದ್ದಳು.
ಈಗಿನ ಆಫೀಸ್ ಅಜುಬಾಜಿನಲ್ಲಿ ದಟ್ಟ ಕಾನನದ ನಡುವೆ ಈ ಗುಹೆ ಇತ್ತು ಈ ಗುಹೆ ಬಿಟ್ಟರೆ ಮತ್ತೇ ಅಡಿಗೆಮನೆ ಇತ್ಯಾದಿ ಯಾವುದು ಇರಲಿಲ್ಲ ಆ ಯುವತಿ ಯಾವುದೇ ಅಡುಗೆ ತಯಾರು ಮಾಡುವ ವ್ಯವಸ್ಥೆ ಇಟ್ಟುಕೊಂಡಿದ್ದು ಕಂಡು ಬರುತ್ತಿರಲಿಲ್ಲ.
ಆಗಿನ ದಿನ ಗಳಲ್ಲಿ ಹುಲಿಗಳು ಸಹ ಈ ಪ್ರದೇಶದಲ್ಲಿ ಅಡ್ಡಾಡುತ್ತಿದ್ದವು 1956- 57 ಅಜುಬಾಜಿನಲ್ಲಿ ಈಕೆ ಇದ್ದಳೆಂದು ನನ್ನ ಅಂದಾಜು.
ಜಿಗಳೇಮನೆ ಊರಿನವರು ಅಕೆಗೆ ಹಣ್ಣು ಹಂಪಲು, ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಮಾಡಿದ ಸಿಹಿ ತಿನಿಸು ಇತ್ಯಾದಿ ತೆಗೆದುಕೊಂಡು ಹೋಗಿಕೊಡುತ್ತಿದ್ದರು.
ನನ್ನ ಅಮ್ಮ ಹೀಗೆ ಕೊಡಲು ಹೋಗುತ್ತಿದ್ದಾಗ ನಾನೂ ಅವಳೊಟ್ಟಿಗೆ ಹೋಗುತ್ತಿದ್ದೆ.
ಸಮೃದ್ಧಿ ನೀರು ಹರಿಯುತ್ತಿತ್ತು ನಮ್ಮ ಪಕ್ಕದ ಮನೆಯ ಭವಾನಮ್ಮ ಅವರು ಆ ಯುವತಿಯ ಅಧಿಕೃತ ವಕ್ತಾರರು, ಪರ್ಸನಲ್ ಸೆಕ್ರೆಟರಿ ಆಗಿದ್ದರು.
ದೇವಿ ದೇವಸ್ಥಾನ ಕ್ಕೆ ಶ್ರೀಧರ ಸ್ವಾಮಿಗಳ ಪದಾರ್ಪಣೆ ಆಗಿತ್ತು ಆದರೆ ಶ್ರೀಧರ ತೀರ್ಥ ಎಂದು ಕರೆಯುವ ಭಾಗ ಯಾರ ಗಮನದಲ್ಲಿ ಇದ್ದಂತಿರಲಿಲ್ಲ.
ಈಗ ಶ್ರೀಧರ ತೀರ್ಥ ಎಂದು ಹೆಸರಿಸಲ್ಪಡುವ ಆ ಭಾಗಕ್ಕೆ ಯಾವ ಹೆಸರಿತ್ತು ನನಗೆ ಗೊತ್ತಿಲ್ಲ ನನಗೆ ಆಗ 5-6 ವರ್ಷ.
ಪಾರ್ವತಮ್ಮ ಸೊಂಟಕ್ಕೆ ಟವಲ್ ತರಹದ್ದು ಸುತ್ತಿಕೊಳುತ್ತಿದ್ದಳು, ಕೊರಳಲ್ಲಿ ಮೂರ್ನಾಲ್ಕು ರುದ್ರಾಕ್ಷಿ ಸರ ಹಾಕಿ ಕೊಳ್ಳುತ್ತಿದ್ದಳು.
ಭಕ್ತರೇನು ಯಾರು ಹೆಚ್ಚಿರಲಿಲ್ಲ, ನಾವು ಹೊದಾಗಲೆಲ್ಲಾ ಆಕೆ ಗುಹೆಯ ಬಾಗಿಲು ಹಾಕಿಕೊಂಡಿರುತ್ತಿದ್ದಳು, ನನ್ನ ಅಮ್ಮ ಕರೆದು ಬಾಗಿಲು ತೆಗೆಸುತ್ತುದ್ದಳು,ಬಾಗಿಲು ಎಂದರೆ ಒಬ್ಬರು ನುಸುಳಿಕೊಂಡು ಹೋಗುವಷ್ಟಿತ್ತು.
ಶ್ರೀಧರ ತೀರ್ಥದ ಕತೆ ವಾಸ್ತವಿಕ ವಾಗಿ ಇಲ್ಲಿಂದ ಪ್ರಾರಂಭವಾಗ ಬೇಕಾಗಿತ್ತು ಆದರೆ ಯಾರೂ ಇದನ್ನು ದಾಖಲಿಸಿದಂತೆ ಕಂಡು ಬಂದಿಲ್ಲ.
ಇದು ವರದಳ್ಳಿಯ ವಿಶೇಷ ಕೂಡ ಈ ಬಗ್ಗೆ ತಿಳಿದವರೂ ಮಾಹಿತಿ ದಾಖಲಿಸ ಬೇಕು.
ಜಿಗಳೆಮನೆ ಗಣಪತಿ ಭಟ್ಟರ ಪೇಸ್ ಬುಕ್ ಪೇಜ್ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.
Comments
Post a Comment