#ಹದಿನೆಂಟು_ಸಾವಿರ_ಟನ್_ಬ್ಲಾಸ್ಟಿಂಗ್_ಶರಾವತಿ_ಕೊಳ್ಳದಲ್ಲಿ_ಸ್ಟೋಟವಾಗಲಿದೆ
#ಟೆಂಡರ್_ಹಿಡಿದ_ಕಂಪನಿ_1100_ಕೋಟಿ_ರಾಜಕೀಯ_ಪಕ್ಷಕ್ಕೆ_ಎಲೆಕ್ಟ್ರೋಲ್_ಬಾಂಡ್_ದೇಣಿಗೆ
#ಶರಾವತಿ_ಪಂಪ್ಡ್_ಸ್ಟೋರೇಜ್_ವಿದ್ಯುತ್_ಯೋಜನೆ
#ಗೇರುಸೊಪ್ಪೆಯ_ಜನಾಭಿಪ್ರಾಯದ_ಸಭೆಯಲ್ಲಿ
#ಗೇರುಸೊಪ್ಪೆ_ಆಂಜನೆಯ_ದೇವಾಲಯದ_ಮಾರುತಿ_ಗುರೂಜಿ_ಮಾತುಗಳು
#ಸಮಸ್ತ_ಪಶ್ಚಿಮ_ಘಟ್ಟದ_ಧ್ವನಿ
#ಅವರ_ಧ್ವನಿ_ಪ್ರತಿಧ್ವನಿಯಾಗಿ_ವೈರಲ್_ಆಗಿದೆ.
#Sharavathi #Pumpedstorage #Project #Gerusoppe #Maruthiguruji #Uttarakannadadistrict #Shivamogga #Govtofkarnataka #Govtofindia
ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಈ ಕಾಮಗಾರಿಗೆ ಬರೋಬ್ಬರಿ 18,000 ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಸ್ಪೋಟಿಸಲಿದೆ...
2006ರಲ್ಲಿ ಈ ಪ್ರಾಜೆಕ್ಟ್ ಅಂದಾಜು ವೆಚ್ಚ ನಾಲ್ಕು ಸಾವಿರ ಕೋಟಿ ಈಗ 2025 ರಲ್ಲಿ 11 ಸಾವಿರ ಕೋಟಿ ಪ್ರಾಜೆಕ್ಟ್, ಮುಕ್ತಾಯವಾಗುವಾಗ ಎಷ್ಟೊ....
ಶರಾವತಿ ಸ್ಟೋರೇಜ್ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗಲ್, ಉತ್ತರ ಕನ್ನಡ ಜಿಲ್ಲೆಯ ಕುಮುಟಾ,ಹೊನ್ನಾವರ ಮತ್ತು ಗೇರುಸೊಪ್ಪೆ ಭಾಗದಲ್ಲಿ ಜನ ಸಂಪರ್ಕ ಸಭೆಗಳನ್ನು ರಾಜ್ಯ ಸರ್ಕಾರ ನಡೆಸಿದೆ.
ಮೊನ್ನೆ ಗೇರುಸೊಪ್ಪೆಯಲ್ಲಿ #ಶರಾವತಿ_ಪಂಪ್ಡ್_ಸ್ಟೋರೇಜ್ ಯೋಜನೆ ಜನ ಸಂಪರ್ಕ ಸಭೆಯಲ್ಲಿ ಸುತ್ತಮುತ್ತಲಿನ 10,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ದಾಖಲೆ.
ಉತ್ತರ ಕನ್ನಡ ಜಿಲ್ಲಾಡಳಿತ ಈ ಜನ ಸಂಪರ್ಕ ಸಭೆಯ ಮಾಹಿತಿ ಹೆಚ್ಚು ಪ್ರಚಾರ ಮಾಡದಿದ್ದರು ಈ ಭಾಗದ ಜನ ಸಾಮಾಜಿಕ ಜಾಲತಾಣದಿಂದ ಮಾಹಿತಿ ಪಡೆದು ಭಾಗವಹಿಸಿದ್ದು ವಿಶೇಷ.
ಈಗೆಲ್ಲ ರಾಜಕೀಯ ಸಭೆ ಇರಬಹುದು, ಹೋರಾಟದ ಸಭೆ ಇರಬಹುದು ಅಲ್ಲಿ ಮಾತನಾಡುವವರಿಗೆ ಆ ಸಭೆಯ ಮುಖ್ಯ ವಿಷಯವೇ ಪೂರ್ಣ ಓದಿರುವುದಿಲ್ಲ, ಓದಿದ್ದರೂ ನೆನಪಿರುವುದಿಲ್ಲ ಅಥವ ಅರ್ಥವಾಗಿರುವುದಿಲ್ಲ.
ಅಂತಹ ಸಭೆಗಳಿಗೆ ಭಾಷಣ ಕೇಳಲು ಬರುವ ಸಭಿಕರೂ ಕೂಡ ಆ ವಿಚಾರಕ್ಕೆ ಸಂಬಂಧಪಟ್ಟ ಕ್ಷೇತ್ರದವರಿರುವುದಿಲ್ಲ.
ಅದು ತಲಾ ಹಣ -ಬಿರಿಯಾನಿ -ಬಾಟ್ಲಿ ಕೊಟ್ಟು ವಾಹನಗಳಲ್ಲಿ ಕರೆದುಕೊಂಡು ಬರುವ ಬಾಡಿಗೆ ಜನ, ಅವರೂ ಹೆಚ್ಚು ಸಮಯ ಕುಳಿತುಕೊಳ್ಳುವುದು ಇಲ್ಲ, ಅಲ್ಲಿ ನಕರ- ನಕರವಾಗಿ ಜೋಕರ್ ರೀತಿ ಕೆಲವೇ ಕ್ಷಣ ಮಾತಾಡಿ ಚಪ್ಪಾಳೆಗಿಟ್ಟಿಸುವುದು ಈಗಿನ ಭಾಷಣಕಾರರ ಕೌಶಲ್ಯ.
ಆದರೆ ಗೇರುಸೊಪ್ಪೇಯಲ್ಲಿ ನಡೆದದ್ದು ಐತಿಹಾಸಿಕ ಪರಿಸರ ಪ್ರೇಮಿಗಳ ಸಭೆ, ಅವರೆಲ್ಲರ ಉದ್ದೇಶ ಶರಾವತಿ ಸ್ಟೋರೇಜ್ ಬೇಡ ಎಂಬ ಅಹವಾಲು ದಾಖಲಿಸಲು ಆದರೆ ರಾಜ್ಯ ಸರ್ಕಾರ ಅವರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಿರಲಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಇದು ವಾಸ್ತವ.
ಈ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಪಶ್ಚಿಮ ಘಟ್ಟದ ಸಂರಕ್ಷಣೆ ಬಗ್ಗೆ ತುಂಬಾ ಪರಿಣಾಮಕಾರಿಯಾಗಿ ಜನರಿಗೆ ಅರ್ಥವಾಗುವಂತೆ ಮತ್ತು ಸರ್ಕಾರಕ್ಕೆ ಬುದ್ಧಿ ಹೇಳುವಂತ ಮಾತನಾಡಿದವರು #ಬಂಗಾರುಮಕ್ಕಿಯ ಆಂಜನೇಯ ದೇವಾಲಯದ ಪ್ರಮುಖರಾದ #ಮಾರುತಿ_ಗುರೂಜಿ.
ಇವರ ಮಾತುಗಳು ಬಹುಶಃ ಈವರೆಗಿನ ಶರಾವತಿ ಯೋಜನೆಯ ವಿರುದ್ಧ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಯ ಎಲ್ಲಾ ಹೋರಾಟಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತುಗಳು.
ಅವರು ನಿರರ್ಗಳವಾಗಿ ತಮ್ಮ ಎದರು ಯಾವುದೇ ಮಾಹಿತಿಯ ಚೀಟಿ - ಫೈಲ್ ಇಟ್ಟುಕೊಳ್ಳದೆ ಸುಲಲಿತವಾಗಿ ಇಡೀ ಶರಾವತಿ ಯೋಜನೆಯಾ ಬಗ್ಗೆ ಮಾತಾಡಿದ್ದಾರೆ ಅದರ ಲಿಂಕ್ ಕಾಮೆಂಟ್ನಲ್ಲಿದೆ ನೋಡಿ.
ಈ ಯೋಜನೆ ಮುಕ್ತಾಯ ಯಾವಾಗ?... ಪ್ರಾಜೆಕ್ಟ್ ಮುಕ್ತಾಯವಾಗುವ ಎಷ್ಟು ಹಣ ಖರ್ಚಾಗುತ್ತದೆ?.... ಉತ್ಪಾದನೆ ಯಾವಾಗ? ...ಹೀಗೆ ಪ್ರಶ್ನೆಗಳ ಜೊತೆ ಜೊತೆಯಾಗಿ ತಮ್ಮ ವಿರೋಧ ದಾಖಲಿಸಿದ್ದಾರೆ.
ಶರಾವತಿ ನದಿಗೆ ಸಾಗರ ತಾಲೂಕಿನ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡಿದಾಗ ಆ ಯೋಜನೆಯಲ್ಲಿ ನಿರಾಶ್ರಿತರಾದವರಿಗೇ ಮೂರು ತಲೆಮಾರು ಕಳೆದರೂ ಈವರೆಗೂ ಭೂಮಿ ಪರಿಹಾರ ಸಿಕ್ಕಿಲ್ಲ...
ಗೇರುಸೊಪ್ಪೆ ಟೇಲರೇಸ್ ಪ್ರಾಜೆಕ್ಟ್ ಪ್ರಾರಂಭವಾಗಿ 25 ವರ್ಷವಾದರೂ ಇಲ್ಲಿನ ಗ್ರಾಮಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರು ಇನ್ನಿತರ ಮೂಲಭೂತ ಸೌಲಭ್ಯಗಳೇ ಸಿಕ್ಕಿಲ್ಲ....
ಶರಾವತಿ ನದಿಯ ನೀರನ್ನು ಲಿಂಗನಮಕ್ಕಿ ಡ್ಯಾಮ್ ನಿಂದ ಹೊರಬಿಡುವಾಗ ನೀರು ಗೇರುಸೊಪ್ಪದಿಂದ ಹೊನ್ನಾವರದ ತನಕ ಪ್ರವಾಹ ಉಂಟುಮಾಡುತ್ತದೆ, ಈ ವರ್ಷ 300ಕ್ಕೂ ಹೆಚ್ಚು ಮನೆಗಳು ಈ ಪ್ರವಾಹದಿಂದ ಹಾಳಾಗಿದೆ,ಅನೇಕ ಧೋಣಿಗಳು ಮುಳುಗಿದೆ, ಅನೇಕರ ಜೀವ ಹಾನಿಯಾಗಿದೆ ಆದರೆ ಸರ್ಕಾರ ಇವರಿಗೆ ಪರಿಹಾರ ನೀಡಿಲ್ಲ ಯಾಕೆಂದರೆ ಇದು ನೈಸರ್ಗಿಕ ಪ್ರವಾಹ ಅಲ್ಲವಾದ್ದರಿಂದ ಇದಕ್ಕೆ ಪರಿಹಾರ ಕೊಡಲು ಸರ್ಕಾರದಲ್ಲಿ ಅವಕಾಶ ಇಲ್ಲ...ಆದರೆ ಗೇರುಸೊಪ್ಪೆ ಯಲ್ಲಿ ಆಣೆ ಕಟ್ಟು ಕಟ್ಟದಿದ್ದರೆ ಈ ಸಮಸ್ಯೆ ಇರುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಈ ಜನ ಸಂಪರ್ಕ ಸಭೆ ಈ ಎಲ್ಲಾ ಭಾಗದಲ್ಲಿ ಕಾರ್ಗಲ್- ಗೇರುಸೊಪ್ಪೆ -ಹೊನ್ನಾವರ ಮತ್ತು ಕುಮುಟಾ ಭಾಗದಲ್ಲಿ ನಡೆಸಿದೆ ಆದರೆ ಜನರಿಗೆ ಸರಿಯಾದ ಮಾಹಿತಿ ಮಾತ್ರ ನೀಡಿಲ್ಲ...
ಡಿಪಿಆರ್ ಕನ್ನಡದಲ್ಲಿ ಮುದ್ರಿಸಿ ನೀಡಿಲ್ಲ, ತಕರಾರು ಸಲ್ಲಿಸಲು ಬಂದ ಜನರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮತ್ತು ಕುಡಿಯಲು ನೀರಿನ ಕನಿಷ್ಟ ವ್ಯವಸ್ಥೆ ಕೂಡ ಮಾಡಿಲ್ಲ...
ತರಾತುರಿಯಲ್ಲಿ ಒಂದೆರಡು ಗಂಟೆಯಲ್ಲಿ ಸಭೆ ಮಾಡಿ ಹೋಗುವ ಹುನ್ನಾರವಿದು ಆದರೆ ಇದು ನಮ್ಮ ಬದುಕಿನ ಪ್ರಶ್ನೆ....
ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದಾಗ 16 ಸಾವಿರ ಕುಟುಂಬಗಳು ಮತ್ತು 3500 ದೇವಸ್ಥಾನಗಳು ಮುಳುಗಿ ಹೋಯಿತು.....
ಈಗ ಯುನಿಸೆಫ್ ದಾಖಲೆಯಲ್ಲಿರುವ ಶರಾವತಿ ಕಣಿವ ವಿಶೇಷ ಸಸ್ಯ ಪ್ರಬೇದದ ಕಾಡು....
ಕಾಳಿಂಗ ಸರ್ಪ ಮತ್ತು ಅಪರೂಪದ ಸಿಂಗಳೀಕಗಳ ವನ್ಯ ಸಂರಕ್ಷಿತ ಅರಣ್ಯ....
ಈ ಶರಾವತಿ ಕಣಿವೆಯಲ್ಲಿ ಹದಿನೆಂಟು ಸಾವಿರ ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಸಿಡಿಸಿದರೆ.....
ಶರಾವತಿ ಕಣಿವೆಯಲ್ಲಿ ನೂರು ಮೀಟರ್ ಸುತ್ತಳತೆಯ ಎರಡು ಸುರಂಗಗಳನ್ನ ಭೂಮಿಯಿಂದ ಒಂದುವರೆ ಕಿಲೋಮೀಟರ್ ಆಳದಲ್ಲಿ ನಿರ್ಮಿಸಿದರೆ...
ಇದು ಸರ್ಕಾರಗಳು ಪಶ್ಚಿಮ ಘಟ್ಟಕ್ಕೆ ಮಾಡುವ ದೊಡ್ಡ ಅತ್ಯಾಚಾರ....
ಇದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸೇರಿರಬಹುದು ಇಲ್ಲಿ 11,000 ಕೋಟೆಯ ಯೋಜನೆಯಲ್ಲಿ ತಮ್ಮ ಪಾಲೆಷ್ಟು ಎಂಬುವ ಹಪಾಹಪಿ ಇದೆ....
ಈ ಟೆಂಡರ್ ನೀಡಿದ ಕಂಪನಿ ಈಗಾಗಲೇ ರಾಜಕೀಯ ಪಕ್ಷಕ್ಕೆ ಸಾವಿರದ ನೂರು ಕೋಟಿ ಹಣ ಎಲೆಕ್ಟೋರಲ್ ಬಾಂಡ್ ದೇಣಿಗೆ ನೀಡಿದ ವಿಚಾರ ಸಾರ್ವಜನಿಕರಿಗೆ ತಿಳಿದ ವಿಷಯ....
ಇಲ್ಲಿ ಈ ಯೋಜನೆಗಾಗಿ 40 ಅಡಿ ಅಗಲದ ರಸ್ತೆ ನಿರ್ಮಿಸಲು ಮಾತ್ರವೇ 16000 ಮರಗಳನ್ನು ತೆಗೆಯಲಿದೆ,ಕೇರಳದ ಕೋರ್ಟ್ ಒಂದು ತೀರ್ಪಿನಲ್ಲಿ ಒಂದು ಮರಕ್ಕೆ ಒಂದು ಲಕ್ಷ ಪರಿಹಾರ ನೀಡಬೇಕು ಎಂದಿದೆ ಹಾಗಾದರೆ ಇಲ್ಲಿ16,000 ಮರಗಳಿಗೆ ಪರಿಹಾರ ನೀಡುವುದು ಯಾರು?....
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ನಾಶವಾಗುವ ಅರಣ್ಯಕ್ಕೆ ಪಕ್ಕದ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಕಾಡು ತೋರಿಸಿದ್ದನ್ನು ಆಕ್ಷೇಪಿಸಿದ್ದಾರೆ...
18000 ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಉಪಯೋಗಿಸಿದರೆ ಶರಾವತಿ ಕಣಿವೆ ಏನಾಗಲಿದೆ?...
ಅರಣ್ಯ ಇಲಾಖೆ ಬಡ ರೈತ ಬೆಳೆದ ಹತ್ತಾರು ಅಡಿಕೆ ಮರ, ಬಾಳೆ ಮರ, ಹಣ್ಣಿನ ಮರಗಳನ್ನು ಕಡಿದು ರೈತನನ್ನು ಒಕ್ಕಲಿಬ್ಬಿಸುವಾಗ ಇಂತಹ ಯೋಜನೆಗೆ ಅನುಮತಿ ನೀಡಿದ್ದು ಹೇಗೆ? ಪರಿಸರ ಉಳಿಸುವ ಕೆಲಸ ಎಲ್ಲಿದೆ? ಯಾರು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳ ಸುರಿಮಳೆ ಹಾಕಿದರು.
ಸಣ್ಣ ಶಾಲಾ ಕಟ್ಟಡ ನಿರ್ಮಿಸಲು ಪೊಲ್ಯೂಶನ್ ಬೋರ್ಡ್ ಅನುಮತಿ ನೀಡಲು ಎಷ್ಟೆಲ್ಲಾ ವಿಳಂಬ ಮಾಡುತ್ತದೆ ಆದರೆ ಇಲ್ಲಿ ಈ ಇಲಾಖೆ ಇಷ್ಟು ದೊಡ್ಡ ಪರಿಸರ ಹಾಳು ಮಾಡುವ ಯೋಜನೆಗೆ ಎನ್ ಓ ಸಿ ನೀಡಿದ್ದಾದರೂ ಹೇಗೆ?...
ಈ ಜನ ಸಂಪರ್ಕ ಸಭೆಯಲ್ಲಿ ಸರ್ಕಾರ ತೋರಿಸಿದ ಕಿರುಚಿತ್ರದಲ್ಲಿ ಶರಾವತಿ ಸ್ಟೋರೇಜ್ ಪ್ರಾಜೆಕ್ಟಿಗೆ ನೀರೆತ್ತಲು ಸೋಲಾರ್ ಮತ್ತು ವಿಂಡ್ ಮಿಲ್ ವಿದ್ಯುತ್ ಬಳಸುವುದಾಗಿ ತೋರಿಸಿದೆ ಹಾಗಿದ್ದರೆ ಅದರಿಂದಲೇ 2000 ಮೆಗಾ ವ್ಯಾಟ್ ಯುನಿಟ್ ಯಾಕೆ ಉತ್ಪಾದಿಸಬಾರದು...
ಈ ರೀತಿ ಅನೇಕ ಪ್ರಶ್ನೆಗಳನ್ನ ಅವರು ಕೇಳಿದ್ದಾರೆ.
ಅವರ ಈ ಎಲ್ಲಾ ಮಾತುಗಳು ಪಶ್ಚಿಮ ಘಟ್ಟದ ಪರಿಸರವಾದಿಗಳ ಕಣ್ಣು ತೆರೆಸುವ ಮಾತುಗಳು, ಇದನ್ನು ಮಾರುತಿ ಗುರೂಜಿ ಸಭೆಯಲ್ಲಿ ದಾಖಲಿಸಿದ್ದಾರೆ.
ಅವರ ಈ ಮಾತುಗಳ ವಿಡಿಯೋ ವೈರಲ್ಲಾಗಿದೆ ಅವರು ಮಾತು ಮುಗಿಸುವ ಮುನ್ನ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ಕೇಳಿದ ಒಂದು ಪ್ರಶ್ನೆ ಮಾರ್ಮಿಕವಾಗಿತ್ತು...
ಜಿಲ್ಲಾಧಿಕಾರಿಗಳು ಕಾರವಾರ ಪಟ್ಟಣದಲ್ಲಿ ವಾಸವಿರುವ ಅವರ ಬಂಗಲೆ ಕಾರವಾರದ ರಸ್ತೆ ಸುರಂಗದ ಮೇಲಿದೆ, ಅವರಿಗೆ ಅರ್ಥವಾದೀತು ಸುರಂಗದ ಮೇಲೆ ಪರಿಸರ ಹೇಗೆ ಇರುತ್ತದೆ ಎಂದು....
ಅಲ್ಲಿ ಯಾವುದೇ ಪಶು ಪಕ್ಷಿಗಳ ಜೀವ ಸಂಕುಲ ಈಗಿಲ್ಲ, ಇದೇ ರೀತಿ ಶರಾವತಿ ಕಣಿವೆಯಲ್ಲಿ 18000 ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಸಿಡಿಸಿದ ನಂತರ ಅಲ್ಲಿ ಯಾವುದಾದರೂ ಜೀವ ಜಂತುಗಳು ಉಳಿಯಲು ಸಾಧ್ಯವೆ?...
ಈ ರೀತಿ ಗೇರುಸೊಪ್ಪೆಯ ಬಂಗಾರ ಮಕ್ಕಿಯ ಮಾರುತಿ ಗುರೂಜಿ ಲಿಂಗನಮಕ್ಕಿಯಲ್ಲಿ ಶರಾವತಿ ನದಿಗೆ ಡ್ಯಾಮ್ ಕಟ್ಟುವ ಪೂರ್ವದಿಂದ ಈಗ ಅವರ ಊರಾದ ಗೇರುಸೊಪ್ಪೆಯ ಶರಾವತಿ ಟೇಲರೇಸ್ ತನಕ ಆಗಿರುವ ಅನಾಹುತಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಸರ್ಕಾರಕ್ಕೆ ತೀಕ್ಷ್ಣವಾಗಿ ಜನರ ವಿರೋಧದ ದಾಖಲೆಯನ್ನು ಮಾಡಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ.
ಮಾರುತಿ ಗುರೂಜಿ ಅವರು ಗೇರುಸೊಪ್ಪೆಯಲ್ಲಿ ನಡೆದ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ವಿಡಿಯೋ ಕಾಮೆಂಟ್ ಲಿಂಕ್ ನಲ್ಲಿದೆ ನೋಡಿ
Comments
Post a Comment