#ವಿಶ್ವ_ಪತ್ರಿಕಾ_ವಿತರಕರ_ದಿನ
#ಸೆಪ್ಟೆಂಬರ್_4
#ಇದಕ್ಕೆ_ಕಾರಣ_1833ರ_ಬೆಂಜಮಿನ್_ನ್ಯೂಯಾರ್ಕ್_ಸನ್_ಪತ್ರಿಕೆ.
#ನಮ್ಮೂರ_ಮೊದಲ_ಪತ್ರಿಕಾ_ವಿತರಕರು_ನಿವೃತ್ತ_ಯೋದ_ಹುಚ್ಚಾಚಾರ್
#ಈಗಿನ_ವಿತರಕ_ಕೇಶವ_ಭಟ್ಟರು.
#Newspaper #Distributer #Worldnewspaperdistrubutersday #press #pressclub
ಪ್ರತಿ ವರ್ಷ ಸೆಪ್ಟೆಂಬರ್ 4 #ವಿಶ್ವ_ಪತ್ರಿಕಾ_ವಿತರಕರ_ದಿನಾಚಾರಣೆ ಆಚರಿಸಲಾಗುತ್ತಿದೆ.
ವಾರ್ಷಿಕವಾಗಿ ಸೆಪ್ಟೆಂಬರ್ 4 ಈ ದಿನವು 1833 ರಲ್ಲಿ ಬೆಂಜಮಿನ್ ಡೇ ನೇಮಕ ಮಾಡಿದ ಮೊದಲ ಪತ್ರಿಕಾ ವಾಹಕ ಬಾರ್ನೆ ಫ್ಲಾಹೆರ್ಟಿ ಅವರನ್ನು ಗೌರವಿಸುತ್ತದೆ.
ಬೆಂಜಮಿನ್ ಡೇ ಈ ಮೂಲಕ ಮೊದಲ ಬಾರಿಗೆ ಬೀದಿಗಳಲ್ಲಿ ಪತ್ರಿಕೆ ಮಾರಾಟ ಮಾಡಲು ಸುದ್ದಿಗಾರರಿಗೆ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಬೆಂಜಮಿನ್ ಡೇ ಪತ್ರಿಕೆ ವಿತರಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದರು.
ಈ ದಿನಾಚರಣೆಗೆ ಒಂದು ಹಿನ್ನೆಲೆ ಇದೆ 3- ಸೆಪ್ಟೆಂಬರ್-1833 ರಲ್ಲಿ ಬೆಂಜಮಿನ್ ಡೇ ತಮ್ಮ ದಿ ನ್ಯೂಯಾರ್ಕ್ ಸನ್ ಪತ್ರಿಕೆಯನ್ನು ಸ್ಥಾಪಿಸಿದರು ಅದು ಕೇವಲ ಒಂದು ಪೆನ್ನಿಗೆ ಆಗ ಬೇರೆಲ್ಲ ಪತ್ರಿಕೆಗಳು ಸಾಮಾನ್ಯವಾಗಿ 5 ಅಥವ 6 ಸೆಂಟ್ ಗಳ ಬೆಲೆಗೆ ಮಾರಾಟ ಮಾಡುವ ಕಾಲ ಆಗಿತ್ತು.
ಬೆಂಜಮಿನ್ ಡೇ ತಮ್ಮ ಪತ್ರಿಕೆಯನ್ನು ಮೊದಲ ಬಾರಿಗೆ ಬೀದಿಗಳಲ್ಲಿ ಸುದ್ದಿ ಮಾರಾಟ ಮಾಡುವವರನ್ನ ಅವಲಂಬಿಸಿ ಕಾರ್ಮಿಕ ವರ್ಗಕ್ಕೆ ಸುದ್ದಿ ಪ್ರಪಂಚಕ್ಕೆ ಪ್ರವೇಶಿಸುವಂತೆ ಮಾಡುವ ಮೂಲಕ ಪತ್ರಿಕೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದರು.
ದಿ ನ್ಯೂಯಾರ್ಕ್ ಸನ್ ಪತ್ರಿಕೆ ದುಬಾರಿ ಚಂದಾದಾರಿಕೆಗಳಿಗಿಂತ ಬಿನ್ನವಾಗಿ ಪತ್ರಿಕೆಯ ಆದಾಯಕ್ಕಾಗಿ ಜಾಹಿರಾತು ಮತ್ತು ಬೀದಿಗಳಲ್ಲಿ ಸುದ್ದಿ ಪತ್ರಿಕೆ ಮಾರಾಟ ಮಾಡುವವರನ್ನು ಅವಲಂಬಿಸಿ ಆಗಿನ ಬೇರೆಲ್ಲ ದುಬಾರಿ ಪತ್ರಿಕೆಗಳ ಎದುರು ಅತಿ ಕಡಿಮೆ ಬೆಲೆಗೆ ಅಂದರೆ ಒಂದು ಪೆನ್ನಿಗೆ ಒಂದು ಪತ್ರಿಕೆ ಮಾರಾಟ ಪ್ರಾರಂಬಿಸಿದ್ದರಿಂದ ಇದಕ್ಕೆ ಪೆನ್ನಿ ಪತ್ರಿಕೆ ಎಂದು ಹೆಸರಾಯಿತು ಮತ್ತು ಮುದ್ರಣಾಲಯಕ್ಕೆ ಪೆನ್ನಿ ಪ್ರೆಸ್ ಎಂಬ ಹೆಸರು ಬಂದಿತು.
1833 ರಲ್ಲಿ, ಬೆಂಜಮಿನ್ ಡೇ ದಿ ನ್ಯೂಯಾರ್ಕ್ ಸನ್ ಪತ್ರಿಕೆಯನ್ನು ಪ್ರಾರಂಭಿಸಿತು, ದುಬಾರಿ ಚಂದಾದಾರಿಕೆಗಳಿಗಿಂತ ಆದಾಯಕ್ಕಾಗಿ ಜಾಹೀರಾತು ಮತ್ತು ಬೀದಿಗಳಲ್ಲಿ ಸುದ್ದಿ ಮಾರಾಟ ಮಾಡುವವರನ್ನು ಅವಲಂಬಿಸಿ ಮೊದಲ ಬಾರಿಗೆ ಕಾರ್ಮಿಕ ವರ್ಗಕ್ಕೆ ಸುದ್ದಿಗಳನ್ನು ಪ್ರವೇಶಿಸುವಂತೆ ಮಾಡುವ ಮೂಲಕ ಪತ್ರಿಕೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದ ಪೆನ್ನಿ ಪತ್ರಿಕೆ,ಪೆನ್ನಿ ಪ್ರೆಸ್ ಎಂದು ಕರೆಯಲ್ಪಡುವ ಈ ಹೊಸ ವ್ಯವಹಾರ ಮಾದರಿಯು ಅಗ್ಗದ ಸಾಮೂಹಿಕ-ಉತ್ಪಾದಿತ ಪತ್ರಿಕೆಗಳಿಗೆ ಅವಕಾಶ ಮಾಡಿಕೊಟ್ಟ ಗಮನಾರ್ಹ ನಾವೀನ್ಯತೆಯಾಗಿದ್ದು ಇದು ಆಧುನಿಕ ಪತ್ರಿಕೋದ್ಯಮ ಉದ್ಯಮವನ್ನು ವ್ಯಾಖ್ಯಾನಿಸಲು ಸಹಾಯ ಮಾಡಿತು.
ಚಂದಾದಾರಿಕೆಗಳನ್ನು ಅವಲಂಬಿಸಿದ್ದ ಹಿಂದಿನ ಪತ್ರಿಕೆಗಳಿಗಿಂತ ಭಿನ್ನವಾಗಿ ಡೇ ಮಾದರಿಯು ವೆಚ್ಚವನ್ನು ಕಡಿಮೆ ಇರಿಸಿಕೊಳ್ಳಲು ಜಾಹೀರಾತು ಆದಾಯವನ್ನು ಅವಲಂಬಿಸಿತ್ತು.
ದಿ ಸನ್ ಪತ್ರಿಕೆಗಳು ಸುದ್ದಿಗಾರರಿಗೆ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ವಿತರಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು ನಂತರ ಅವರು ಅವುಗಳನ್ನು ಬೀದಿಗಳಲ್ಲಿ ಮಾರಾಟ ಮಾಡಿದರು ಇದರಿಂದಾಗಿ ಅವು ಕಾರ್ಮಿಕ ವರ್ಗಕ್ಕೆ ಲಭ್ಯವಾಗುತ್ತವೆ.
ಪತ್ರಿಕೆಯನ್ನು ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮುದ್ರಿಸಲು ಡೇ ಹೊಸ ಉಗಿ-ಚಾಲಿತ ಮುದ್ರಣ ಯಂತ್ರಗಳನ್ನು ಬಳಸಿಕೊಂಡರು.
ಈ "ಪೆನ್ನಿ ಪ್ರೆಸ್" ಮಾದರಿಯು ಮೊದಲ ಬಾರಿಗೆ ಸುದ್ದಿಗಳನ್ನು ಕೈಗೆಟುಕುವಂತೆ ಮಾಡಿತು ಮತ್ತು ಇದನ್ನು ಆಧುನಿಕ ಪತ್ರಿಕೋದ್ಯಮ ಉದ್ಯಮದ ಆರಂಭವೆಂದು ಪರಿಗಣಿಸಲಾಗಿದೆ ಇದು ಅಮೇರಿಕನ್ ಪತ್ರಿಕೋದ್ಯಮದಲ್ಲಿ ಸ್ಪರ್ಧಾತ್ಮಕ ಯುಗವನ್ನು ಸೃಷ್ಟಿಸಿತು.
ಇದೇ ಮಾದರಿಯನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಅಳವಡಿಸಿಕೊಂಡು ಯಶಸ್ವಿಯಾದವರು ವಿಜಯ ಸಂಕೇಶ್ವರ್ ಅವರ ವಿಜಯ ಕರ್ನಾಟಕ ಮತ್ತು ವಿಜಯವಾಣಿ ಪತ್ರಿಕೆಗಳು ಇಲ್ಲಿ ನೆನಪಿಸಿಕೊಳ್ಳಬಹುದು.
ವಿಶ್ವ ಪತ್ರಿಕಾ ವಿತರಕರ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತದೆ ಈ ದಿನವು ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಮೂಲಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡುವ ಪತ್ರಿಕಾ ವಿತರಕರ ಕೆಲಸವನ್ನು ಗುರುತಿಸಿ ಅವರ ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಮೀಸಲಾಗಿದೆ.
ಈ ದಿನದಂದು, ವಿತರಕರ ಕಲ್ಯಾಣಕ್ಕಾಗಿ ಬೇಡಿಕೆಗಳನ್ನು ಮುಂದಿಡಲಾಗುತ್ತದೆ ಮತ್ತು ಸಂಘಟನೆಗಳು ಸಭೆಗಳನ್ನು ನಡೆಸುತ್ತವೆ.
ನಮ್ಮೂರಲ್ಲಿ 60 ರ ದಶಕದಲ್ಲಿ ಪತ್ರಿಕಾ ವಿತರಕರಾದವರು ಬಾಂಗ್ಲಾ ಯುದ್ಧದಲ್ಲಿ ಕಾಲು ಕಳೆದುಕೊಂಡಿದ್ದ ಭಾರತೀಯ ಸೈನ್ಯದಲ್ಲಿ ಯೋದರಾಗಿದ್ದ #ಹುಚ್ಚಾಚಾರರರು ಇವರೇ ನಮ್ಮ ಊರು ಆನಂದಪುರಂನ ಮೊದಲ ಪತ್ರಿಕಾ ವಿತರಕರು.
ನಂತರ ದೀರ್ಘಕಾಲದಿಂದ ಪತ್ರಿಕಾ ವಿತರಕರಾಗಿರುವವರು ಕೇಶವ ಭಟ್ಟರು.
1981ರಲ್ಲಿ ಆನಂದಪುರದಿಂದ ಸಾಗರಕ್ಕೆ ನಾನು ಸಂಜಯ್ ಮೆಮೋರಿಯಲ್ ಡಿಪ್ಲೋಮ ಕಾಲೇಜಿಗೆ ಪ್ರತಿ ದಿನ ಬೆಳಿಗ್ಗೆ 5.45ಕ್ಕೆ ಶಿವಮೊಗ್ಗದಿಂದ ಬರುತ್ತಿದ್ದ ಕುಮುಟಾಕ್ಕೆ ಹೋಗುವ ಗಜಾನನ ಬಸ್ಸಿನಲ್ಲಿ (ನಾರಾಯಣಪ್ಪ ಎಂಬ ಸೂಪರ್ ಪಾಸ್ಟ್ ಡ್ರೈವರ್ ) ಹೋಗುತ್ತಿದ್ದೆ ಆಗ ಇನ್ನೂ ಶಾಲೆಗೆ ಸೇರದ ಪುಟ್ಟ ಬಾಲಕ ನಿದ್ದೆ ಕಣ್ಣಿನಲ್ಲೇ ಆನಂದಪುರ ಬಸ್ ಸ್ಟಾಂಡ್ ನಲ್ಲಿ ಪೇಪರ್ ಪೇಪರ್ ಅಂತ ಕೂಗುತ್ತಾ ನಿತ್ಯ ಪತ್ರಿಕೆ ಮಾರುವುದು ನೋಡಿ ಕರಳು ಹಿಚುಕಿದಂತೆ ಸಂಕಟ ಆಗುತ್ತಿತ್ತು.
ಆಗಿನಿಂದ ಅಂದರೆ ಸುಮಾರು 45 ವರ್ಷದ ಮೇಲೂ ಕೇಶವ ಭಟ್ಟರು ಇವತ್ತೂ ಆನಂದಪುರರನಲ್ಲಿ ಮನೆ ಮನೆಗೆ ಸೂಯೋ೯ದಯದ ಮುಂಚೆ ತಪ್ಪದೇ ಪತ್ರಿಕೆ ತಲುಪಿಸುವ ಪೇಪರ್ ಏಜೆಂಟ್ ಮತ್ತು #ವಿಜಯವಾಣಿ ಪತ್ರಿಕೆಯ ಆನಂದಪುರದ ಪತ್ರಿಕಾ ವರದಿಗಾರ ಕೂಡ ಹೌದು.
ತಂದೆ ಸಣ್ಣ ವಯಸ್ಸಲ್ಲೇ ತೀರಿ ಹೋಗಿದ್ದು,ತಾಯಿಗೆ ಸಿಗಬೇಕಾದ ಆಸ್ತಿ ಸಿಗದೇ ಹೋದದ್ದು, ಯಾವ ಜಾತಿ ಆದರೇನು ಬಡತನ ಬಂದರೆ ಎಲ್ಲರೂ ದೂರ ಮಾಡುವಂತೆ ಇವರನ್ನೂ ಎಲ್ಲರೂ ದೂರ ಮಾಡಿದರು,ಇವರ ಹವ್ಯಕ ಜಾತಿ ಬಾಂದವರ್ಯಾರು ಈ ಕುಟುಂಬಕ್ಕೆ ಸಹಾಯ ಮಾಡಲಿಲ್ಲ.
ಕೇಶವ ಭಟ್ಟರು ಬೆಳಿಗ್ಗೆ ಪೇಪರ್ ಹಾಕುವುದು, ಬಸ್ಸುಗಳಲ್ಲಿ ಪೇಪರ್, ಸೋಡಾ,ಬಾಳೆಹಣ್ಣು, ಕಡಲೆಕಾಯಿ ಮಾರುತ್ತಾ ಶಾಲೆಗೆ ಹೋಗಿ ವಿದ್ಯಾಬ್ಯಾಸವೂ ಮಾಡುತ್ತಾ ಪೀಯುಸಿ ತೇಗ೯ಡೆ ಆಗಿ ಪದವಿ ಕಾಲೇಜ್ ಗೆ ಸೇರಿ ಅದ೯ಕ್ಕೆ ಬಿಟ್ಟು ಖಾಸಾಗಿ ಬಸ್ ಏಜೆಂಟ್ ಆಗಿ ಇಡೀ ಕುಟುಂಬ ಸಲುಹಿದ ಶ್ರಮಜೀವಿ ಇವರು.
ಪ್ರತಿ ವರ್ಷ ತಪ್ಪದೆ ಶಬರಿಮಲೆಗೆ ಅಯ್ಯಪ್ಪ ವೃತಾದಾರಿ ಆಗಿ ಹೋಗಿ ಬರುತ್ತಾರೆ ಆಗ ನಾನು ಇವರು ಹಾಕುವ ಪತ್ರಿಕೆಯ ಬಿಲ್ ಬಾಬ್ತು ವಾಷಿ೯ಕ 5000 ಕೊಡುತ್ತಿದ್ದೆಇದು ಸುಮಾರು 15 ವರ್ಷದಿಂದ ನಡೆದು ಕೊಂಡು ಬಂದಿತ್ತು ಈಗ ನನ್ನ ಈ ಕ್ರಮ ನಿಂತಿದೆ.
ಪ್ರತಿ ದಿನ ಬೆಳಿಗ್ಗೆ 3 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ದೇವರ ಪೂಜೆ ಮಾಡಿ ಪತ್ರಿಕೆ ಹಂಚಲು ಹೋಗುವ ಕೇಶವ ಭಟ್ಟರ ತಪ್ಪದ ಕಾಯಕ ಮೆಚ್ಚುವಂತದ್ದೇ.
ಶೃಂಗೇಶ್ ಸಂಪಾದಕತ್ವದ #ಜನಹೋರಾಟ ಪತ್ರಿಕೆ ಕೆಲ ವರ್ಷ ಇವರು ಹಾಕುತ್ತಿದ್ದರು, ಆಗ ಒಮ್ಮೆ ಸಂಪಾದಕರಾದ ಶೃಂಗೇಶ್ ಹೇಳುತ್ತಿದ್ದರು ಪತ್ರಿಕೆಯ ಹಣ ಪ್ರತಿ ತಿಂಗಳೂ ನಿದಿ೯ಷ್ಟ ದಿನ ತಪ್ಪದೇ ತಲುಪಿಸುವ ಪತ್ರಿಕಾ ಏಜೆಂಟ್ ಇವರೊಬ್ಬರೆ ಅಂತ.
ಪ್ರತಿಯೊಂದು ಊರಲ್ಲೂ ಇಂತವರು ಇರುತ್ತಾರೆ, ನಮ್ಮ ಮದ್ಯೆ ಇದ್ದರೂ ನಾವು ಅವರನ್ನ ಸರಿಯಾಗಿ ಗಮನಿಸಿರುವುದಿಲ್ಲ.
#ವಿಶ್ವ_ಪತ್ರಿಕಾ_ವಿತರಕರ_ದಿನವಾದ ಇವತ್ತು ಶ್ರಮ ಜೀವಿ ಪತ್ರಿಕಾ ವಿತರಕ ಕೇಶವ ಭಟ್ಟರಿಗೆ ಶುಭ ಹಾರೈಸಲು ಅವರ ಸೆಲ್ ನಂಬರ್ ಮತ್ತು ನಮ್ಮ ಆನಂದಪುರಂನ ಮೊದಲ ಪತ್ರಿಕಾ ವಿತರಕರಾಗಿದ್ದ ಭಾರತೀಯ ಯೋದರಾಗಿದ್ದ ಹುಚ್ಚಾಚಾರ್ ಮಾಹಿತಿ ಬ್ಲಾಗ್ ಲೇಖನ ಕಾಮೆಂಟ್ ನಲ್ಲಿದೆ.
Comments
Post a Comment