#ಇನ್ನೂರ_ಇಪ್ಪತ್ತೈದು_ವರ್ಷದ_ಹಿಂದೆ_ಶಿವಮೊಗ್ಗ.
#ಶಿವಮೊಗ್ಗ_1805ರಲ್ಲಿ_ಹೀಗಿತ್ತು
#ಮ್ಯೂಸಿಯಂ_ಆಫ್_ಲಂಡನ್_ನಲ್ಲಿರುವ_ತೈಲಚಿತ್ರ
#ಆಗ_ತುಂಗಾ_ನದಿ_ದಾಟಲು_ಸೇತುವೆ_ಇರಲಿಲ್ಲ
#Shivamogga #Tungariver #Museaumoflondon #Colenal #ColinMakanje
#ArtofShivamogga
ಇನ್ನೂರಾ ಇಪ್ಪತ್ತ್ಯೆದು ವರ್ಷದ ಹಿಂದೆ ನಮ್ಮ ಜಿಲ್ಲಾ ಕೇಂದ್ರ ಹೇಗಿತ್ತು?...
ಹೀಗೆ ಇತ್ತು ಎನ್ನುವುದಕ್ಕೆ ಸಾಕ್ಷಿ ಆಗಿ ಶಿವಮೊಗ್ಗದ ತೈಲ ಚಿತ್ರ ಒಂದು ಮ್ಯೂಸಿಯಂ ಆಫ್ ಲಂಡನ್ ನಲ್ಲಿದೆ.
ಆಗ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಿರಲಿಲ್ಲ ಈ ಚಿತ್ರ ಬರೆದ ಕಾಲ 1805.
ಶಿವಮೊಗ್ಗದ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಿರುವುದು 1872 ರಲ್ಲಿ.
ತುಂಗಾ ನದಿ ದಾಟಲು ಆಗ ಹರಿಗೋಲು ಮಾತ್ರ ಸಂಪರ್ಕ ಸಾಧನ ಆದ್ದರಿಂದ ಹರಿಗೋಲನ್ನು ಈ ಚಿತ್ರದಲ್ಲಿ ಬರೆದಿದ್ದಾರೆ.
ಕೊರಲಹಳ್ಳಿಯಿಂದ ತುಂಗಾ ನದಿ ದಾಟಿ ಶಿವಮೊಗ್ಗ ತಲುಪಲು ಈ ಹರಿಗೋಲೇ ಸಂಪರ್ಕ ಸಾಧನ ಆಗಿತ್ತು ಆ ಕಾಲದಲ್ಲಿ.
15 -ಆಗಸ್ಟ್-1805 ರಲ್ಲಿ ಬಿದನೂರು ನಗರದ ರಾಜರಿಂದ ಈ ಹರಿಗೋಲು ನೀಡಲ್ಪಟ್ಟಿದ್ದಾಗಿ ದಾಖಲಿಸಿದ್ದಾರೆ.
1763 ರಿಂದ ಕೆಳದಿ ಅರಸರ ಆಡಳಿತ ಕೊನೆಯಾಗಿ ಹೈದರಾಲಿ ಆಡಳಿತ ಪ್ರಾರಂಭ ಆಗುತ್ತದೆ.
1793 ರಿಂದ ಟಿಪ್ಪು ಆಡಳಿತ ಬ್ರಿಟೀಷರ ಕೈವಶ ಆಗಿ ಬ್ರಿಟೀಷರ ಆಡಳಿತ ಪ್ರಾರಂಭ ಆಗುತ್ತದೆ ಅಂದರೆ 1805 ಬಿದನೂರು ಬ್ರಿಟೀಶ್ ಆಡಳಿತಕ್ಕೆ ಒಳಪಟ್ಟಿತ್ತು.
Comments
Post a Comment