#ಯೋಮಕೇಶಪ್ಪ_ಗೌಡರು
#ಅವರೊಡನೆ_ಮಾಡಿದ_ಆಪ್ತ_ಮಾತುಕತೆ
#ನನ್ನ_ತಂದೆಯ_ಆಪ್ತ_ಗೆಳೆಯರು
#ತೊಂಬತ್ತನೇ_ವರ್ಷದಲ್ಲಿ_ಇಹಲೋಕ_ತ್ಯಜಿಸಿದ್ದಾರೆ.
#Yomakeshappagowdaru #Basavanakoppa #Hireharaka
ನನ್ನ ತಂದೆಯ ಆಪ್ತ ಮಿತ್ರರಾದ ಬಸವನಹೊಂಡದ ಯೋಮಕೇಶಪ್ಪ ಗೌಡರು ಸಾಗರ ಮತ್ತು ಶಿಕಾರಿಪುರ ಅಂಚಿನ ಹಿರೇಹಾರಕ (ಗೌತಮಪುರ ಗ್ರಾಮ ಪಂಚಾಯಿತಿಯ ಬೈರಾಪುರದ ಹತ್ತಿರ) ದ ವಾಸಿಗಳು.
60 ರ ದಶಕದಲ್ಲೇ ಆನಂದಪುರಂನ ಲಾರಿ ಮಾಲೀಕರು ಅವರು, ಆಗ ಆನಂದಪುರಂನಲ್ಲಿದ್ದ ಲಾರಿ ಮಾಲೀಕರು ಮೂರೇ ಜನ ಅವರಲ್ಲಿ ಗೌಡರೂ ಒಬ್ಬರು.
ನಮ್ಮ ತಂದೆಯ ಆಪ್ತ ಗೆಳೆಯರು ಹಾಗೂ ನಮ್ಮ ಜೀವಮಾನ ಪೂರ್ತಿ ಅವರನ್ನ ಪೂಜನೀಯವಾಗಿ ಗೌರವಿಸುವ ಯೋಮಕೇಶಪ್ಪ ಗೌಡರದ್ದು ವರ್ಣಮಯ ಜೀವನ.
ರಿಪ್ಪನ್ ಪೇಟೆ ಮೂಲದ 15 ದಿನದ ಮಗು ಮೂಲ ನಕ್ಷತ್ರ ಅಂತ ಬಸವನಕೊಪ್ಪದ ಸಜ್ಜನರಾದ ಚನ್ನವೀರಪ್ಪ ಗೌಡರ ತಾಯಿ ಸತ್ಯಮ್ಮನಿಗೆ ಸಾಕು ಮಗನಾಗಿ ಚನ್ನವೀರಪ್ಪಗೌಡರಿಗೆ ತಮ್ಮನಾಗಿ ಬಂದವರು.
Comments
Post a Comment