#ಅನ್ನಬಾಗ್ಯ_ಅಕ್ಕಿ_ವರ್ಸಸ್_ಸೋನಾಮಸೂರಿ_ಅಕ್ಕಿ
#ವಿಬಿನ್ನ_ಮನಸ್ಥಿತಿಯ_ಅಂತಸ್ಥಿನ_ಸ್ಥಾನಮಾನ
#ಅನ್ನಭಾಗ್ಯದ_ಅಕ್ಕಿಯಿಂದ_ಜನ_ಸೋಮಾರಿಗಳಾಗುತ್ತಾರೆ_ಎನ್ನುವವರೂ_ಇದ್ದಾರೆ
#ಸೊಸೈಟಿ_ಅಕ್ಕಿ_ತಿನ್ನುವುದಿಲ್ಲ_ಎನ್ನುವುದು_ದೊಡ್ಡಸ್ಥಿಕೆ.
#Rice #Sonamasoori #Annabhagya
ನುಚ್ಚಕ್ಕಿ - ನೆಲ್ಲಕ್ಕಿ - ಮುಗ್ಗುಲಕ್ಕಿಗಳಿಗೆಲ್ಲ ಒಂದು ಕಾಲದಲ್ಲಿ ಬೇದವಿರಲಿಲ್ಲ ಅಂತಹ ಎಲ್ಲಾ ಅನ್ನ ತಿಂದೇ ದೊಡ್ಡವರಾಗಿದ್ದು ನಾನು ಮರೆತಿಲ್ಲ.
#ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ ಎಂಬ ಸರ್ವಜ್ಞ ವಚನ ಜನ ಮನದಲ್ಲಿತ್ತು.
ಈಗ ಮೇಲಿನ ಅಕ್ಕಿ ಬಿಡಿ, ಸೊಸೈಟಿ ಅಕ್ಕಿ ಎಂಬ ಅನ್ವರ್ಥ ನಾಮದ ಅನ್ನ ಭಾಗ್ಯದ ಅಕ್ಕಿ ಅಂದರೆ ಮೂಗು ಮುರಿಯುವ ಜನರ ಕಾಲ ಇದಾಗಿದೆ.
ಅನ್ನಭಾಗ್ಯದಿಂದ ಸೋಮಾರಿಗಳು ಸೃಷ್ಟಿ ಆಗುತ್ತಾರೆ ಅಂತ ಒಬ್ಬ ಮಠದ ಸ್ವಾಮಿಯ ಹೇಳಿಕೆ ನೋಡಿದೆ ಆತ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಪಡೆಯುವ ಹೈಟೆಕ್ ಬಿಪಿಎಲ್ ಕಾರ್ಡ್ ದಾರ.
ದಿನಕ್ಕೆ 150 ರೂಪಾಯಿಗಿಂತ ಕಡಿಮೆ ಆದಾಯದವರು ಬಡತನ ರೇಖೆಗಿಂತ ಕೆಳಗಿನವರೆಂಬ ಮಾನದಂಡದಲ್ಲಿ ಭಾರತದಲ್ಲಿ ಶೇಕಡಾ 12.4% ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪಡಿತರ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿದೆ ಇದಕ್ಕಾಗಿ ಆ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ಗಳನ್ನು ವಿತರಿಸುತ್ತಾರೆ.
#ಅನ್ನ_ಬಾಗ್ಯ ಯೋಜನೆ 15-6-2013ರಲ್ಲಿ ಜಾರಿಗೆ ತಂದಿದ್ದು ಸಿದ್ದರಾಮಯ್ಯನವರು,3 ಕ್ಕಿಂತ ಹೆಚ್ಚಿನ ಸದಸ್ಯರಿರುವ ಬಿಪಿಎಲ್ ಕುಟುಂಬಕ್ಕೆ ಮಾಸಿಕ 30 kg ಅಕ್ಕಿ ವಿತರಣೆ,ಅದು ಒಂದು ಕಿಲೋ ಅಕ್ಕಿಗೆ ಒಂದು ರೂಪಾಯಿಯಂತೆ.
ಅದಕ್ಕೂ ಮೊದಲು ಒಂದು BPL ಕುಟುಂಬಕ್ಕೆ 4 kg ಅಕ್ಕಿ ಮತ್ತು 1ಕೆಜಿ ಗೋದಿ ಮಾತ್ರ ವಿತರಣೆ ಆಗುತ್ತಿತ್ತು.
ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಹೆಣ್ಣು ಮಕ್ಕಳು ಪ್ರತಿ ತಿಂಗಳು ಅವರಿಗೆ ಸಿಗುವ ರೇಷನ್ ಅಕ್ಕಿ ಮಾರಾಟ ಮಾಡಿ ಸೋನಾ ಮಸೂರಿ ಸ್ಟೀಮ್ ಅಕ್ಕಿ ಖರೀದಿಸುತ್ತಾರೆ.
ಅದೂ ಕಿಲೋಗೆ 10 ರೂ ನಂತೆ ಮಾರಾಟ ಮಾಡಿ 40 ರೂ ನ ಸೋನಾ ಮಸ್ಸೂರಿ ಅಕ್ಕಿ ಖರೀದಿಸುತ್ತಾರಂತೆ !?. . .
ಸಕಾ೯ರ ಪಡಿತರ ಅಕ್ಕಿಯಾಗಿ ನೀಡಲು ಅಕ್ಕಿಯನ್ನು 30 ರೂ ನಂತೆ ಖರೀದಿಸಿ ಅದನ್ನು ಈ ಯೋಜನೆಗೆ ಹೆಚ್ಚು ಕಡಿಮೆ ಉಚಿತವಾಗಿ, ಸಹಾಯ ಧನದಿಂದ ನೀಡುವ ಈ ಯೋಜನೆ ದಾರಿ ತಪ್ಪಿತಾ? ಅಥವ ಅಕ್ಕಿ ಗುಣಮಟ್ಟ ಇಲ್ಲವಾ? ಎಂಬ ಪ್ರಶ್ನೆ ಮೂಡುತ್ತದೆ.
ಪಡಿತರ ಅಕ್ಕಿ ಗುಣ ಮಟ್ಟ ಸರಿ ಇದೆ ಆದರೆ ಎಲ್ಲರಿಗೂ ಈಗ ಅಂತಸ್ತಿನ ಘನತೆ ಎಂಬ ಭ್ರಮೆಯಲ್ಲಿದ್ದಾರೆ.
ನಾನು ಈ ಅಕ್ಕಿ ಅವರಿಂದ ತರಿಸಿ ನೋಡಿದೆ ಅಕ್ಕಿ ಸ್ವಚ್ಚವಾಗಿತ್ತು, ಅನ್ನ ಮಾಡಿ ಊಟ ಮಾಡಿದೆ ನಂಬರ್ ಒನ್ - ಸ್ವಲ್ಪ ಗಾತ್ರ ದೊಡ್ಡದು ಅಷ್ಟೆ.
ಯಾಕೆ ಸೊಸೈಟಿ ಅಕ್ಕಿ ನೀವು ಬಳಸುವುದಿಲ್ಲ? ಅಂತ ಕೇಳಿದರೆ ಅವರ ಉತ್ತರ.....
"ನಾವು ಸೊಸೈಟಿ ಅಕ್ಕಿ ಇಡ್ಲಿ, ದೋಸೆಗೆ ಮಾತ್ರ ಬಳಸುತ್ತೇವೆ", "ಸೊಸೈಟಿ ಅಕ್ಕಿ ಊಟ ಮಾಡಿದರೆ ಹೊಟ್ಟೆ ನೋವು ಬರುತ್ತೆ",
"ನನ್ನ ಮಗ ಸೊಸೈಟಿ ಅಕ್ಕಿ ಅನ್ನ ತಿನ್ನುವುದಿಲ್ಲ"
ಹೀಗೆ ನೂರಾರು ಕಾರಣಗಳು.
ಇದರ ಜೊತೆ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಇದೆ ಎಂಬ ಸುದ್ದಿ ಪ್ರಚಾರದ ಅಪವಾದ ಬೇರೆ ಆದರೆ ಇದು ಪೌಷ್ಟಿಕಾಂಶದ ಮಿಶ್ರಣದ (Fortified Rice) ಅಕ್ಕಿ ಎಂಬುದು ವಾಸ್ತವ.
ಈ ರೀತಿಯ ಅಪಪ್ರಚಾರಗಳು ಇತ್ಯಾದಿಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಉಚಿತ ಪಡಿತರ ವಿರೋಧಿಸುವ ಹೊಟ್ಟೆ ತುಂಬಿದವರ ಮನಸ್ಥಿತಿ ಆಗಿದೆ.
ಅಂತವರು ಸರ್ಕಾರದ ಸಹಾಯ ಧನ ಇತ್ಯಾದಿಗೆ ವಿರೋಧಿಸದೆ ಪಡೆಯುತ್ತಾರೆ ಆದರೆ ಬಡವರ ಅನ್ನದ ತಟ್ಟಿಗೆ ಕಣ್ಣು ಹಾಕುತ್ತಿದ್ದಾರೆ.
ಇವರ ತಾಳಕ್ಕೆ ತಕ್ಕಂತೆ ಅರ್ಹ ಫಲಾನುಭವಿಗಳಾದ ಬಿಪಿಲ್ ಕುಟುಂಬಗಳು ಕೂಡ ಪಡಿತರ ಅಕ್ಕಿ ತಿನ್ನುವುದು ತಮ್ಮ ಅಂತಸ್ತಿಗೆ ತಕ್ಕದಲ್ಲ ಎಂಬಂತೆ ಮಾತಾಡುತ್ತಿರುವುದು ವಿಪರ್ಯಾಸ.
ಇದು ಪಾಲ್ಸ್ ಪ್ರಿಸ್ಟೇಜ್ ನ ಒಂದು ರೂಪವೇ ಆಗಿದೆ, ಹಸಿದ ಹಸಿವಿನ ಹೊಟ್ಟೆಯ,ಬಡತನ ರೇಖೆ ಕೆಳಗಿನ (BPL) ಕುಟುಂಬಕ್ಕೆ ಈ ಅನ್ನ ಭಾಗ್ಯ ಯೋಜನೆ ಅಕ್ಕಿ ವರದಾನ ಆಗಿದೆ.
ಎಲ್ಲಾ ಸರ್ಕಾರಗಳು ಬಡವರ ಕಲ್ಯಾಣದ ಕೆಲಸ ಮಾಡಲೇ ಬೇಕು ಅದನ್ನು ವಿರೋಧಿಸುವುದು ಕೆಟ್ಟ ಮನಸ್ಥಿತಿಯ ಪ್ರದಶ೯ನ ಆಗಿದೆ.
Comments
Post a Comment