#ಪ್ರಖ್ಯಾತ_ಗಾಯಕಿ_ಕಸ್ತೂರಿಶಂಕರ್.
#ಹನ್ನೊಂದು_ವರ್ಷದ_ಹಿಂದೆ_ನಮ್ಮ_ಅತಿಥಿ
#ಇವರು_ಹಾಡಿದ_ಬಿಳಿಹೆಂಡ್ತಿ_ಸಿನಿಮಾದ_ರಂಗೇನ_ಹಳ್ಳಿಯಾಗೆ_ನನಗೆ_ಇಷ್ಟದ_ಹಾಡು.
#Kannadacinema #Singer #Kasturishankar #DrRajkunar #Hombujalodge #Anandapuram
ದಿನಾಂಕ 1 - ಸೆಪ್ಟೆಂಬರ್-2014 ರಂದು ಅಂದರೆ 11 ವರ್ಷದ ಹಿಂದೆ ಅವರ ಪತಿ ಶಂಕರ್ ಜೊತೆ ನಮ್ಮ ಅತಿಥಿಗಳಾಗಿದ್ದರು.
ನಮ್ಮೂರಿನ ಪಟೇಲರಾಗಿದ್ದ ಶಿವಗಂಗೆ ಶಾಂತಪ್ಪ ಗೌಡರ ಸಂಬಂಧಿಗಳು ಇವರು, ಶಿವಗಂಗೆ ಕುಟುಂಬಕ್ಕೆ ಸಂಬಂಧ ಪಟ್ಟ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದರು.
ಕಸ್ತೂರಿ ಶಂಕರ್ ಕನ್ನಡದ ಪ್ರಮುಖ ಗಾಯಕಿಯರಲ್ಲಿ ಒಬ್ಬರು, ಕನ್ನಡ ನೆಲದ ಪ್ರತಿಭೆಗಳಾದ ಬಿ.ಕೆ.ಸುಮಿತ್ರ, ಬೆಂಗಳೂರು ಲತಾ ನಂತರ ಬಂದ ಕನ್ನಡದ ಗಾಯಕಿ ಕಸ್ತೂರಿ ಶಂಕರ್.
ಬೆಟ್ಟದ ಗೌರಿ ಚಿತ್ರದಿಂದ ಪರಿಚಯವಾದರು. ಭಾಗ್ಯಜ್ಯೋತಿ ಚಿತ್ರದ "ಗುಡಿ ಸೇರದ ಮುಡೆಯೇರದ" ಹಾಡು ಇವರಿಗೆ ಜನಪ್ರಿಯತೆಯನ್ನು ತಂದಿತು.
ಶಾಸ್ತ್ರೀಯ ಸಂಗೀತ, ವಚನ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಇವರು ಕೆಲಸ ಮಾಡಿದ್ದಾರೆ ಇವರು ಬೆಂಗಳೂರಿನಲ್ಲಿ "ನಮನ"ದಲ್ಲಿ ವಾಸವಾಗಿದ್ದಾರೆ.
ಕನ್ನಡದ ಜನಪ್ರಿಯ ಗಾಯಕಿ ಕಸ್ತೂರಿ ಶಂಕರ್, 1950 -ನವೆಂಬರ್ -1ರಂದು ಮೈಸೂರಿನಲ್ಲಿ ಜಿ.ಸಿ. ಶಂಕರಪ್ಪ, ತಾಯಿ ಗಿರಿಜದಂಪತಿಗಳ ಪ್ರೀತಿಯ ಪುತ್ರಿಯಾಗಿ ಜನಿಸಿದರು.
ತಂದೆ ಸ್ವಾತಂತ್ರ್ಯ ಹೋರಾಟಗಾರ ಉತ್ತಮ ಬರಹಗಾರರೂ ಅಪ್ಪಟ ಗಾಂಧಿವಾದಿಯೂ ಆಗಿದ್ದರು.
'ಕಸ್ತುರ್ ಬಾ ಗಾಂಧಿ 'ಯವರ ನೆನಪಿನಲ್ಲಿ ಮಗಳಿಗೆ ಕಸ್ತೂರಿ ಎಂದು ಹೆಸರಿಟ್ಟರು.
ಕಸ್ತೂರಿಯವರು ಬಾಲ್ಯದಲ್ಲೇ ತಂದೆಯವರು ರಚಿಸಿದ ಭಕ್ತಿಗೀತೆಗಳು, ದಾಸರ ಕೀರ್ತನೆಗಳನ್ನು ಸ್ಪಷ್ಟವಾಗಿ ಬಾಯ್ತುಂಬಾ ಮಧುರವಾಗಿ ಹಾಡುತ್ತಿದ್ದರು.
ರಾಷ್ಟ್ರಕವಿ ಡಾ. ಜಿ.ಎಸ್.ಎಸ್. ರಚಿತ ಕವಿತೆಯ ಸಾಲುಗಳು ಕಸ್ತೂರಿ ಶಂಕರ್ ರವರ ಮಧುರ ಧ್ವನಿಯಲ್ಲಿ ಬಾನಿನಿಂದ ಉದುರುವ ಹನಿಗಳಂತೆ ಭಾಸವಾಗುತ್ತವೆ.
'ಆವಾಹನೆ' ಎಂಬ ಸುಂದರ ಕವಿತೆಯ ಸಾಲುಗಳನ್ನು ಕಸ್ತೂರಿ ಶಂಕರ್ ಹಾಡುವಾಗ ತಮ್ಮ ಭಾವನೆಗಳನ್ನು ಪದಪುಂಜದಲ್ಲಿ ತುಂಬಿ ರಸವನ್ನು ಹರಿಸುತ್ತಾ ಸಾಗುತ್ತಾರೆ.
ನವೋದಯದ ಕಿರಣ ಲೀಲೆ ಕನ್ನಡದೀ ನೆಲದ ಮೇಲೆ ಶುಭೋದಯವ ತೆರೆದಿದೆ - ಚಿಲುಮೆ ಚಿಮ್ಮುವುವೆದೆಗಳಲ್ಲಿ -ಶೃತಿ ಸುಖ ನಿನದೆ ಈ ಕಂಗಳೇನೋ ನನ್ನವು, ಗೀತೆಗಳು, ಕಸ್ತೂರಿ ಶಂಕರ್ ರವರ ಮರೆಯಲಾರದ ಹಾಡುಗಳು.
ಅವರಿಗೆ ಕನ್ನಡ ಸುಗಮ ಸಂಗೀತದ ಬಗ್ಗೆ ಒಲವು ಮೂಡಿದ್ದು, ಕಾಳಿಂಗರಾಯರ ಗೀತೆಗಳಿಂದ ಆದರೆ ಅನಂತ ಸ್ವಾಮಿಯವರು ಕನ್ನಡದಲ್ಲಿ 'ಸುಗಮ ಸಂಗೀತ' ಹಾಡಲು ಪ್ರೇರಣೆಯಾದರು.
ಕೆಳಗಿನ ಹಾಡುಗಳು ಕಸ್ತೂರಿ ಶಂಕರ್ ರವರ ಚಿತ್ರಗೀತೆಗಳ ಹಾಡುಗಾರಿಕೆಯ ಜೀವನದ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಿದವು.
ರಂಗೇನ ಹಳ್ಳಿ'ಯಾಗೆ
ಬಿಳಿ ಹೆಂಡ್ತಿ ಚಿತ್ರದ ಯಾವ ತಾಯಿಯು ಹಡೆದ ಮಗಳಾದರೇನು,
ಓ ದ್ಯಾವ್ರೆ
ಡಾ. ರಾಜ್ ಕುಮಾರ್ ಜೊತೆ ಹಾಡಿದ ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ,
ಇದು ರಾಮ ಮಂದಿರ ನೀ ರಾಮ ಚಂದಿರ,
ಭಾಗ್ಯ ಜ್ಯೋತಿ ಚಿತ್ರದ 'ಗುಡಿಯೇರದ ಮುಡಿ ಸೇರದ ಹೂವು', ಗೀತೆಗಳು ಅವಿಸ್ಮರಣೀಯ.
Comments
Post a Comment