#ಉಪ್ಪಾಗೆ_ತುಪ್ಪಾ
#ಯಾರಿಗೆಲ್ಲ_ಗೊತ್ತು.
#ಸಸ್ಯದಿಂದಲೂ_ತುಪ್ಪ
#ಇದು_ಪಶ್ಚಿಮಘಟ್ಟದಲ್ಲಿ_ಮಾತ್ರ
#ಪ್ರಾಣಿಜನ್ಯ_ತುಪ್ಪ_ಸಸ್ಯಜನ್ಯ_ತುಪ್ಪ_ಬೇರೆ
#ಉಪ್ಪಾಗೆ_ಹಣ್ಣಿನ_ಸಿಪ್ಪೆ_ಸಂಸ್ಕರಿಸಿ_ಮಂದಸಾರ_ಹುಳಿ_ಕೂಡ_ತಯಾರಿಸುತ್ತಾರೆ.
#Vegans #Uppagetuppa #Westernghat #Malenadu
ದೇಶಿ ವಸ್ತುಗಳನ್ನ ಮಾರಾಟ ಮಾಡುವ ಒಂದು ಗುಂಪಿನಲ್ಲಿ ನನ್ನ ಪೋಸ್ಟ್ ಹಾಕಿದ್ದೆ "ಉಪ್ಪಾಗೆ ತುಪ್ಪ ಸಿಗುತ್ತಾ"?... ಅಂತ.
ಇದಕ್ಕೆ ಬಂದ ಕಾಮೆಂಟ್ ನೂರಾರು ಅದರಲ್ಲಿ ಬಂದ ಪ್ರಶ್ನೆಗಳು "ಇದೆಂತ ತುಪ್ಪಾ ? ಎಮ್ಮೆ ತುಪ್ಪಾನಾ? ದನದ ತುಪ್ಪಾನಾ?" ಅಂತ.
ದೇಶಿ ತುಪ್ಪಾ ಮತ್ತು ಮಲೆನಾಡು ಗಿಡ್ದ ತುಪ್ಪಾ ಕೇಳಿದ್ದೇವೆ ಆದರೆ ಇದಾವುದು ಉಪ್ಪಾಗೆ ತುಪ್ಪ ಅಂತೆಲ್ಲ.
ಪಶ್ಚಿಮ ಘಟ್ಟದಲ್ಲಿನ ಉಪ್ಪಾಗೆ ಮರದಲ್ಲಿನ ಹಣ್ಣಿನಲ್ಲಿರುವ ಬೀಜ ತೊಳೆದು ಒಣಸಿ ನಂತರ ಕಲ್ಲಿನಲ್ಲಿ ಕಡೆದು ನೀರಿನ ಜೊತೆ ಕುದಿಸಿದಾಗ ಬರುವ ಕೊಬ್ಬು ಶೇಖರಿಸಿ ಪುನಃ ಕುದಿಸಿ ಅವರಲ್ಲಿನ ನೀರಿನಂಶ ತೆಗೆದ ಮೇಲೆ ಉಳಿಯುವುದೇ ಉಪ್ಪಾಗೆ ತುಪ್ಪ.
ಇದನ್ನು ಕಾಯಿ ಹೊಳಿಗೆ ಜೊತೆ ತಿಂದರೆ ಅದರ ಸ್ವಾದವೇ ಬೇರೆ.
ಇದು ಶುದ್ಧ ಸಸ್ಯ ಮೂಲದ ತುಪ್ಪಾ ಪ್ರಾಣಿ ಜನ್ಯದ ತುಪ್ಪಾ ಮಾತ್ರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಸಸ್ಯ ಜನ್ಮದ ತುಪ್ಪ ಇದೆ ಅನ್ನುವುದು ಬಹುತೇಕರಿಗೆ ಗೊತ್ತೇ ಇಲ್ಲ.
ಇದು ಮಾರುಕಟ್ಟೆಯಲ್ಲಿ ಸಿಗುವ ಮಾಹಿತಿ ಇಲ್ಲ ಆದರೆ ಪಾರಂಪರಿಕವಾಗಿ ಗೋವಾದಿಂದ ಕೇರಳದವರೆಗಿನ ಪಶ್ಚಿಮ ಘಟ್ಟ ವಾಸಿಗಳು ಸ್ವಂತಕ್ಕಾಗಿ ತಯಾರಿಸಿ ಬಳಸುವ ಅಭ್ಯಾಸವಿದೆ.
ಇದು ಪ್ರಾಣಿಜನ್ಯ ಉತ್ಪನ್ನ ತಿನ್ನದ #Vegans ಗಳಿಗೆ ವರದಾನ ಆಗಿದೆ.
ಉಪ್ಪಾಗೆ ಭಾರತದ ಮೂಲದ ಸಸ್ಯ ಇದು ತಮಿಳುನಾಡಿನ ನೀಲಗಿರಿ, ಕೇರಳದ ತಿರುವಾಂಕೂರು, ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ.
ಈ ಮರದ ೩೫ ಪ್ರಬೇಧಗಳು ಭಾರತದಲ್ಲಿದೆ,ಕರ್ನಾಟಕ ಮತ್ತು ಕೇರಳದ ಪಶ್ಚಿಮಘಟ್ಟದ ಕಾಡುಗಳಲ್ಲದೇ ಇಂಡೋನೇಷ್ಯಾ ಮತ್ತು ಆಫ್ರಿಕಾದಲ್ಲೂ ಇವು ಬೆಳೆಯುತ್ತವೆ.
ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ, ಪಶ್ಚಿಮಘಟ್ಟದ ಪ್ರದೇಶದಲ್ಲಿ 10 ಪ್ರಬೇಧಗಳು ಕಾಣಸಿಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಅರಣ್ಯಗಳಲ್ಲಿ ಉಪ್ಪಾಗೆ, ಮುರಗಲು, ಅರಿಸಿಣಗುರಗಿ, ಜಾಣಗೆ, ಕಾಡುಮುರಗಲು ಪ್ರಬೇಧಗಳು ಕಾಣಸಿಗುತ್ತವೆ.
ನಿತ್ಯಹರಿದ್ವರ್ಣ ಮತ್ತು ಸೋಲಾ ಕಾಡುಗಳ ತಂಪು ಹಾಗೂ ತೇವಾಂಶಗಳಿರುವಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ತಂಪಗಿನ ವಾತಾವರಣದಲ್ಲಿ ನೆಟ್ಟು ಬೆಳೆಸಬಹುದು.
ಹಣ್ಣಿನ ಬೀಜವು ಕೊಬ್ಬಿನಂಶ ಹೊಂದಿದ್ದು ಇದರಿಂದ ತುಪ್ಪವನ್ನು ತೆಗೆಯಲಾಗುತ್ತದೆ.
ಇದರ ಬೀಜಗಳನ್ನು ಒಣಗಿಸಿ ಕುಟ್ಟಿ ಬೇಯಿಸಿದರೆ ಇದರ ಕೊಬ್ಬು ಖಾದ್ಯ ತೈಲವಾಗಿ ಲಭ್ಯ.
ಇದು ಹಳದಿ ಬಣ್ಣದಿಂದ ತುಪ್ಪದಂತೆ ಗಟ್ಟಿಯಾಗುವ ಗುಣವನ್ನು ಹೊಂದಿದ್ದು ತಿಂಡಿತಿನಿಸುಗಳ ತಯಾರಿಗೆ ಯೋಗ್ಯವಾಗಿದೆ.
ಮಲೆನಾಡಿನಲ್ಲಿ ಇದು ಉಪ್ಪಾಗೆ ತುಪ್ಪ ಎಂದು ಬಳಸಲ್ಪಡುತ್ತದೆ.
ಈ ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಮಂದಸಾರ ತಯಾರಿಸುತ್ತಾರೆ ಇದು ಕೊಡಗು ಹಾಗೂ ಕೇರಳದಲ್ಲಿ ಹಂದಿಮಾಂಸದ ಮತ್ತು ಮೀನಿನ ಅಡುಗೆಗಳಿಗೆ ಹೆಚ್ಚು ಬಳಸುತ್ತಾರೆ ಇದಕ್ಕೆ #ಕಾಚುಪುಳಿ ಎಂದು ಹೆಸರಿದೆ
ಕೊಡಗಿನಲ್ಲಿ ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ ಇದನ್ನು ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ. ಕೆಲವು ಪದಾರ್ಥಗಳಿಗೆ ಉಪ್ಪಾಗೆಯ ಒಣಗಿಸಿದ ಸಿಪ್ಪೆಯನ್ನು ಉಪಯೋಗಿಸಿದರೆ ಹಣ್ಣಿನ ನೀರನ್ನು ಇಂಗಿಸಿ ತಯಾರಿಸಿದ ಹುಳಿನೀರು ಕೂಡ ಹೆಚ್ಚಾಗಿ ಬಳಸುತ್ತಾರೆ.
ಒಂದು ಕಿಲೋ ಒಣಸಿಪ್ಪೆ ಆಗಲು ಸುಮಾರು ಮೂರು ಕಿಲೋ ಹಣ್ಣುಗಳು ಬೇಕಾಗುತ್ತವೆ.
ಸರಿಯಾಗಿ ಒಣಗಿದ ಸಿಪ್ಪೆಯನ್ನು ಎರಡು ವರ್ಷಗಳ ಕಾಲ ಕೆಡದೇ ಇಡಬಹುದು.
ಉಪ್ಪು ಸೇರಿಸಿ ಗಾಳಿಯಾಡದಂತೆ ಕಟ್ಟಿಟ್ಟರೆ ಇನ್ನೂ ಹೆಚ್ಚಿನ ಕಾಲ ಇಡಬಹುದು.
Comments
Post a Comment