#ಪೋಷಕರೆ_ಬೇಜವಾಬ್ದಾರಿ_ಆದರೆ....
#ಮಕ್ಕಳು_ಏನಾಗಬೇಕು?
#ವಾಹನ_ಚಾಲನೆ_ಕಲಿತರೆ_ಸಾಕಾಗುವುದಿಲ್ಲ
#ವಾಹನ_ನಿಯಂತ್ರಣ_ಮತ್ತು_ನಿಲ್ಲಿಸುವುದು_ಕಲಿತಿರ_ಬೇಕು.
#Safetydrive #Seatbelt #Car #Driving #Childcare.#Necesity #Comfort #luxurycars
#sunroofcar
ಈ ಲೇಖನದ ಕಾಮೆಂಟ್ ನ ವಿಡಿಯೋ ನೋಡಿ ನಿನ್ನೆ ಬೆಂಗಳೂರಿನಲ್ಲಿ ಕೆಂಪು ಬಣ್ಣದ ಕಾರಿನ ರೂಪ್ ಟಾಪ್ ತೆರೆದು ಅಲ್ಲಿ ಬಾಲಕನೋರ್ವನನ್ನ ನಿಲ್ಲಿಸಿದ್ದಾರೆ, ಮುಂದಿನ ರೈಲ್ವೆ ಕ್ರಾಸಿಂಗ್ ನಲ್ಲಿ ಬೃಹತ್ ವಾಹನ ಪ್ರವೇಶಿಸದಂತೆ ಹಾಕಿರುವ ಕಬ್ಬಿಣದ ಅಡ್ಡ ಪಟ್ಟಿಗೆ ಈ ಬಾಲಕನ ತಲೆ ತಾಗಿ ಅಪಘಾತ ಆಗಿದೆ.
ಮೊದಲೆಲ್ಲ ಕಾರ್ ಎಂದರೆ ಲಗ್ಜುರಿ & ಕಂಪರ್ಟ್ ಹಣ ಇದ್ದವರಿಗೆ ಮಾತ್ರ ಮೀಸಲು ಎಂಬ ಭಾವನೆ ಮತ್ತು ಹಣ ಇಲ್ಲದವರು ಕಾರು ತರಲು ಸಾಧ್ಯವಿರಲಿಲ್ಲ.
ಈಗ ಬದಲಾದ ಕಾಲ ಕಾರು ನೆಸೆಸರಿ & ಕಂಫರ್ಟ ಆಗಿದೆ ಅದು ವಿಲಾಸಿ ಅಲ್ಲ ಅನಿವಾಯ೯ ಮತ್ತು ಕಾರು ತರಲು ನಿಮ್ಮ ಹಣ ಬೇಡ ಪೂರ್ತಿ ಬ್ಯಾಂಕ್ ಸಾಲ ನೀಡುತ್ತದೆ.
ಆದ್ದರಿಂದ ಎಲ್ಲರ ಮನೆಯಲ್ಲೂ ಕಾರು ಇದೆ ಆದರೆ ಅನೇಕರು ಕಾರು ಬೈಕ್ ಹೊಂದಿದ್ದರು ಅದನ್ನು ಸುರಕ್ಷಿತವಾಗಿ ಚಾಲನೆ ಮಾಡಲು ಮಾತ್ರ ಹಿಂದುಳಿದಿದ್ದಾರೆ.
ಹೆಲ್ಮೆಟ್ ಕಡ್ಡಾಯ ಧರಿಸಬೇಕು ಇದು ನಮ್ಮ ರಕ್ಷಣೆಗೆ ಆದರೆ ಇದು ಪೋಲಿಸರಿಂದ ತಪ್ಪಿಸಿ ಕೊಳ್ಳಲು ಅನ್ನುವಂತೆ ವರ್ತಿಸುತ್ತಾರೆ.
ಕಾರ್ ಚಾಲನೆ ಕಲಿಯದೇ ಕಾರು ಖರೀದಿಸಿದವರು ನಂತರ ಅದರ ಚಾಲನೆ ಕಲಿಯಲು ಹೆಚ್ಚು ಗಮನ ಕೊಡುವುದಿಲ್ಲ ತಕ್ಷಣ ಸಂಸಾರ ಸಮೇತ ಕಾರಿನಲ್ಲಿ ಪ್ರವಾಸ ಹೊರಡುತ್ತಾರೆ.
ವಾಹನ ಚಾಲನೆ ಕಲಿತರೆ ಮಾತ್ರ ಸಾಕಾಗುವುದಿಲ್ಲ ಚಾಲನೆಯಲ್ಲಿ ಜಡ್ಜ ಮೆಂಟ್ ಕಲಿಯಬೇಕು, ವಾಹನಗಳ ನಿಯಂತ್ರಣ, ಸರಿಯಾದ ಸಮಯ ಮತ್ತು ದೂರದಲ್ಲಿ ವಾಹನದ ಬ್ರೇಕ್ ಬಳಸಿ ವಾಹನ ನಿಲ್ಲಿಸುವ ಚಾಕಚಕ್ಯತೆ ಹಾಗೂ ವಾಹನ ಹಿಮ್ಮುಖ ಚಾಲನೆ (ರಿವರ್ಸ್) ಕಲಿಯ ಬೇಕು.
ವಾಹನ ಚಾಲನೆಯಲ್ಲಿ ಪರಿಣಿತರಾದ ಮೇಲೆ ಸಂಸಾರದ ಜೊತೆ ಪ್ರಯಾಣಕ್ಕೆ ವಾಹನದ ಡ್ರೈವಿಂಗ್ ಸೀಟ್ ನಲ್ಲಿ ಕೂರಬೇಕು.
ಪ್ರಯಾಣಿಸುವವರೂ ಸೀಟ್ ಬೆಲ್ಟ್ ಕಡ್ಡಾಯ ಧರಿಸಬೇಕು.
ರೂಪ್ ಟಾಪ್ ಹಾಕಿ ಹೆಚ್ಚಿನ ಬೆಲೆಗೆ ಕಾರು ಮಾರಾಟ ಮಾಡುವ ಕಾರು ತಯಾರಕ ಕಂಪನಿಗಳು ಮತ್ತು ರೂಪ್ ಟಾಪ್ ಕಾರನ್ನೇ ಖರೀದಿಸು ಗ್ರಾಹಕರು ಈಗ ಹೆಚ್ಚುತ್ತಿದ್ದಾರೆ.
ಕಾರಿನಲ್ಲಿ ರೂಫ್ ಟಾಪ್ ನ ಉಪಯೋಗವೇನು?
ನೈಸರ್ಗಿಕ ಬೆಳಕನ್ನು ಹೆಚ್ಚಿಸುತ್ತದೆ, ಒಳಾಂಗಣವನ್ನು ಪ್ರಕಾಶಮಾನವಾಗಿ ಮತ್ತು ಹೆಚ್ಚು ಮುಕ್ತವಾಗಿ ಕಾಣುವಂತೆ ಮಾಡುತ್ತದೆ ,AC ಬಳಸದೆಯೇ ಕಾರನ್ನು ತಂಪಾಗಿಸಲು ಸಹಾಯ ಮಾಡುತ್ತದೆ,ಸೌಂದರ್ಯದ ಆಕರ್ಷಣೆಯನ್ನು ನೀಡುತ್ತದೆ ಮತ್ತು ಕಾರಿಗೆ ಪ್ರೀಮಿಯಂ ನೋಟವನ್ನು ನೀಡುತ್ತದೆ.
ಭಾರತದಲ್ಲಿ ಒಂದೇ ಒಂದು "ಮೊದಲ" ಸನ್‌ರೂಫ್ ಕಾರು ಇರಲಿಲ್ಲ ಆದರೆ ಕ್ರಮೇಣ ಮರ್ಸಿಡಿಸ್-ಬೆನ್ಜ್, BMW ಮತ್ತು ಆಡಿಯಂತಹ ಐಷಾರಾಮಿ ಬ್ರಾಂಡ್‌ಗಳು 1990 ರ ದಶಕದ ಅಂತ್ಯದಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ಸನ್‌ರೂಫ್‌ಗಳನ್ನು ನೀಡುತ್ತಿದ್ದವು ನಂತರ ಸ್ಕೋಡಾ, ಒಪೆಲ್ ಮತ್ತು ಚೆವ್ರೊಲೆಟ್‌ನಂತಹ ಬ್ರ್ಯಾಂಡ್‌ಗಳು ತಮ್ಮ ಪ್ರೀಮಿಯಂ ಮಾದರಿಗಳಲ್ಲಿ ಸನ್‌ರೂಫ್‌ಗಳನ್ನು ನೀಡುತ್ತಿದ್ದವು.
2008 ರಲ್ಲಿ ಆರಂಭಿಕ ಹಂತದ ಹ್ಯಾಚ್‌ಬ್ಯಾಕ್‌ಗಳಲ್ಲಿ ಸನ್‌ರೂಫ್‌ಗಳನ್ನು ನೀಡಿದ ಮೊದಲ ಕಾರುಗಳಲ್ಲಿ ಹುಂಡೈ i10 ಮತ್ತು i20 ಸೇರಿವೆ, ಇದು ವೈಶಿಷ್ಟ್ಯವನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಸನ್‌ರೂಫ್‌ನ ಮೊದಲ ಅಳವಡಿಕೆ 1930 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಇದನ್ನು #ವೆಬಾಸ್ಟೊ ಎಂಬ ಜರ್ಮನ್ ತಯಾರಕರು ಕಂಡುಹಿಡಿದರು, ಸನ್‌ರೂಫ್ ಎನ್ನುವುದು ಕಾರಿನ ಛಾವಣಿಯಲ್ಲಿರುವ ಒಂದು ಫಲಕವಾಗಿದ್ದು ಅದನ್ನು ಕಿಟಕಿಯನ್ನು ತೆರೆದಂತೆ ತೆರೆಯಬಹುದು, ಇದರಿಂದಾಗಿ ವಾಹನದ ಒಳಭಾಗಕ್ಕೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿ ಪ್ರವೇಶಿಸಲು ಸಾಧ್ಯವಾಗುತ್ತದೆ.
ಕಾರಿನ ತೆರೆದ ಮೇಲ್ಛಾವಣಿಯ ಮೇಲೆ ನಿಲ್ಲುವುದು ಕಾನೂನುಬಾಹಿರ ಮತ್ತು ಅಪಾಯಕಾರಿ, ಮತ್ತು ಇದಕ್ಕೆ RTO ಯಿಂದ ಯಾವುದೇ ಅನುಮತಿ ಇಲ್ಲ.
ಮೋಟಾರು ವಾಹನ ಕಾಯ್ದೆಯಡಿಯಲ್ಲಿ 177 (ಸಾಮಾನ್ಯ ಅಪರಾಧಗಳು) ಮತ್ತು 184 (ಅಪಾಯಕಾರಿ ಚಾಲನೆ) ನಂತಹ ವಿಭಾಗಗಳ ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ.
ಇದು ದಂಡ ಮತ್ತು ದಂಡಗಳಿಗೆ ಕಾರಣವಾಗಬಹುದು. ಬೀಳುವ ವಸ್ತುಗಳಿಂದ ಅಥವಾ ಹಠಾತ್ ಬ್ರೇಕ್ ಮಾಡುವಾಗ ಗಾಯಗೊಳ್ಳುವುದು ಸೇರಿದಂತೆ ಪ್ರಯಾಣಿಕರು ಮತ್ತು ಇತರ ರಸ್ತೆ ಬಳಕೆದಾರರಿಗೆ ಗಂಭೀರ ಸುರಕ್ಷತಾ ಅಪಾಯಗಳಿರುವುದರಿಂದ ಕರ್ನಾಟಕ ಪೊಲೀಸರು ಮತ್ತು ಇತರ ಅಧಿಕಾರಿಗಳು ಇದಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮೇಲ್ಛಾವಣಿ ತೆರೆದು ನಿಲ್ಲುವುದರಿಂದ ವಾಹನದಿಂದ ಎಸೆಯಲ್ಪಡುವ, ಅವಶೇಷಗಳಿಂದ ಗಾಯಗೊಳ್ಳುವ ಅಥವಾ ಹಠಾತ್ ನಿಲ್ದಾಣಗಳ ಸಮಯದಲ್ಲಿ ವಾಹನದ ರಚನೆಗಳಿಂದ ಹಾನಿಯಾಗುವ ಗಮನಾರ್ಹ ಅಪಾಯವಿದೆ.
ಕಾಯಿದೆಯಲ್ಲಿ ನಿರ್ದಿಷ್ಟವಾಗಿ ವ್ಯಾಖ್ಯಾನಿಸದ ಅಪರಾಧಗಳಿಗೆ ಪೊಲೀಸರು ದಂಡ ವಿಧಿಸಬಹುದು, ಇದು ಮೇಲ್ಛಾವಣಿಯ ತೆರೆದು ಮೇಲೆ ನಿಲ್ಲುವುದನ್ನು ಕಾನೂನುಬಾಹಿರ ಕ್ರಮವೆಂದು ಪರಿಗಣಿಸುತ್ತದೆ.
ಸೆಕ್ಷನ್ 184 ಈ ಸೆಕ್ಷನ್ ಅಪಾಯಕಾರಿ ಚಾಲನೆಯನ್ನು ಒಳಗೊಳ್ಳುತ್ತದೆ ಮತ್ತು ಛಾವಣಿಯ ಮೇಲೆ ವ್ಯಕ್ತಿ ನಿಂತಿರುವ ಚಲಿಸುವ ವಾಹನವನ್ನು ಅಪಾಯಕಾರಿ ಚಾಲನೆ ಎಂದು ಪರಿಗಣಿಸಲಾಗುತ್ತದೆ.
ಪ್ರಯಾಣಿಕರು ಸೀಟ್‌ಬೆಲ್ಟ್‌ಗಳನ್ನು ಧರಿಸಬೇಕು ಮತ್ತು ಛಾವಣಿಯ ಮೇಲೆ ನಿಲ್ಲುವುದು ಈ ನಿಯಮಗಳನ್ನು ಉಲ್ಲಂಘಿಸುತ್ತದೆ, ಇದು ಶಿಕ್ಷಾರ್ಹ ಅಪರಾಧವಾಗಿದೆ.
ಕಾನೂನು ದಂಡಗಳು
ಉಲ್ಲಂಘನೆಗಳಿಗೆ ಪೊಲೀಸರು ದಂಡ ವಿಧಿಸಬಹುದು.
ಕಾರು ಮಾಲೀಕರು ಮತ್ತು ಚಾಲಕ ಇಬ್ಬರೂ ಹೊಣೆಗಾರರಾಗಬಹುದು.
ಈ ಪದ್ಧತಿಯನ್ನು ಜೀವಕ್ಕೆ ಅಪಾಯವನ್ನುಂಟುಮಾಡುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 336 ರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಇದು ದಂಡ ಮತ್ತು ಸಂಭಾವ್ಯ ಜೈಲು ಶಿಕ್ಷೆಗೆ ಒಳಪಡುತ್ತದೆ.
ಮೇಲ್ಛಾವಣಿಯ ಮೇಲೆ ನಿಲ್ಲಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದ (RTO) ಅನುಮತಿ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಅದು ನಿಷೇಧಿತ ಮತ್ತು ಅಪಾಯಕಾರಿ ಚಟುವಟಿಕೆಯಾಗಿದೆ.
ಅಧಿಕಾರಿಗಳು ಇಂತಹ ಅಸುರಕ್ಷಿತ ಅಭ್ಯಾಸಗಳನ್ನು ತಡೆಗಟ್ಟುವತ್ತ ಗಮನ ಹರಿಸಿದ್ದಾರೆ.
ಕಾನೂನು ಹೀಗಿರುವಾಗ ರೂಪ್ ಟಾಪ್ ಅಥವ ಸನ್ ಟಾಪ್ ಇರುವುದು ಅದನ್ನು ತೆರೆದು ಅಲ್ಲಿ ನಿಂತುಕೊಂಡು ಪ್ರಯಾಣಿಸಲಾ?... ಇದೆಲ್ಲ ಯೋಚಿಸದಿದ್ದರಿಂದ ಇಂತಹ ಅವಘಡಗಳು ಆಗುತ್ತದೆ.
ನಮ್ಮ ಜಿಲ್ಲೆಯ ಆಗುಂಬೆ ಘಾಟಿಯ ತಿರುವುಗಳಲ್ಲಿ ರೂಪ್ ಟಾಪ್ ತೆರೆದು ಮಕ್ಕಳನ್ನು ಅಲ್ಲಿ ನಿಲ್ಲಿಸಿ ವೇಗವಾಗಿ ಕಾರು ಚಲಾಯಿಸುವ ಪೋಷಕರನ್ನ ನಿತ್ಯ ನೀವು ನೋಡ ಬಹುದು.
ನಿಮ್ಮ ಕಾರುಗಳು ನಿಮ್ಮ ಸುರಕ್ಷಿತ ಪ್ರಯಾಣದ ವಾಹನ ಮಾತ್ರ ಆಗಬೇಕು, ಅದರ ಟೈರ್ - ಬ್ರೇಕ್ ಸರಿ ಇದಿಯಾ ಮೊದಲು ನೋಡಿ ಖಾತ್ರಿ ಮಾಡಿಕೊಳ್ಳ ಬೇಕು ನಂತರ ಸೀಟ್ ಬೆಲ್ಟ್ ಧರಿಸಿ ರಸ್ತೆಯ ಇಕ್ಕೆಲದಲ್ಲಿ ಸೂಚಿಸಿದ ವೇಗದಲ್ಲಿ ಮತ್ತು ಮುಂದೆ ಬರುವ ಹಂಪ್ - ರೈಲ್ವೆ ಕ್ರಾಸಿಂಗ್- ತಿರುವುಗಳ ತಿಳಿದು ವಾಹನ ಚಲಾಯಿಸ ಬೇಕು.
ಕೇವಲ ಕಾರು ಖರೀದಿಸುವುದು ಮಾತ್ರ ಅಲ್ಲ ಪ್ರಯಾಣಿಸುವ ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ಕಾಪಾಡಲು ನಿಮಗೆ ಸಾಧ್ಯವಾಗುವುದಿಲ್ಲವಾದರೆ ನೀವು ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದು ಸೂಕ್ತ ಮತ್ತು ಸುರಕ್ಷಿತ.
ಕಾಮೆಂಟ್ ನಲ್ಲಿರುವ ವಿಡಿಯೋ ನೋಡಿ ಮತ್ತು ನಿಮ್ಮ ಆಪ್ತರಿಗೆ ಶೇರ್ ಮಾಡಿ ವಾಹನ ಚಾಲನೆ ಸುರಕ್ಷತೆಗೆ ಮುಂದಾಗಿ.
Comments
Post a Comment