#ಭಾಗ_3.
#ಜೋಗ್_ಪಾಲ್ಸ್_ಪರಿಸರದಲ್ಲಿ_ಹೊಂ_ಸ್ಟೇ
#ನನ್ನ_ಹೊಂ_ಸ್ಟೇ_ಸರಣಿ_ಲೇಖನಕ್ಕೆ
#ಈ_ಭಾಗದ_ಮನ್ಮನೆ_ಸಮೀಪದ_ಪ್ರಖ್ಯಾತ_ಅಜ್ಜನಮನೆ_ಹೊಂ_ಸ್ಟೇ
#ಮಾಲಿಕ_ಪತ್ರಕರ್ತ_ರಾಘವೇಂದ್ರಶರ್ಮಾರ_ಪ್ರತಿಕ್ರಿಯೆ.
#Jogfalls #Homestay #Project #Karnatakatourism #Shivamogga #Ajjanamane
ಜೋಗ್ ಫಾಲ್ಸ್ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿಗೆ ಸೇರಿಕೊಂಡ ವಿಶ್ವ ವಿಖ್ಯಾತ ಜಲಪಾತ.
ಇಲ್ಲಿಗೆ ಬರುವ ಪ್ರವಾಸಿಗರು ಮೂಲ ಸೌಕರ್ಯಗಳ ಕೊರತೆಯಿಂದ ಬಹುತೇಕರು ಇಲ್ಲಿ ತಂಗುವುದಿಲ್ಲ.
ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಕೊಟ್ಯಾಂತರ ಹಣ ವಿನಿಯೋಗಿಸಿ ಕಾಮಗಾರಿ ನಡೆಸಿದೆ.
ಇದನ್ನು ಬಳಸಿಕೊಂಡು ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಗಳು ಇಲ್ಲಿ ಬರಲಿದೆ ಎಂಬ ಸುದ್ದಿ ಇದೆ ಈ ರೀತಿಯ ಸ್ಟಾರ್ ಹೋಟೆಲ್ ಗಳು ದುಬಾರಿ ಮತ್ತು ಸಮಾಜದ ಪ್ರತಿಷ್ಟಿತ ಶ್ರೀಮಂತ ಪ್ರವಾಸಿಗರಿಗೆ ಮೀಸಲು.
ಇದರ ಜೊತೆಗೆ ಜೋಗ್ ಫಾಲ್ಸ್ ಪ್ರವಾಸೋಧ್ಯಮದಲ್ಲಿ ಸ್ಥಳೀಯರೂ ಪರೋಕ್ಷ ಪಾಲುದಾರರಾಗಿ ಎಲ್ಲಾ ವರ್ಗದ ಪ್ರವಾಸಿಗಳಿಗೆ (ಬಜೆಟ್ ಟೂರಿಸ್ಟ್) ಅನುಕೂಲ ಮಾಡಿಕೊಡುವ ಮೂಲಕ ಪ್ರವಾಸೋದ್ಯದಕ್ಕೆ ಅವರದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು.
ಜೋಗ್ ಪಾಲ್ಸ್ ಪರಿಸರದಲ್ಲಿ ಪ್ರಾರಂಭವಾದ ಮೊದಲ ಹೊಂ ಸ್ಟೇ #ಮುತ್ತುಗ ನಂತರ ಈ ಭಾಗದಲ್ಲಿ #ಅಜ್ಜನಮನೆ ಸೇರಿದಂತೆ ಅನೇಕ ಹೊಂ ಸ್ಟೇಗಳ ನಿರ್ಮಾಣವಾಗಿದೆ.
ಇದರಿಂದ ಸ್ಥಳೀಯರಿಗೂ ಆದಾಯ -ಉದ್ಯೋಗ ಸಾಧ್ಯ ಎಂದು ಖಾಸಾಗಿ ಪ್ರವಾಸೋದ್ಯಮ ಸಂಸ್ಥೆ ಈ ಭಾಗದಲ್ಲಿ ಸಮೀಕ್ಷೆ ನಡೆಸಿದೆ.
ಅದರ ಸಮೀಕ್ಷೆ ಪ್ರಕಾರ ಜೋಗ್ ಜಲಪಾತದ ಪ್ರದೇಶ (ಸಾಗರ ಮತ್ತು ಸಿದ್ದಾಪುರ ತಾಲ್ಲೂಕು ಸೇರಿ) ಕನಿಷ್ಟ 200 ಹೊಂ ಸ್ಟೇ ನಡೆಯಲು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದಿದೆ.
ಈ ಸಂಸ್ಥೆ ಹೊಂ ಸ್ಟೇ ನಡೆಸಲು ಮುಂದೆ ಬರುವ ಸ್ಥಳೀಯರಿಗೆ ತರಬೇತಿ ನೀಡಿ ಅವರ ವಾಸದ ಮನೆಯನ್ನು ಹೊಂ ಸ್ಟೇ ಮಾಡಲು ಆರ್ಥಿಕ ನೆರವು ಮತ್ತು ಬುಕಿಂಗ್ ಸೌಲಭ್ಯ ಒದಗಿಸಲಿದೆ.
ಈ ಹೊಂ ಸ್ಟೇ ಯೋಜನೆ ಈ ಭಾಗದ ಕನಿಷ್ಟ 200 ಕುಟುಂಬಗಳಿಗೆ ಆದಾಯದ ಮೂಲ ಆಗಲಿದೆ ಎಂಬ ಕಾರಣದಿಂದ ಎಲ್ಲಾ ರೀತಿಯ ಮಾಹಿತಿ ಮತ್ತು ಪ್ರಚಾರ ನೀಡಲು ನಾನು ಈ ಸರಣಿ ಲೇಖನ ಬರೆಯುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇನೆ.
ಇವತ್ತು ನನ್ನ ಹೊಂ ಸ್ಟೇ ಸರಣಿ ಲೇಖನಕ್ಕೆ ಪ್ರತಿಕ್ರಿಯೆ ನೀಡಿದವರು ಸಾಗರ ತಾಲೂಕಿನ ತಲವಾಟದ ಪತ್ರಕರ್ತರಾದ #ರಾಘವೇಂದ್ರಶರ್ಮ ಅವರು ತಾಳಗುಪ್ಪ ಮಾವಿನಗುಂಡಿ ಮಾರ್ಗದಲ್ಲಿ ಮನ್ಮನೆಯಿಂದ ತಲವಾಟಕ್ಕೆ ಹೋಗುವ ಮಾರ್ಗದಲ್ಲಿ ಒಂದು ಅತ್ಯುತ್ತಮವಾದ ಹೊಂ ಸ್ಟೇ ದಶಕದ ಹಿಂದೆಯೇ ನಿರ್ಮಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ ಅದರ ಹೆಸರು #ಅಜ್ಜನಮನೆ,
ಯಾವುದೇ ಪ್ರವಾಸೋದ್ಯಮ ಇಲಾಖೆ ಸಹಾಯ ಇಲ್ಲದ ದಶಕದ ಹಿಂದೆ ಇದನ್ನು ಇವರು ನಿರ್ಮಿಸಿದ್ದಾರೆ ಇಲ್ಲಿ ಮಲೆನಾಡಿನ ಪರಿಸರದ ಸಸ್ಯಹಾರಿ ಆಹಾರ ವ್ಯವಸ್ಥೆ ಮಾಡುತ್ತಾರೆ, ತೊಟ್ಟಿಮನೆ ಮಾದರಿಯ ಈ ಅಜ್ಜನ ಮನೆ ಹೊಂ ಸ್ಟೇ ಅವರು ಶುಚಿ-ರುಚಿಗಳಿಂದ ಮತ್ತು ಅತ್ಯುತ್ತಮ ನಿರ್ವಹಣೆ ಮಾಡಿ ಖ್ಯಾತಿ ಗಳಿಸಿದ್ದಾರೆ.
ಇದನ್ನು ನಿರ್ಮಿಸುವಾಗ ಸ್ಥಳೀಯರೇ ಅವರಿಗೆ ಅನೇಕ ತೊಂದರೆ ನೀಡಿದ್ದನ್ನೆಲ್ಲ ಅವರು ಎದುರಿಸಿದ್ದಾರೆ.
ನನ್ನ ಹೊಂ ಸ್ಟೇ ಲೇಖನಕ್ಕೆ ಅವರ ಪ್ರತಿಕ್ರಿಯೆ ನೋಡಿ ...
"ಕಷ್ಟ ಇದೆ ಆಗುವುದಿಲ್ಲ, ಜುಲೈ ಇಂದ ಡಿಸೆಂಬರ್ ವರೆಗೆ ಆಗತ್ತೆ, ಆಮೇಲೆ ಬಹಳ ಕಷ್ಟ" ಎಂದಿದ್ದಾರೆ.
ಇದಕ್ಕೆ #ಗಣಪತಿಭಟ್_ಜಿಗಳಿಮನೆ ಅವರು ಪ್ರತಿಕ್ರಿಯಿಸಿದ್ದು...
"Raghavendra Sharma ಸ್ವತಃ ಮಾಡಿನೋಡಿ ಅನುಭವದಿಂದ ಹೇಳಿದ ಮಾತು." ಎಂದಿದ್ದಾರೆ.
ಜೋಗ್ ಜಲಪಾತ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಮತ್ತು ಯೋಜನೆಗಳ ಹೊಂದಿರುವ ಮಾವಿನಗುಂಡಿ #ಅಶೋಕ್_ಹೆಗಡೆ ಅಮೇರಿಕಾದ ಕೆನಡಾದಿಂದ ಪ್ರತಿ ಕ್ರಿಯಿಸಿದ್ದು...
"Raghavendra Sharma ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳು ಬಹುತೇಕ ಮೂರರಿಂದ ಆರು ತಿಂಗಳ ಕಾಲ ಮಾತ್ರ ಎಲ್ಲಾ ಆಕರ್ಷಕ -ವೈಶಿಷ್ಟ್ಯಗಳಲ್ಲಿ ದಕ್ಷಿಣ ಭಾರತದ ದೇವಸ್ಥಾನಗಳು,ಸಿಂಗಾಪುರ- ದುಬೈ ಯಂಥವುಗಳು ಹೊರತಾಗಿರಬಹುದು." ಎಂದಿದ್ದಾರೆ.
ಇದಕ್ಕೆಲ್ಲ ನಾನು ಉತ್ತರ ನೀಡಿದ್ದು...
Raghavendra Sharma ದೊಡ್ಡ ಬಂಡವಾಳದ ಅದರ ಮೇಲೆ ಅವಲಂಬಿತವಾದರೆ ನೀವು ಹೇಳಿದಂತೆ ಕಷ್ಟ ಆದರೆ ನಾನು ಬರೆದಿರುವುದು ಸ್ಥಳೀಯರು ಕಡಿಮೆ ಬಂಡವಾಳದಲ್ಲಿ ಅವರ ವಾಸದ ಮನೆಯನ್ನೆ ಹೊಂ ಸ್ಟೇ ಆಗಿ ಪರಿವರ್ತಿಸಿ ನಡೆಸಿದರೆ ಆದಾಯ ಸಾಧ್ಯವಿದೆ.
ಅವರಿಗೆ ವ್ಯವಸ್ಥಿತವಾಗಿ ತರಬೇತಿ,ಬುಕಿಂಗ್ ಸೌಲಭ್ಯ ಮತ್ತು ಹಣಕಾಸು ಸೌಲಭ್ಯ ನೀಡುವ ಸಂಸ್ಥೆ ಮುಂದೆ ಬಂದಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಮಲೆನಾಡಿನ ಜೋಗ್ ಜಲಪಾತದ ಪ್ರದೇಶದಲ್ಲಿ ಎಲ್ಲಾ ಋತುಗಳಲ್ಲಿಯೂ ಪ್ರವಾಸಿಗಳನ್ನ ಆಕರ್ಷಿಸ ಬಹುದಾದ ಶರಾವತಿ ಹಿನ್ನೀರಿನ ಪ್ರದೇಶಗಳು, ದಟ್ಟ ಅರಣ್ಯಗಳು, ಪ್ರಸಿದ್ಧ ದೇವಾಲಯಗಳು, ಐತಿಹಾಸಿಕವಾದ ಕೋಟೆ ಪ್ರದೇಶಗಳು, ಜಲಪಾತಗಳು ಇಲ್ಲಿರುವುದನ್ನ ಬಳಸುವ ಮೂಲಕ ಈ ಹೊಂ ಸ್ಟೇ ಯೋಜನೆ ಲಾಭದಾಯಕ ಉದ್ಯಮ ಮಾಡುವ ನೀಲನಕ್ಷೆ ತಯಾರಾಗುತ್ತಿದೆ.
ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಮಾಡಲಿರುವ ಆ ಸಂಸ್ಥೆ ಬುಕಿಂಗ್ ಸೌಲಭ್ಯ ಕೂಡ ನೀಡುವುದರಿಂದ ಈ ಯೋಜನೆ ಸಕ್ಸಸ್ ಆಗುವ ಸಾಧ್ಯತೆ ಇದೆ.
ಸ್ಥಳೀಯರ ಸಹಬಾಗಿತ್ವದ ಪರಿಸರ ಸ್ನೇಹಿ ಹೊಂ ಸ್ಟೇ ಗಳು ಈ ಭಾಗದಲ್ಲಿ ಪ್ರಾರಂಭವಾದರೆ ಮಾತ್ರ ಹೆಚ್ಚು ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರಲು ಸಾಧ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಾಮೆಂಟ್ ನಲ್ಲಿರುವ ವಾಟ್ಟಪ್ ಗುಂಪಿಗೆ Join ಆಗಿ.
ಈ ಭಾಗದ ಪ್ರಖ್ಯಾತ #ಅಜ್ಜನ_ಮನೆ ಹೊಂ ಸ್ಟೇ ಲಿಂಕ್ ಕೂಡ ಕಾಮೆಂಟ್ ನಲ್ಲಿದೆ ನೋಡಿ.
Comments
Post a Comment