Skip to main content

Posts

Showing posts with the label Famous industrialist of ANANDAPURAM Mr Subba rao

ಆನಂದಪುರದ ಉದ್ದಿಮೆದಾರರಾದ ಸುಬ್ಬರಾವ್ ಗೆ ನುಡಿನಮನ.

* ಆನಂದಪುರದ ಖ್ಯಾತ ಉದ್ದಿಮೆದಾರ ಟಿ.ಎನ್.ಸುಬ್ಬರಾವ್ ಗೆ ನುಡಿ ನಮನ *   ಸುಬ್ಬರಾವ್ ಸ್ವಯಂ ಉದ್ಯೋಗ ಮಾಡುವ ಗ್ರಾಮೀಣ ಪ್ರದೇಶದ ಸ್ವಯಂ ಉದ್ಯೋಗಿಗಳಿಗೆ ರೋಲ್ ಮಾಡೆಲ್ ಅಂತ ಬರೆದಿದ್ದೆ, ನಿನ್ನೆ ಅವರ ನುಡಿ ನಮನ ಕಾಯ೯ಕ್ರಮದಲ್ಲಿ ಅವರ ಶ್ರೀಮತಿಯವರ ಸಹೋದರ ಪ್ರೌಡ ಶಾಲಾ ಶಿಕ್ಷಕ, ಬರಹಗಾರರಾದ ಎನ್.ಡಿ.ಹೆಗ್ಗಡೆ ಒಂದು 40 ಪುಟದ ಸಂಕ್ಷಿಪ್ತ ಮತ್ತು ಸವಿವರವಾದ ಒಂದು  ಸುಬ್ಬರಾವ್ ರ ಸ್ಮರಣಾಥ೯ "ಆನಂದದ ಕಣ್ಮಣಿ ಸುಬ್ಬರಾಯರು" ಎ೦ಬ ಪುಸ್ತಕ ಮುದ್ರಿಸಿ ಸುಬ್ಬರಾವರ ಅಭಿಮಾನಿಗಳಿಗೆ, ಮಿತ್ರರಿಗೆ ಮತ್ತು ಬಂದುಗಳಿಗೆ ವಿತರಿಸಿದ್ದಾರೆ. ಇದರಲ್ಲಿ ಸುಬ್ಬರಾಯರ ಜೀವನ ಯಾತ್ರೆ ಮತ್ತು ಅನೇಕರಿಗೆ ಗೊತ್ತಿಲ್ಲದ ಅವರ ಸಾದನೆ ನಮೂದಿಸಿದ್ದಾರೆ.   ಶೂನ್ಯ ಬಂಡವಾಳದಿ೦ದ ಕೋಟ್ಯಾದಿಪತಿ ಆದ ಸುಬ್ಬರಾವ್ ರ ಬಗ್ಗೆ ಈ ಸ್ಮರಣ ಸಂಚಿಕೆ ಬರೆದು ಪ್ರಕಟಿಸಲು ಎನ್.ಡಿ.ಹೆಗ್ಗಡೆ ಸಹೋದರಿ (ಸುಬ್ಬರಾವ್ ರ ಪತ್ನಿ) ಮತ್ತು ಪುತ್ರ ಸಹಾಯ ಸಹಕಾರ ನೀಡಿದ್ದು ಅಭಿನಂದನೀಯ, ಶಿವಮೊಗ್ಗದ ರಾಯಲ್ ಪ್ರಿOಟಿಂಗ್ ಪ್ರೆಸ್ ನ ಮಾದವಾಚಾಯ೯ರು ಸುಂದರವಾಗಿ ಮುದ್ರಿಸಿದ್ದಾರೆ.   ನಿನ್ನೆಯ ಕಾಯ೯ಕ್ರಮಕ್ಕೆ ಎನ್.ಡಿ.ಹೆಗ್ಗಡೆ ಮತ್ತು ಸಂಸ್ಥೆಯ ಈವರೆಗಿನ ಏಳಿಗೆಗೆ ಬೆನ್ನು ಮೂಳೆಯಂತೆ ಕಾಯ೯ನಿವ೯ಹಿಸುತ್ತಿರುವ ಆನಂದಪುರದ ಕ್ರೀಡಾಪಟು ಪ್ರಾಣೆಶ್ ಬಂದು ಕರೆದಿದ್ದರು ನಾನು ಪುತ್ತೂರಿಗೆ ಹೋಗಬೇಕಾದ್ದರಿಂದ ಬಾಗವಹಿಸಲಾಗಲಿಲ್ಲ, ಸುಬ್ಬರಾವ್ ರ ಪಿಯುಸಿ ಕ್ಲಾಸ್ ಮೇಟ್...