Skip to main content

Posts

Showing posts with the label Areca Growers should come out Gutka lobby

4089.ಗುಟ್ಕಾಕ್ಕೆ_ಅನುಮತಿ_ನೀಡಲು_ದೇಶದ ಯಾವುದೇ_ಸರ್ಕಾರಕ್ಕೂ_ಅವಕಾಶವೇ_ಇಲ್ಲ ಅಡಿಕೆ_ಬೆಳೆಗಾರರು_ಗುಟ್ಕಾ_ಲಾಭಿಯಿಂದ_ಹೊರಬರಬೇಕು

ಗುಟ್ಕಾಕ್ಕೆ_ಅನುಮತಿ_ನೀಡಲು_ದೇಶದ ಯಾವುದೇ_ಸರ್ಕಾರಕ್ಕೂ_ಅವಕಾಶವೇ_ಇಲ್ಲ ಅಡಿಕೆ_ಬೆಳೆಗಾರರು_ಗುಟ್ಕಾ_ಲಾಭಿಯಿಂದ_ಹೊರಬರಬೇಕು   ಆದರೂ ರಾಜಕಾರಣಿಗಳು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸುತ್ತಿರುವುದು ಯಾಕೆ?.... ಅಡಿಕೆ ಬೆಳೆಗಾರರು ಈ ಬಗ್ಗೆ ಯೋಚಿಸಬೇಕು, ರಾಜ್ಯದ ಅಡಿಕೆ ಬೆಳೆಗಾರರು ಗುಟ್ಕಾ ಬೆಂಬಲಿಸದೇ ಕೂಡ ಲಾಭ ಪಡೆಯಲು ಸಾಧ್ಯವಿದೆ.   ಸುಪ್ರೀಂ ಕೋರ್ಟ್ ಆದೇಶ ಮತ್ತು ​ಕೇಂದ್ರ ಸರ್ಕಾರದ ನಿಯಮ (Regulation 2.3.4): ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತಂದಿರುವ ನಿಯಮಾವಳಿಗಳು ಇವರಾರೂ ಓದಿಕೊಂಡಿಲ್ಲವೇ ....   ಅಡಿಕೆ ಕೃಷಿ ಲಾಭದಾಯಕ ಕೃಷಿ ಆಗಿದೆ ಇದು ಶತಮಾನಗಳಿಂದಲೂ,ಗುಟ್ಕಾ ಇಲ್ಲದ ಕಾಲದಿಂದಲೂ ಅಡಿಕೆ ಇದೆ.   ಆದರೆ ಇತ್ತೀಚಿಗೆ ಬಂದಿರುವ ಗುಟ್ಕಾ ಉದ್ಯಮ ಜನರ ಆರೋಗ್ಯಕ್ಕೆ ಮಾರಕ ಆಗಿದ್ದರೂ ಈ ಉದ್ಯಮದಿಂದ ಊಹಿಸಲಾರದಷ್ಟು ಲಾಭದಾಯಕ ಆಗಿರುವುದರಿಂದ ಸರ್ಕಾರಗಳ ಮೇಲೆ ಪ್ರಭಾವ ಬೀರುವಷ್ಟು ಬಲಿಷ್ಟವಾಗಿದೆ.  ಮಧ್ಯವರ್ತಿಗಳು, ಗುಟ್ಕಾ ವ್ಯಾಪಾರಿಗಳ ಹಿತ ಕಾಪಾಡಲು ಅಡಿಕೆ ಬೆಳೆಗಾರರನ್ನ ಗುಟ್ಕಾ ಇಲ್ಲದೆ ಅಡಿಕೆ ಬೆಳೆ ಉಳಿಯಲು ಸಾಧ್ಯವೇ ಇಲ್ಲ ಎಂಬ ಹುಸಿ ನಂಬಿಕೆ ಸೃಷ್ಟಿಸಲು ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ಬಳಸಿಕೊಳ್ಳುತ್ತಿದ್ದಾರೆ.   ಇದಕ್ಕೆ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕಾದ ಸಂಘಟನೆಗಳು ಶಾಮೀಲಾಗುತ್ತಿರುವುದು ದುರಂತ.   ...