ಸಾಗರದ ರವೀ೦ದ್ರ ಪ್ರಕಾಶನದಲ್ಲಿ ಪ್ರಕಟಿಸಿದ ಕಾದಂಬರಿಗಳು ಪ್ರಸಿದ್ಧ ಚಲನ ಚಿತ್ರ ನಟರ ಸೂಪರ್ ಹಿಟ್ ಸಿನಿಮಾ ಆಗಿರುವ ಗರಿ ಪ್ರಕಾಶಕ ದಂತಿಯವರದ್ದು
#ಎಡಕಲ್ಲು_ಗುಡ್ಡದ_ಮೇಲೆ #ದ್ವೀಪಾ #ಗಿರಿಕನ್ಯೆ #ಹುಲಿಹಾಲಿನಮೇವು_ಕಾಡಿನಬೆಂಕಿ_ಬಯಲುದಾರಿ_ಮುಂತಾದ_ಸಿನಿಮಾ_ಆದ_ಪುಸ್ತಕ_ಪ್ರಕಟಿಸಿದ್ದು_ಸಾಗರದ #ರವೀಂದ್ರ_ಪುಸ್ತಕಾಲಯದ_ಯಲ್ಲಪ್ಪ_ಅಪ್ಪಾರಾವ್_ದಂತಿ. ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ (1995-2000) ಸಾಗರದ ಲೋಕೋಪಯೋಗಿ ಸಹಾಯಕ ಕಾಯ೯ಪಾಲಕ ಅಭಿಯಂತರ ಕಛೇರಿಗೆ ಹೋದಾಗೆಲ್ಲ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಗರದ ಪ್ರಖ್ಯಾತ ಪ್ರಕಾಶಕರಾದ ದಂತಿಯವರನ್ನು ಮತ್ತು ಇವರ ಪಕ್ಕದ ಟೇಬಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಖ್ಯಾತ ಸಾಹಿತಿ ನಾ.ಡಿಸೋಜರನ್ನು ಮಾತಾಡಿಯೇ ಬರುತ್ತಿದ್ದ ಕಾಲವಾಗಿತ್ತು. ಇಬ್ಬರೂ ಸಾಗರ ತಾಲ್ಲೂಕಿನ ಕಾರ್ಗಲ್ ನಿಂದಲೇ ವೃತ್ತಿ ಪ್ರಾರಂಬಿಸಿದವರು ನಾ.ಡಿಸೋಜ ಸಾಹಿತಿಯೂ ಆಗಿ ಪ್ರಸಿದ್ಧರಾದರೆ ದೂರದ ಅಥಣಿಯಿಂದ ಬಂದು ಇಲ್ಲಿ ಉದ್ಯೋಗದ ಜೊತೆ ರವೀ೦ದ್ರ ಪುಸ್ತಕಾಲಯದ ಹೆಸರಲ್ಲಿ ಪ್ರಕಾಶಕರಾಗಿ ಪ್ರಸಿದ್ಧರಾದರು. ಇತ್ತೀಚೆಗೆ ನನಗೆ #ಗಜಾನನ_ಶರ್ಮಾರ ಪುಸ್ತಕ ಇವರಲ್ಲಿದೆ ಅಂತ ಗೆಳೆಯರು ಇವರ ಪೋನ್ ನಂಬರ್ ಗೆ ಪೋನಾಯಿಸಿದಾಗ ಇವರು ನನ್ನ ವಿಳಾಸ ಬರೆದು ಕೊಳ್ಳುವಾಗ ಪುನಃ ಸಂಬಂದ ಏರ್ಪಟ್ಟಿತು. ಅವರ ಅಕೌಂಟ್ ಗೆ ಸುಮಾರು ಒಂದು ಸಾವಿರದ ನಾನೂರು ಕಳಿಸಲು ಅಕೌಂಟ್ ಮಾಹಿತಿಗೆ ಕಾಯುತ್ತಿದ್ದರೆ ಎಲ್ಲಾ ಪುಸ್ತಕ ಅಂಚೆಯಲ್ಲೇ ಕಳಿಸಿಬಿಟ್ಟಿದ್ದಾರೆ (ನಂಬಿಕೆ ದೊಡ್ಡದು) ನಂತರವೇ ಹ...