Blog number 2033. ನಮ್ಮ ಊರಿನ ಕ್ರೈಸ್ತ ಬಾಂದವರ ನೂತನ ಪ್ರಾರ್ಥನ ಮಂದಿರ ಸಂತ ಜೂದರ ದೇವಾಲಯ ದಿನಾಂಕ 11 - ಏಪ್ರಿಲ್- 2024ರ ಗುರುವಾರ ಬೆಳಿಗ್ಗೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ.
#ನಮ್ಮೂರ_ನೂತನ_ಚರ್ಚ್_ಲೋಕರ್ಪಣೆಯ_ಆಹ್ವಾನ_ಪತ್ರಿಕೆ #ಕರಾವಳಿ_ತೀರದಿಂದ_1930ರಲ್ಲಿ_ಬಂದು_ನೆಲಿಸಿದ_11_ಕ್ರೈಸ್ತ_ಕುಟುಂಬಗಳ_55_ಸದಸ್ಯರು #ಆಗ_ಭಾನುವಾರದ_ಪ್ರಾರ್ಥನೆ_ಈಗಿನ_ಪ್ರವಾಸಿ_ಮಂದಿರದಲ್ಲಿ #ನಂತರ_1962ರಲ್ಲಿ_ಚಿಕ್ಕ_ಚರ್ಚ್_ನಿರ್ಮಾಣವಾಯಿತು #ದೊಡ್ಡ_ಚರ್ಚ್_ಸಂತ_ಜೂದರ_ತದೆಯಸರ_ಚರ್ಚ್_1974ರಲ್ಲಿ_ನಿಮಾ೯ಣವಾಗಿ_1999ರಲ್ಲಿ_ನವೀಕರಣ_ಆಗಿತ್ತು. #ಇದೇ_ಜಾಗದಲ್ಲಿ_ನೂತನ_ಬೃಹತ್_ಕ್ರೈಸ್ತ_ದೇವಾಲಯ_ನಿರ್ಮಾಣವಾಗಿ_ಲೋಕರ್ಪಣೆ_ಆಗಲಿದೆ. ನಮ್ಮ ಆನಂದಪುರಂನ ಯಡೇಹಳ್ಳಿಯ ಹೊಸನಗರ ರಸ್ತೆಯ ರೈಲ್ವೆ ಗೇಟ್ ಸಮೀಪದ ಕ್ರೈಸ್ತ ಬಾಂದವರ ಸಂತ ಜೂದರ ನೂತನ ದೇವಾಲಯ ದಿನಾಂಕ 11 ಏಪ್ರಿಲ್ 2024 ರಂದು ಉದ್ಘಾಟನೆಗೊಳ್ಳಲಿದೆ. 1974 ರಲ್ಲಿ ನಿರ್ಮಿಸಿ 1999ರಲ್ಲಿ ನವೀಕರಣಗೊಂಡಿದ್ದ ಹಳೆಯ ಚರ್ಚ್ ಶಿಥಿಲಗೊಂಡಿದ್ದರಿಂದ ಅದನ್ನು ತೆಗೆದು ದೊಡ್ಡದಾದ ಹೊಸ ಚರ್ಚ್ ನಿರ್ಮಿಸುವ ಸಂಕಲ್ಪ ಮಾಡಿ ಅದನ್ನು ಯಶಸ್ವಿಯಾಗಿ ಅವರ ಸಂಸ್ಥೆಯ,ಸ್ಥಳಿಯ ಕ್ರೈಸ್ತ ಬಾಂದವರ ಮತ್ತು ದಾನಿಗಳ ನೆರವಿನಿಂದ ಅನೂಷ್ಟಾನ ಮಾಡಿದವರು ಈಗಿನ ಪಾದರ್ ಮಿನಿನ್ ಆಲ್ಮೇಡಾ ಅವರನ್ನು ಸ್ಮರಿಸಲೇ ಬೇಕು. ಶಿವಮೊಗ್ಗದ ದರ್ಮಾದ್ಯಕ್ಷರಾದ ಪರಮಪೂಜ್ಯ ಪ್ರಾನ್ಸಿಸ್ ಸೆರಾವೋ ಮತ್ತು ಕಾರವಾರದ ದರ್ಮಾದ್ಯಕ್ಷರಾದ ಪರಮ ಪೂಜ್ಯ ಡುಮಿಂಗ್ ಡಯಾಸ್ ನೂತನ ದೇವಾಲಯದ ಉದ್ಘಾಟನೆ - ಆಶೀರ್ವಚನ - ಮತ್ತು ಅಭಿಷೇಕೋತ್ಸವ ನೆರವೇರಿಸಲಿದ್ದಾರೆಂಬ ನಮ...