Blog number 1834.. ಐದು ವರ್ಷ ಪೂರೈಸಿದ ನನ್ನ ವಿಷ್ಣು ಸಹಸ್ರನಾಮ ಪಠಣಕ್ಕೆ ನನ್ನ ಗುರು ಹಿರಿಯರ ಅನುಗ್ರಹ ಆಶ್ರೀವಾದ ಕಾರಣ.
#ಈ_ಆದ್ಯಾತ್ಮಿಕ_ಅಭ್ಯಾಸಕ್ಕೆ_ಇವತ್ತಿಗೆ_5_ವರ್ಷ. #ನಿರಂತರ_ಒಂದು_ದಿನವೂ_ತಪ್ಪದೇ_ಪಠಣ_ಮಾಡಿದೆ. #ವಿಷ್ಣು_ಸಹಸ್ರನಾಮ. ದಿನಾಂಕ 23- ನವೆಂಬರ್ -2018ರಿಂದ ವಿಷ್ಣು ಸಹಸ್ರನಾಮ ನಿತ್ಯ ಪಠಣ ಮಾಡುವ ಸಂಕಲ್ಪ ಮಾಡಿ ಪ್ರಾರಂಬಿಸಿದ್ದೆ. ಈ ಪುಸ್ತಿಕೆ ತಂದು ಕೊಟ್ಟವರು ಖ್ಯಾತ ಜ್ಯೋತಿಷಿಗಳಾದ ಡಾ.ಎನ್.ಎಸ್. ವಿಶ್ವಪತಿ ಶಾಸ್ತ್ರೀಗಳು ಇದನ್ನು ಮುದ್ರಿಸಿದವರು ಬೆಂಗಳೂರಿನ ಡಾ.ರಾಜಕುಮಾರ್ ರಸ್ತೆಯ ಪ್ರಖ್ಯಾತ ಮುದ್ರಣ ಸಂಸ್ಥೆ ಅಭಿಮಾನಿ ಪ್ರಕಾಶನದ ವೆಂಕಟೇಶ್ ಅವರು. ಪ್ರಾರಂಭದಲ್ಲಿ ಉಚ್ಚರಿಸಲು ಹೆಚ್ಚು ಶ್ರಮ ಪಡಬೇಕಾಯಿತು (ಸಂಸ್ಕೃತ ಉಚ್ಚಾರಣೆ) ಇದಕ್ಕೆ ಪತ್ನಿ ಗುರುವಾಗಿ ತಿದ್ದಿದ್ದರಿಂದ ಉಚ್ಚಾರಣೆ ಸರಿ ಆಯಿತು. ಮಹಾ ಭಾರತ ಯುದ್ಧ ಕಾಲದಲ್ಲಿ ಮರಣ ಶಯ್ಯೆಯಲ್ಲಿದ್ದ ಬೀಷ್ಮರಿಗೆ ಯುದಿಷ್ಟರ ಕೇಳಿದ ಆರು ಪ್ರಶ್ನೆಗಳು ... 1. ಈ ಲೋಕದಲ್ಲಿ ಅದ್ವಿತಿಯನಾದ ದೇವರು ಯಾರು ? 2. ಇಡೀ ಲೋಕ ಯಾವ ದೇವನಾಮವನ್ನು ಏಕ ರೂಪವಾಗಿ ಪಾರಾಯಣ ಮಾಡುತ್ತದೆ? 3. ಶುಭವನ್ನು ಹೊಂದಲು ಯಾವ ದೇವರನ್ನು ಅಚಿ೯ಸಬೇಕು? 4. ಶ್ರೇಷ್ಠ ಧರ್ಮ ಯಾವುದು? 5, ಸರ್ವೋನ್ನತ ಸಿದ್ಧಿಗೆ ಯಾವ ಮಂತ್ರ ಮೂಲ ? 6. ಯಾವ ಮಂತ್ರವನ್ನು ಜಪಿಸುತ್ತಾ ಮಾನವನು ಜನ್ಮ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ?. ಇದಕ್ಕೆ ಬೀಷ್ಮರ ಉತ್ತರ ಇಡೀ ಆಕಾಶ ನಕ್ಷತ್ರಗಳಿಗೆ ಒಬ್ಬನೇ ದೇವರು ಅವನೇ ವಿ...